2 ಸಾವಿರ ರೂಪಾಯಿ ನೋಟ್ ಬ್ಯಾನ್ ಹಿನ್ನೆಲೆ – ಚಿನ್ನ, ಎಲೆಕ್ಟ್ರಾನಿಕ್ ವಸ್ತುಗಳಿಗೆ ದಿಢೀರ್ ಡಿಮ್ಯಾಂಡ್ : ಯಾಕೆ ಗೊತ್ತಾ?

2 ಸಾವಿರ ರೂಪಾಯಿ ನೋಟ್ ಬ್ಯಾನ್ ಹಿನ್ನೆಲೆ – ಚಿನ್ನ, ಎಲೆಕ್ಟ್ರಾನಿಕ್ ವಸ್ತುಗಳಿಗೆ ದಿಢೀರ್ ಡಿಮ್ಯಾಂಡ್ : ಯಾಕೆ ಗೊತ್ತಾ?

ನ್ಯೂಸ್ ಆ್ಯರೋ‌ : 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಯಿಂದ ಹಿಂತೆಯುವ ಘೋಷಣೆ ಮಾಡಿದ್ದು, ಸೆ. 30ರ ವರೆಗೆ ಬದಲಾಯಿಸಲು ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ ಹಲವರು ತಮ್ಮ ಬಳಿ ಇರುವ ನೋಟುಗಳ ಮೂಲಕ ಚಿನ್ನ, ಬೆಳ್ಳಿ ಸೇರಿದಂತೆ ಐಷಾರಾಮಿ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ.

2 ಸಾವಿರ ರೂ. ನೋಟು ಇದ್ದವರು ಚಿನ್ನ, ಪೀಠೋಪಕರಣ, ದುಬಾರಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಗೆ ಆಸಕ್ತಿ ತೋರಿದ್ದಾರೆ. ದಿಲ್ಲಿಯಲ್ಲಿರುವ ಜನಪ್ರಿಯ ಬ್ರ್ಯಾಂಡ್‍ನ ಚಿನ್ನಾಭರಣ ಮಳಿಗೆಯೊಂದಕ್ಕೆ ಶನಿವಾರ ಆಗಮಿಸಿದ್ದ ಗ್ರಾಹಕರೊಬ್ಬರು 2 ಸಾವಿರ ರೂ. ಮುಖಬೆಲೆಯ 5 ಲಕ್ಷ ರೂ. ನಗದು ನೀಡಿ ಚಿನ್ನ ಖರೀದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಇದು ಸಣ್ಣ ಉದಾಹರಣೆಯಷ್ಟೇ. ದೇಶಾದ್ಯಂತ ಚಿನ್ನಾಭರಣ ಮಳಿಗೆಗಳಿಗೆ ಜನರು ಹೀಗೆ ಮುಗಿಬಿದ್ದಿದ್ದಾರೆ ಎಂದಿದೆ.

ದುಬಾರಿ ಬೆಲೆಯ ಐಷಾರಾಮಿ ಸೋಫಾ ಸೆಟ್ ಸೇರಿದಂತೆ ಹಲವು ವಸ್ತುಗಳಿಗೂ ಬೇಡಿಕೆ ಹೆಚ್ಚಾಗಿದೆ. ಐಫೋನ್, ಐಪಾಡ್ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನೂ 2 ಸಾವಿರ ರೂ. ಮುಖಬೆಲೆ ನೋಟುಗಳನ್ನು ನೀಡಿ ಖರೀದಿಗೆ ಗ್ರಾಹಕರು ಮುಂದಾಗಿದ್ದಾರೆ. ಬ್ಯಾಂಕ್‌ಗಳಿಗೆ ಹೋಗಿ ನಗದು ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ದಾಖಲೆ ನೀಡಬೇಕಾಗುತ್ತದೆ. ಆಗ ತಮ್ಮ ಬಳಿ ಇರುವ ಹಣದ ಮೂಲದ ಬಗ್ಗೆ ಮಾಹಿತಿ ಒದಗಿಸಬೇಕಾದ ಪ್ರಸಂಗ ಎದುರಾಗಬಹುದು ಎನ್ನುವ ಕಾರಣಕ್ಕೆ ಜನರು ದುಬಾರಿ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯುವುದಾಗಿ ಹೇಳಿತ್ತು. ಒಂದು ಬಾರಿ ಗ್ರಾಹಕರು 10 ನೋಟುಗಳನ್ನು ಮಾತ್ರ ಬದಲಿಸಬಹುದು. ಅಂದರೆ 20 ಸಾವಿರ ರೂ.ವರೆಗೆ ಮಾತ್ರ ನೋಟು ಬದಲಾಯಿಸಲು ಸಾಧ್ಯ ಎಂದು ಹೇಳಿರುವುದರಿಂದ ಜನರು ಆದಷ್ಟು ಬೇಗ ಇವುಗಳ ಬದಲಾವಣೆಗೆ ಮುಗಿಬಿದ್ದಿದ್ದಾರೆ.

Related post

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…

Leave a Reply

Your email address will not be published. Required fields are marked *