ನಿಮ್ಮ ವಾಟ್ಸಾಪ್ ಚಾಟ್ ನ್ನು ಹೈಡ್ ಮಾಡಬಹುದು – ಈ ಸಿಂಪಲ್ ಟ್ರಿಕ್ಸ್ ಬಳಸಿ…

ನಿಮ್ಮ ವಾಟ್ಸಾಪ್ ಚಾಟ್ ನ್ನು ಹೈಡ್ ಮಾಡಬಹುದು – ಈ ಸಿಂಪಲ್ ಟ್ರಿಕ್ಸ್ ಬಳಸಿ…

ನ್ಯೂಸ್ ಆ್ಯರೋ‌ : ಫೇಸ್ ಬುಕ್ ಮಾಲೀಕತ್ವದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಈಗಾಗಲೇ ಸೆಕ್ಯುರಿಟಿ ಫೀಚರ್ ಅನ್ನು ತನ್ನ ಚಾಟ್ ಆ್ಯಪ್ ಗೆ ನೀಡಿದೆ. ಫೇಸ್ ಐಡಿ ಮತ್ತು ಪಾಸ್ ಕೋಡ್ ಬಳಸಿ ತಮ್ಮ ವಾಟ್ಸ್ಆ್ಯಪ್ ಚಾಟ್ ಗಳನ್ನು ಇತರರು ನೋಡದಂತೆ ರಕ್ಷಣೆ ಮಾಡಿಕೊಳ್ಳಬಹುದು.

ಹೌದು, ಈ ಫೀಚರ್ ಮುಖಾಂತರ ನೀವು ನಿಮ್ಮ ಚಾಟ್ ಸ್ಕ್ರೀನ್ ಅನ್ನು ಹೈಡ್ ಮಾಡಬಹುದು ಮತ್ತು ಕೆಲವು ಸಮಯದ ನಂತರ ನಿಮಗೆ ಅಗತ್ಯವಿದ್ದಾಗ ಆ ಚಾಟಿನ ಮಾತುಕತೆಗಳನ್ನು ನೋಡುವುದಕ್ಕೆ ಅವಕಾಶವಿರುತ್ತದೆ. ಗ್ರೂಪ್ ಮತ್ತು ವೈಯಕ್ತಿಕ ಚಾಟ್ ಗಳು ಎರಡನ್ನೂ ಕೂಡ ಆರ್ಕೈವ್ ಮಾಡುವುದಕ್ಕೆ ಈ ಫೀಚರ್ ನಲ್ಲಿ ಅವಕಾಶವಿರುತ್ತದೆ.

ನೆನಪಿರಲಿ ಆರ್ಕೈವ್ ಚಾಟ್ ನಿಮ್ಮ ಚಾಟ್ ಅನ್ನು ಡಿಲೀಟ್ ಮಾಡುವುದಿಲ್ಲ ಅಥವಾ ಎಸ್ ಡಿ ಕಾರ್ಡ್ ನಲ್ಲಿ ಬ್ಯಾಕ್ ಅಪ್ ಕೂಡ ಮಾಡುವುದಿಲ್ಲ. ಹಾಗಾದ್ರೆ ಈ ಫೀಚರ್ ನ್ನು ಬಳಕೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಫುಲ್ ಮಾಹಿತಿ.

ಆಂಡ್ರಾಯ್ಡ್ ನಲ್ಲಿ ಹೇಗೆ ಆರ್ಕೈವ್ ಚಾಟ್ ಮಾಡುವುದು ಹೇಗೆ?

ವಾಟ್ಸ್ಆ್ಯಪ್ ಅನ್ನು ತೆರೆದು ಚಾಟ್ ಸ್ಕ್ರೀನಿನಲ್ಲಿ, ನೀವು ಹೈಡ್ ಮಾಡಬೇಕು ಎಂದು ಬಯಸುವ ಚಾಟ್ ಅನ್ನು ಟ್ಯಾಪ್ ಮಾಡಿ ಮತ್ತು ಹೋಲ್ಡ್ ಮಾಡಿ. ಮೇಲ್ಬಾಗದ ಬಾರ್ ನಲ್ಲಿ ಆರ್ಕೈವ್ ಐಕಾನ್ ಅನ್ನು ಸೆಲೆಕ್ಟ್ ಮಾಡಿ. ಇದೀಗ ಚಾಟ್ ಆರ್ಕೈವ್ ಆಗುತ್ತದೆ ಮತ್ತು ನೀವು ನಿಮ್ಮ ಚಾಟ್ ಸ್ಕ್ರೀನಿನಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ನೀವು ಚಾಟ್ ಸ್ಕ್ರೀನಿನ ಕೆಳಭಾಗದಲ್ಲಿ ಎಲ್ಲಾ ಆರ್ಕೈವ್ ಆಗಿರುವ ಚಾಟ್ ಗಳನ್ನು ಹುಡುಕಬಹುದು.

ಐಫೋನಿನಲ್ಲಿ ಆರ್ಕೈವ್ ಚಾಟ್ ಮಾಡುವುದು ಹೇಗೆ?

ವಾಟ್ಸ್ ಆಪ್ ನ್ನು ತೆರೆಯಿರಿ ಮತ್ತು ಚಾಟ್ ಸ್ಕ್ರೀನಿನಲ್ಲಿ ನೀವು ಆರ್ಕೈವ್ ಮಾಡಬೇಕು ಎಂದಿರುವ ಚಾಟಿನಲ್ಲಿ ಬಲದಿಂದ ಎಡಕ್ಕೆ ನಿಮ್ಮ ಬೆರಳನ್ನು ಸ್ಲೈಡ್ ಮಾಡಿ. ಆರ್ಕೈವ್ ಅನ್ನು ಟ್ಯಾಪ್ ಮಾಡಿ. ಐಫೋನಿನಲ್ಲಿ ಆರ್ಕೈವ್ ಚಾಟ್ ಅನ್ನು ನೋಡುವುದಕ್ಕೆ ಮೇಲ್ಬಾಗವನ್ನು ಸ್ಕ್ರೋಲ್ ಮಾಡಿ ಮತ್ತು ನಂತರ ಕೆಳಭಾಗಕ್ಕೆ ಪುಲ್ ಮಾಡಿ.

ಆರ್ಕೈವ್ ಆಗಿರುವ ಚಾಟ್ ನ್ನು ಅನ್ ಆರ್ಕೈವ್ ಮಾಡುವುದು ಹೇಗೆ?
ಆಂಡ್ರಾಯ್ಡ್ ನಲ್ಲಿ ಚಾಟ್ ಅನ್ನು ಅನ್ ಆರ್ಕೈವ್ ಮಾಡಲು ಚಾಟ್ ಸ್ಕ್ರೀನ್ ನ್ನು ಸ್ಕ್ರೋಲ್ ಡೌನ್ ಮಾಡಿ. ಆರ್ಕೈವ್ಡ್ ಚಾಟ್ಸ್ ನ್ನು ಟ್ಯಾಪ್ ಮಾಡಿ. ನೀವು ಅನ್ ಆರ್ಕೈವ್ ಮಾಡಬೇಕು ಎಂದುಕೊಂಡಿರುವ ಚಾಟ್ ನ್ನು ಟ್ಯಾಪ್ ಮಾಡಿ ಮತ್ತು ಹೋಲ್ಡ್ ಮಾಡಿ. ಟಾಪ್ ಬಾರ್ ನಲ್ಲಿ ಅನ್ ಆರ್ಕೈವ್ ನ್ನು ಸೆಲೆಕ್ಟ್ ಮಾಡಿದರೆ ಆಯಿತು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *