ABVP ಕಾರ್ಯಕರ್ತನಾಗಿದ್ದ ರೇವಂತ್ ರೆಡ್ಡಿ ಈಗ ತೆಲಂಗಾಣ ಸಿ.ಎಂ ಹುದ್ದೆಯತ್ತ! – ಈ ರೇವಂತ್ ರೆಡ್ಡಿಯ ಹಿನ್ನೆಲೆ ಏನು ಗೊತ್ತಾ?

ABVP ಕಾರ್ಯಕರ್ತನಾಗಿದ್ದ ರೇವಂತ್ ರೆಡ್ಡಿ ಈಗ ತೆಲಂಗಾಣ ಸಿ.ಎಂ ಹುದ್ದೆಯತ್ತ! – ಈ ರೇವಂತ್ ರೆಡ್ಡಿಯ ಹಿನ್ನೆಲೆ ಏನು ಗೊತ್ತಾ?

ನ್ಯೂಸ್ ಆ್ಯರೋ : ಆತ ಸರ್ವೇ ಸಾಮಾನ್ಯ ವ್ಯಕ್ತಿ. ಶ್ರೀಮಂತ ಹಿನ್ನಲೆಯಿಲ್ಲ, ಕೋಟಿಗಟ್ಟಲೆ ಆಸ್ತಿ ಅಂತಸ್ತಿಲ್ಲ, ರಾಜಕೀಯ ಪ್ರಭಾವವಿಲ್ಲ. ಆದರೆ ಏನು ಇಲ್ಲದ ಆ ಸಾಮಾನ್ಯ ವ್ಯಕ್ತಿಯೇ ರಾಜ್ಯವೊಂದರ ಮುಖ್ಯಮಂತ್ರಿ ಆಗುತ್ತಿದ್ದಾನೆ.

ಇಂತಹದ್ದೊಂದು ಘಟನೆ ಮೊನ್ನೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಘಟಿಸಿದೆ. ABVP ಕಾರ್ಯಕರ್ತನಾಗಿದ್ದ ರೇವಂತ್ ರೆಡ್ಡಿ ಇದೀಗ ತೆಲಂಗಾಣ ರಾಜ್ಯದ ಸಿಎಂ ಹುದ್ದೆಯತ್ತ ದಾಪುಗಾಲಿಡುತ್ತಿದ್ದಾರೆ. ಈ ಸಾಹಸಿಗನ ರೋಚಕ‌‌ ಹಿನ್ನಲೆ‌ ಇಲ್ಲಿದೆ ನೋಡಿ.

2015ರಲ್ಲಿ ಜೈಲು‌ ಸೇರಿದ್ದ ರೇವಂತ್ ರೆಡ್ಡಿ!

ತೆಲಂಗಾಣ ರಾಜ್ಯದ ಕುಗ್ರಾಮದಲ್ಲಿ ಜನಿಸಿದ್ದ ರೇವಂತ್ ರೆಡ್ಡಿ ABVP ಮೂಲಕ ಮುನ್ನೆಲೆಗೆ ಬಂದವರು. ವಿದ್ಯಾರ್ಥಿಯಾಗಿದ್ದಾಗ ಹಲವಾರು ಹೋರಾಟ, ಪ್ರತಿಭಟನೆಯಲ್ಲಿ ತೊಡಗಿದ್ದವರು. 2015ರಲ್ಲಿ ತೆಲುಗರ‌ ನಾಡಿನಲ್ಲಿ ದೊಡ್ಡ ಸಂಚಲನ‌ ಸೃಷ್ಟಿಸಿದ್ದ, ‘ಮತಕ್ಕಾಗಿ ನಗದು’ ಪ್ರಕರಣದಲ್ಲಿ ರೇವಂತ್ ಅವರನ್ನು ಬಂಧಿಸಲಾಗಿತ್ತು.

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ “ಏಜೆಂಟ್” ಎಂದು ಆರೋಪಿಸಿ ಪಕ್ಷಗಳನ್ನು ಬದಲಾಯಿಸಿದ್ದಕ್ಕಾಗಿ ಬಿಆರ್ ಎಸ್ ನಾಯಕರು ನಿರಂತರ ಟೀಕೆ ಮಾಡುತ್ತಿದ್ದರು. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರಂತೂ ರೇವಂತ್ ಅವರ ಎಬಿವಿಪಿ ಹಿನ್ನೆಲೆಯನ್ನು ಗುರಿಯಾಗಿಸಿ ನಿರಂತರ ವಾಗ್ದಾಳಿ ನಡೆಸುತ್ತಿದ್ದರು.

2017ರಲ್ಲಿ ವಿಧಾನ ಪರಿಷತ್ ಪ್ರವೇಶ!

ಬಿಆರ್‌ಎಸ್‌ನಲ್ಲಿ ನಲ್ಲಿ ಇದ್ದ ರೆಡ್ಡಿ ಅವರು 2016 ರಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಯಶಸ್ವಿಯಾದಾಗ ಮೊದಲು ರಾಜಕೀಯ ಕಚೇರಿಗೆ ಆಯ್ಕೆಯಾದರು. ಅವರು ಜಿಲ್ಲಾ ಪರಿಷತ್ತಿನ ಪ್ರಾದೇಶಿಕ ಕ್ಷೇತ್ರ ಸದಸ್ಯರಾಗಿ ನಂತರ ಸ್ವತಂತ್ರರಾಗಿ ಆಯ್ಕೆಯಾದರು. ಅವರು 2017 ರಲ್ಲಿ ಸ್ವತಂತ್ರವಾಗಿ ಅವಿಭಜಿತ ಆಂಧ್ರಪ್ರದೇಶದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ರೇವಂತ್ ರೆಡ್ಡಿ ಮುನ್ನೆಲೆಗೆ ಬಂದರು.

ಸಿಎಂ ಆಗುತ್ತಾರಾ ರೇವಂತ್ ರೆಡ್ಡಿ?

ಆ ಬಳಿಕ ರೇವಂತ್ ರೆಡ್ಡು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಪ್ತರಾಗಿ ಗುರುತಿಸಿಕೊಂಡರು. ಪದವೀಧರರಾದ ರೆಡ್ಡಿ ಅವರು 2009 ರಲ್ಲಿ ಟಿಡಿಪಿ ಟಿಕೆಟ್‌ನಲ್ಲಿ ವಿಧಾನಸಭೆಗೆ ಆಯ್ಕೆಯಾದರು ಮತ್ತು ನಂತರ 2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ವಿಭಜನೆಯಾದ ಬಳಿಕ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಅಭ್ಯರ್ಥಿಯ ವಿರುದ್ಧ ಸೋತು ಸ್ವಲ್ಪ ಸಮಯ ರಾಜಕೀಯ ವನವಾಸ ಅನುಭವಿಸಿದರು.

ಬಳಿಕ ಟಿಡಿಪಿ ತೊರೆದು 2017-18ರಲ್ಲಿ ದೆಹಲಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದರು.ಇದೀಗ ಸಿಎಂ ಹುದ್ದೆಗೆ ರೇವಂತ್ ರೆಡ್ಡಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ನಾಳೆಯೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *