52 ವರ್ಷಗಳ ಹಳೆಯ ಥಿಯೇಟರ್ ಖರೀದಿಸಿದ ನಯನತಾರಾ – ಲೇಡಿ ಸೂಪರ್ ಸ್ಟಾರ್ ಪ್ಲ್ಯಾನ್ ಏನು?

52 ವರ್ಷಗಳ ಹಳೆಯ ಥಿಯೇಟರ್ ಖರೀದಿಸಿದ ನಯನತಾರಾ – ಲೇಡಿ ಸೂಪರ್ ಸ್ಟಾರ್ ಪ್ಲ್ಯಾನ್ ಏನು?

ನ್ಯೂಸ್ ಆ್ಯರೋ‌ : ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯ, ನಿರ್ಮಾಣ ಮಾತ್ರವಲ್ಲ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಸ್ಕಿನ್ ಕೇರ್ ಪ್ರಾಡೆಕ್ಟ್ ಆರಂಭಿಸಿದ ನಟಿ ಇದೀಗ ಚೆನ್ನೈಯಲ್ಲಿರುವ ಸುಮಾರು 52 ವರ್ಷಗಳ ಹಳೆಯ ಚಿತ್ರಮಂದಿರವನ್ನು ಖರೀದಿಸಿದ್ದಾರೆ.

ನಯನಾತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಉತ್ತರ ಚೆನ್ನೈನಲ್ಲಿರುವ ಅಗಸ್ತ್ಯ ಥಿಯೇಟರ್ ಅನ್ನು ತಮ್ಮ ನಿರ್ಮಾಣ ಕಂಪೆನಿ ರೌಡಿ ಪಿಕ್ಚರ್ಸ್ ಮೂಲಕ ಖರೀದಿಸಿದ್ದಾರೆ. ಇದು ಅವರು ಚೆನ್ನೈನಲ್ಲಿ ಖರೀದಿಸಿದ ಮೊದಲ ಆಸ್ತಿ. ಅಗಸ್ತ್ಯ ಥಿಯೇಟರ್ ಐದು ದಶಕಗಳ ಬಳಿಕ ನಯನತಾರಾ ತೆಕ್ಕೆಗೆ ಬಂದಿದೆ.

ದೇವಿ ಥಿಯೇಟರ್ ಗ್ರೂಪ್ ಒಡೆತನದ ಅಗಸ್ತ್ಯ ಥಿಯೇಟರ್ 1967ರಿಂದ ಉತ್ತರ ಚೆನ್ನೈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಎಂಜಿಆರ್, ಶಿವಾಜಿ ಗಣೇಶನ್ ಅವರಿಂದ ಹಿಡಿದು ರಜನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ವಿಜಯ್ ಮುಂತಾದ ತಮಿಳು ಚಿತ್ರರಂಗದ ಸ್ಟಾರ್ ನಟರ ಚಲನಚಿತ್ರಗಳನ್ನು ಪ್ರದರ್ಶಿಸಿದ ಈ ಥಿಯೇಟರ್ ಅನ್ನು 2020ರಲ್ಲಿ ಮುಚ್ಚಲಾಯಿತು.

ಯೋಜನೆ ಏನು?

ಅನೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಲಾಕ್‌ಡೌನ್‌ ಬಳಿಕ ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲಿ ಅಗಸ್ತ್ಯ ಥಿಯೇಟರ್ ಕೂಡ ಒಂದು. ಸದ್ಯ ಅದನ್ನು ಖರೀದಿಸಿರುವ ನಯನತಾರಾ ನವೀಕರಿಸಿ ಎರಡು ಸ್ಕ್ರೀನ್ ಆಗಿ ಪರಿವರ್ತಿಸಿ ದೊಡ್ಡ ಮಟ್ಟದಲ್ಲಿ ಹೈಫೈ ಆಗಿ ಮಾರ್ಪಡಿಸಲಿದ್ದಾರೆ ಎನ್ನಲಾಗಿದೆ.

ಸದ್ಯದ ಪ್ರಾಜೆಕ್ಟ್

ದಕ್ಷಿಣ ಭಾರತದ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿದ ನಯನತಾರಾ ಕಳೆದ ವರ್ಷ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಅವರು ಮೊದಲ ಬಾರಿ ಬಾಲಿವುಡ್‍ಗೆ ಪ್ರವೇಶಿಸಿದ್ದು ಶಾರುಖ್ ಖಾನ್ ಜೊತೆ ‘ಜವಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದೆ ನಯನತಾರಾ ಜೊತೆ ‘ರಾಜ ರಾಣಿ’, ‘ಬಿಗಿಲ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಅಟ್ಲೀ ಇದನ್ನು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ನಾಲ್ಕು ತಮಿಳು ಚಿತ್ರಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *