ರಸ್ತೆಗಿಳಿದಿದೆ 1.7 ಟನ್ ತೂಕ ಒಯ್ಯಬಲ್ಲ ಬೊಲೆರೊ ಮ್ಯಾಕ್ಸ್ ಪಿಕ್ ಅಪ್ – ಇದರ ಫೀಚರ್ಸ್ ಹೇಗಿದೆ? ಬೆಲೆ ಎಷ್ಟು?

ರಸ್ತೆಗಿಳಿದಿದೆ 1.7 ಟನ್ ತೂಕ ಒಯ್ಯಬಲ್ಲ ಬೊಲೆರೊ ಮ್ಯಾಕ್ಸ್ ಪಿಕ್ ಅಪ್ – ಇದರ ಫೀಚರ್ಸ್ ಹೇಗಿದೆ? ಬೆಲೆ ಎಷ್ಟು?

ನ್ಯೂಸ್‌ ಆ್ಯರೋ : ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ಏಪ್ರಿಲ್ 25ರಂದು ಬೊಲೆರೊ ಮ್ಯಾಕ್ಸ್ ಪಿಕ್ಅಪ್ ವಾಹನವನ್ನು ಭಾರತದ ರಸ್ತೆಗಿಳಿಸಿದೆ. 1.3 ಟನ್ನಿಂದ 2 ಟನ್ ಲೋಡ್ ಸಾಗಿಸಬಹುದಾದ ಈ ಪಿಕ್ಅಪ್ ವಾಹನ ಎಚ್ಡಿ ಹಾಗೂ ಸಿಟಿ ಎಂಬ ಎರಡು ಸೀರಿಸ್ನಲ್ಲಿ ಲಭ್ಯವಿದೆ. 7.85 ಲಕ್ಷ ರೂಪಾಯಿ (ಎಕ್ಸ್ ಶೋರೂಮ್) ಆರಂಭಿಕ ಬೆಲೆ ನಿಗದಿ ಮಾಡಲಾಗಿದ್ದು, ಗ್ರಾಹಕರು 24,999 ರೂಪಾಯಿ ಡೌನ್ಪೇಮೆಂಟ್ ಮಾಡುವ ಮೂಲಕ ಬುಕ್ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

2023ನೇ ಆವೃತ್ತಿಯ ಬೊಲೆರೊ ಮ್ಯಾಕ್ಸ್ ಪಿಕ್ ಅಪ್ ನ ಎರಡು ಸೀರಿಸ್ಗಳು ಇಂತಿವೆ. ಎಚ್ಡಿ ಸೀರಿಸ್ನಲ್ಲಿ 2.0 ಲೀಟರ್, 1.7 ಲೀಟರ್, 1.3 ಲೀಟರ್ ಆಯ್ಕೆಯಿದ್ದರೆ, ಸಿಟಿ ಸೀರಿಸ್ ನಲ್ಲಿ 1.3, 1.4, 1.5 ಹಾಗೂ ಸಿಜಿ ಸಿಎನ್ಜಿ ಎಂಬ ಆಯ್ಕೆಯನ್ನು ನೀಡಲಾಗಿದೆ. ಈ ರೇಂಜ್ ನ ಪಿಕ್ ಅಪ್ ನಲ್ಲಿ ಬೇರೆಬೇರೆ ಪ್ಲೇಲೋಡ್ ಆಯ್ಕೆಯೂ ಇದೆ. ಗರಿಷ್ಠ 3050 ಎಮ್ಎಮ್ ಉದ್ದದ ಕಾರ್ಗೊ ಬೆಡ್ ಕೂಡ ನೀಡಲಾಗಿದೆ.

ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಲ್ಲ ಡ್ರೈವರ್ ಸೀಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 20 ಸಾವಿರ ಕಿಲೋ ಮೀಟರ್ ಸರ್ವಿಸ್ ಇಂಟರ್ವಲ್ ಹಾಗೂ ಎಲ್ಇಡಿ ಟೇಲ್ ಲ್ಯಾಂಪ್ಗಳನ್ನು ನೀಡಲಾಗಿದೆ. ಅದೇ ರೀತಿ iMAXX ಕನೆಕ್ಟೆಡ್ ಸೊಲ್ಯುಶನ್ ಕೂಡ ನೀಡಲಾಗಿದ್ದು 50 ಫೀಚರ್ ಗಳನ್ನು ನೀಡಲಾಗಿದೆ. ರೂಟ್ ಪ್ಲಾನಿಂಗ್, ವೆಚ್ಚ ನಿರ್ವಹಣೆ, ವೆಹಿಕಲ್ ಟ್ರ್ಯಾಕಿಂಗ್, ಹೆಲ್ತ್ ಮಾನಿಟರಿಂಗ್ ಹಾಗೂ ಜಿಯೊ ಫೆನ್ಸಿಂಗ್ ಇದರಲ್ಲಿ ಸೇರಿಕೊಂಡಿದೆ.

ಮಹಿಂದ್ರಾ ಬೊಲೆರೊ ಮ್ಯಾಕ್ಸ್ಪಿಕ್ಅಪ್ ವಾಹನ m2Di ಫೋರ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಗರಿಷ್ಠ 80 ಬಿಎಚ್ಪಿ ಪವರ್ ಹಾಗೂ 200 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್ ನ ಗೇರ್ ಬಾಕ್ಸ್ ಇದೆ.

ಇದು ಬೊಲೆರೊ ಮ್ಯಾಕ್ಸ್ಪಿಕ್ ಅಪ್ ನಲ್ಲಿ ಗರಿಷ್ಠ ಲೋಡ್ ಸಾಗಾಟ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿ 3050 ಕಾರ್ಗೊ ಬೆಡ್ ಇದ್ದು ಗರಿಷ್ಠ 2 ಟನ್ ಲೋಡ್ ಸಾಗಿಸಬಹುದು. ಈ ಪಿಕ್ಅಪ್ ಗೆ 7ಆರ್16 ಟೈರ್ ಬಳಸಲಾಗಿದೆ.

ಇದು 3050 ಎಮ್ಎಮ್ ಕಾರ್ಗೊ ಬೆಡ್ ಹೊಂದಿದೆ. ಇದರಲ್ಲಿ ಕ್ರಮವಾಗಿ 1.7 ಟನ್ ಹಾಗೂ 1.3 ಟನ್ ಸರಕು ಸಾಗಿಸಲು ಸಾಧ್ಯವಿದೆ.

ಸಿಟಿ ಸೀರಿಸ್ನ ಬೊಲೆರೊ ಮ್ಯಾಕ್ಸ್ಪಿಕ್ ಅಪ್ 1.5 ಹಾಗೂ 1.4 ಟನ್ ಪ್ಲೇಲೋಡ್ ಸಾಮರ್ಥ್ಯ ಹೊಂದಿದ್ದು, 17.2 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಇದರ ಕಾರ್ಗೊ ಬೆಡ್ 2,640 ಎಮ್ಎಮ್ ಉದ್ದವಿದೆ.

ಸಿಟಿ ಸೀರಿಸ್ ನ ಈ ಮಹಿಂದ್ರಾ ಬೊಲೆರೊ ಮ್ಯಾಕ್ಸ್ ಪಿಕ್ಅಪ್ ನಲ್ಲಿ 1.3 ಟನ್ ಸರಕು ಸಾಗಾಟ ಮಾಡಬಹುದು. ಇದು 2500 ಎಮ್ಎಮ್ ಕಾರ್ಗೊ ಬೆಡ್ ಹೊಂದಿದೆ. ಈ ಪಿಕ್ಅಪ್ ಕೂಡ ಲೀಟರ್ ಡೀಸೆಲ್ ಗೆ 17.2 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಇದು ಪರಿಸರ ಸ್ನೇಹಿ ಮ್ಯಾಕ್ಸ್ ಪಿಕ್ಅಪ್ ಆಗಿದೆ. ಇದರ ಪ್ಲೇಲೋಡ್ ಸಾಮರ್ಥ್ಯ 1.2 ಟನ್. ಕಾರ್ಗೊ ಬೆಡ್ 2500 ಎಮ್ಎಮ್ ಉದ್ದವಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *