Bank Loan : ಬ್ಯಾಂಕ್ ಯಾವ ಆಧಾರದಲ್ಲಿ ವೈಯಕ್ತಿಕ ಸಾಲ ಕೊಡುತ್ತೆ? – ಉಪಯುಕ್ತ ಮಾಹಿತಿ ಇಲ್ಲಿದೆ.
- ಹಣಕಾಸು
- May 17, 2023
- No Comment
- 403
ನ್ಯೂಸ್ ಆ್ಯರೋ : ಬ್ಯಾಂಕ್ ಗಳು ಯಾವ ಆಧಾರದ ಮೇಲೆ ವೈಯಕ್ತಿಕ ಸಾಲ ನೀಡುತ್ತವೆ? ಇದಕ್ಕೆ ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ? ಗರಿಷ್ಠ ಎಷ್ಠು ಸಾಲ ತೆಗೆಯಬಹುದು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಬ್ಯಾಂಕ್ ಗಳು ಸಾಮಾನ್ಯವಾಗಿ ಸಾಲಗಾರನ ಆದಾಯವನ್ನು ಪರಿಗಣಿಸುತ್ತವೆ. ನೀವು ವರ್ಷಕ್ಕೆ ಎಷ್ಟು ಸಂಪಾದಿಸುತ್ತೀರಿ ಎನ್ನುವುದನ್ನು ಮೊದಲು ಬ್ಯಾಂಕ್ ಗಮನಿಸುತ್ತದೆ. ಬ್ಯಾಂಕ್ ಗಳು ಸಾಮಾನ್ಯವಾಗಿ ಮಾಸಿಕ ವೇತನದ 60 ರಿಂದ 70 ಪಟ್ಟು ಹೆಚ್ಚಿನ ಸಾಲದ ಮೊತ್ತ ಒದಗಿಸುವ ಸಾಧ್ಯತೆ ಇದೆ. ಕೆಲವು ಬ್ಯಾಂಕ್ ಗಳು ವಾರ್ಷಿಕ ವೇತನದ 6 ಪಟ್ಟು ಹೆಚ್ಚಿನ ಸಾಲ ಒದಗಿಸುತ್ತವೆ. ಈ ಮೊತ್ತ ಬ್ಯಾಂಕ್ ನಿಂದ ಬ್ಯಾಂಕ್ ಗೆ ಬದಲಾಗುತ್ತದೆ.
ಸಾಮಾನ್ಯವಾಗಿ ಬ್ಯಾಂಕ್ ಉದ್ಯೋಗಿಗಳು ಮತ್ತು ವೃತ್ತಿಪರರಿಗೆ 2 ರಿಂದ 3 ಬಾರಿ ಸಾಲ ನೀಡುವ ಅವಕಾಶವಿದೆ. ಮುಖ್ಯವಾದ ವಿಚಾರವೆಂದರೆ ಸ್ಥಿರ ಆದಾಯ ಹೊಂದಿದವರು ಸಾಲ ಪಡೆಯುವ ಸಾಧ್ಯತೆ ಅಧಿಕ.
ಮಾತ್ರವಲ್ಲ ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಉತ್ತಮ ಸ್ಥಿರ ಆದಾಯ ಹೊಂದಿದವರು ಸುಲಭವಾಗಿ ಬ್ಯಾಂಕ್ ಸಾಲ ಪಡೆಯಬಹುದು. ಸಾಲ ಪಡೆಯುವ ಮುನ್ನ ಬಡ್ಡಿ ದರ, ಇ.ಎಂ.ಐ. ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಅಗತ್ಯ.