ಮದ್ಯ ಪ್ರಿಯರ ‘ಅಮಲು’ ಇಳಿಸಿದ ರಾಜ್ಯ ಸರಕಾರ – ಜು. 20 ರಿಂದ ಬೆಲೆ ಏರಿಕೆ, ಯಾವುದಕ್ಕೆಲ್ಲ ಎಷ್ಟು ಏರಿಕೆಯಾಗಿದೆ ಗೊತ್ತಾ?

ಮದ್ಯ ಪ್ರಿಯರ ‘ಅಮಲು’ ಇಳಿಸಿದ ರಾಜ್ಯ ಸರಕಾರ – ಜು. 20 ರಿಂದ ಬೆಲೆ ಏರಿಕೆ, ಯಾವುದಕ್ಕೆಲ್ಲ ಎಷ್ಟು ಏರಿಕೆಯಾಗಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ಇತ್ತೀಚೆಗೆ ರಾಜ್ಯ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮದ್ಯ ದರ ಏರಿಸುವ ಕುರಿತು ಪ್ರಸ್ತಾವ ಮಂಡಿಸಿದ್ದರು. ಅದರಂತೆ ಮದ್ಯದ ಮೇಲಿನ (CM hikes excise duty) ಸುಂಕದ ಬೆಲೆ ಏರಿಕೆ ಜು. 20ರಿಂದ ಜಾರಿಗೆ (liquor prices to surge) ಬರಲಿದೆ.

ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ

ಮದ್ಯದ ಮೇಲಿನ ಸುಂಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರಕಾರ ಸೋಮವಾರ ಕರಡು ಪ್ರಕಟಿಸಿದ್ದು, ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಸೇರಿದಂತೆ ಭಾರತೀಯ ಮದ್ಯದ ಮೇಲೆ ಶೇ. 20ರಷ್ಟು ದರ ಏರಿಕೆಯಾಗಲಿದೆ.

ಅದೇ ರೀತಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ. 10ರಷ್ಟು ಹೆಚ್ಚಿಸುವ ಬಗ್ಗೆ ಸೂಚನೆ ನೀಡಲಾಗಿತ್ತು. ಇದು ಜಾರಿಗೆ ಬಂದರೆ ಬಿಯರ್ ಬೆಲೆ ಪ್ರತಿ ಬಾಟಲ್ ಗೆ 3 ರಿಂದ 5 ರೂ. ಹೆಚ್ಚಾಗಲಿದೆ.

ಯಾವ ಬ್ರ್ಯಾಂಡ್ ಗೆ ಎಷ್ಟು ಹೆಚ್ಚಳ?

*ಹೈವಾರ್ಡ್ಸ್ -10 ರೂ. ಹೆಚ್ಚಳ(70 ರೂ.ಯಿಂದ 80 ರೂ.)
*ಬಡ್ ವೈಸರ್ -20 ರೂ. ಹೆಚ್ಚಳ(220 ರೂ.ಯಿಂದ 240 ರೂ.)
*ಕಿಂಗ್ ಫಿಷರ್ ಪ್ರಿಮಿಯಂ -20 ರೂ. ಹೆಚ್ಚಳ(170 ರೂ. ಯಿಂದ 190 ರೂ.)
*ಬ್ಯಾಗ್ ಪೈಪರ್ ವಿಸ್ಕಿ -14 ರೂ. ಹೆಚ್ಚಳ(106 ರೂ.ಯಿಂದ 120 ರೂ.)
*ಬ್ಲ್ಯಾಕ್ & ವೈಟ್-336 ರೂ. ಹೆಚ್ಚಳ(2,464 ರೂ.ಯಿಂದ 2,800 ರೂ.)
*ಓಲ್ಡ್ ಮಂಕ್ -18 ರೂ. ಹೆಚ್ಚಳ(137 ರೂ.ಯಿಂದ 155 ರೂ.)
*ಇಂಪಿರಿಯಲ್ ಬ್ಲ್ಯೂ -20 ರೂ. ಹೆಚ್ಚಳ(220 ರೂ.ಯಿಂದ 240 ರೂ.)
*ಜಾನಿ ವಾಕರ್ ಬ್ಲ್ಯಾಕ್ ಲೇಬಲ್ -900 ರೂ. ಹೆಚ್ಚಳ(6,250 ರೂ.ಯಿಂದ 7,150 ರೂ.).

ದುಬಾರಿ ರಾಜ್ಯ

ಸುಂಕ ಹೆಚ್ಚಳದೊಂದಿಗೆ ಕರ್ನಾಟಕವು ಪ್ರೀಮಿಯಂ ಮದ್ಯದ ಬ್ರ್ಯಾಂಡ್ ಗಳಿಗೆ ದೇಶದ ಅತ್ಯಂತ ದುಬಾರಿ ರಾಜ್ಯವಾಗಿ ಹೊರ ಹೊಮ್ಮಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೆಲವು ಕಡಿಮೆ ಬೆಲೆಯ ಬ್ರ್ಯಾಂಡ್ ಗಳಿಗೂ ಇಲ್ಲಿ ದರ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

ಸ್ಲ್ಯಾಬ್ ಹೊರತುಪಡಿಸಿ ಇತರ ಎಲ್ಲಾ ಬ್ರ್ಯಾಂಡ್ ಗಳು ಕರ್ನಾಟಕದಲ್ಲಿ ದುಬಾರಿಯಾಗಲಿದೆ. ಶೇ. 78ರಷ್ಟು ಮಂದಿ ಕಡಿಮೆ ಬೆಲೆಯ ಬ್ರ್ಯಾಂಡ್ ನ ಬಿಯರ್ ಖರೀದಿಸಿದರೆ, ಶೇ. 5ರಷ್ಟು ಮಂದಿ ಉನ್ನತ ಬ್ರ್ಯಾಂಡ್ ನ ಬಿಯರ್ ಖರೀದಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಬಿಯರ್ ಬೆಲೆ ಏರಿಕೆಯಲ್ಲಿ ನಮ್ಮ ರಾಜ್ಯಕ್ಕೆ ಮೂರನೇ ಸ್ಥಾನ. ಇದಕ್ಕೆ ತಮಿಳುನಾಡಿನಲ್ಲಿ 210 ರೂ., ದಿಲ್ಲಿಯಲ್ಲಿ 190 ರೂ. ಮತ್ತು ಕರ್ನಾಟಕದಲ್ಲಿ 187 ರೂ. ಇದೆ. ಇದರಿಂದ ಕರ್ನಾಟಕಕ್ಕೆ ನಷ್ಟವಾಗಲಿದ್ದು, ಗ್ರಾಹಕರು ಕಡಿಮೆ ಬೆಲೆ ಇರುವ ರಾಜ್ಯಗಳತ್ತ ಮುಖ ಮಾಡಬಹುದು ಎನ್ನುವ ಲೆಕ್ಕಾಚಾರವಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *