Gold Loan : ಬೇರೆ ಲೋನ್ ಗಿಂತ ಚಿನ್ನದ ಮೇಲೆ ಪಡೆಯೋ ಸಾಲ ಉತ್ತಮ‌ – ಬ್ಯಾಂಕುಗಳು ಕಡಿಮೆ ಬಡ್ಡಿ ವಿಧಿಸಲು ಕಾರಣವೇನು ಗೊತ್ತಾ..‌!?

Gold Loan : ಬೇರೆ ಲೋನ್ ಗಿಂತ ಚಿನ್ನದ ಮೇಲೆ ಪಡೆಯೋ ಸಾಲ ಉತ್ತಮ‌ – ಬ್ಯಾಂಕುಗಳು ಕಡಿಮೆ ಬಡ್ಡಿ ವಿಧಿಸಲು ಕಾರಣವೇನು ಗೊತ್ತಾ..‌!?

ನ್ಯೂಸ್ ಆ್ಯರೋ : ಚಿನ್ನವನ್ನು ಇಷ್ಟ ಪಡದವರು, ಕೊಳ್ಳಲು ಬಯಸದವರು ಯಾರೂ ಇಲ್ಲ. ಏಕೆಂದರೆ ಚಿನ್ನ ಹೇಗೆ ಪ್ರತಿಷ್ಠೆಯ ಸಂಕೇತವೋ ಹಾಗೆಯೇ ತುರ್ತು ಸಂಧರ್ಭದಲ್ಲಿ ಅಗತ್ಯಕ್ಕೂ ಬರುತ್ತದೆ. ಕೆಲವು ಆರ್ಥಿಕ ತಜ್ಞರು ಪರ್ಸನಲ್ ಲೋನ್ ಪಡೆಯುವುದಕ್ಕಿಂತ ಚಿನ್ನದ ಮೇಲೆ ಸಾಲ ಪಡೆಯುವುದೇ ಉತ್ತಮ ಎನ್ನುತ್ತಾರೆ. ಇದಕ್ಕೆ ಕೆಲವು ಕಾರಣಗಳನ್ನು ಕೂಡ ಅವರು ನೀಡುತ್ತಾರೆ.

ಚಿನ್ನದ ಸಾಲ ಯಾಕೆ ಉತ್ತಮ?

ಚಿನ್ನದ ಸಾಲ ಉತ್ತಮ ಎಂದು ಹೇಳುವ ಆರ್ಥಿಕ ತಜ್ಞರು ಇದಕ್ಕೆ ಹಲವು ಕಾರಣಗಳನ್ನು‌ ನೀಡುತ್ತಾರೆ. ಅವುಗಳೆಂದರೆ, ಬ್ಯಾಂಕ್ ಸಾಲಕ್ಕಿಂತ‌ ಚಿನ್ನಕ್ಕೆ ಕಡಿಮೆ‌ ಬಡ್ಡಿ ವಿಧಿಸುತ್ತದೆ, ಚಿನ್ನದ ದರ ಕಡಿಮೆಯಾಗಿದೆ, ಇತರೆ ಸಾಲಗಳಿಗಿಂತ ಚಿನ್ನದ ಸಾಲ ಉತ್ತಮವಾದುದು, ಅಗತ್ಯಕ್ಕೆ ತಕ್ಕಂತೆ ಚಿನ್ನದ ಸಾಲ ಪಡೆಯಬಹುದು. ಈ ಎಲ್ಲ ಕಾರಣಗಳಿಂದ ಚಿನ್ನದ ಸಾಲ ಉತ್ತಮ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಹಣದ ತುರ್ತು ಅವಶ್ಯಕತೆ ಬಂದೇ ಬರುತ್ತದೆ. ಇಂತಹಾ ಸಂದರ್ಭದಲ್ಲಿ ಪರ್ಸನಲ್ ಲೋನ್ ಪಡೆಯಲು ಮುಂದಾಗುತ್ತಾರೆ. ಆದರೆ ಅಂತಹ‌ ಸಮಯದಲ್ಲಿ ಚಿನ್ನದ ಸಾಲ ಪಡೆಯುವುದು ಹೆಚ್ಚು ಸುರಕ್ಷಿತ. ಇದಕ್ಕೆ ತಕ್ಕಂತೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಚಿನ್ನದ ಸಾಲ ನೀಡುತ್ತಿವೆ. ಈ ಸಾಲದಲ್ಲಿ ನೀವು ತೆಗೆದುಕೊಂಡ ಸಾಲದ ಮೊತ್ತವನ್ನು ಮರುಪಾವತಿ ಮಾಡುವವರೆಗೆ ಬ್ಯಾಂಕ್ ತನ್ನ ಚಿನ್ನವನ್ನು ಒತ್ತೆ ಇಟ್ಟುಕೊಂಡಿರುತ್ತದೆ.

ಕಡಿಮೆ‌ ಬಡ್ಡಿಯಲ್ಲಿ ಚಿನ್ನದ ಸಾಲ ನೀಡುವ ಬ್ಯಾಂಕುಗಳು

ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ ನೀಡುವ ಹಲವು ಬ್ಯಾಂಕುಗಳಿವೆ. ಅವುಗಳಲ್ಲಿ ಪ್ರಮುಖವಾದುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಚಿನ್ನದ ಸಾಲದ ಮೇಲೆ ಶೇಕಡಾ 7 ಬಡ್ಡಿದರವನ್ನು ವಿಧಿಸುತ್ತದೆ. ಈ ಬಡ್ಡಿ ದರ ರೂ. 20,000 ರಿಂದ ರೂ. 50 ಲಕ್ಷ ಅನ್ವಯವಾಗುತ್ತದೆ.
ಇದರೊಂದಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ರೂ. 20 ಲಕ್ಷ ಚಿನ್ನದ ಸಾಲಕ್ಕೆ ಗ್ರಾಹಕರಿಂದ ಶೇ. 7.1 ಬಡ್ಡಿ ವಿಧಿಸುತ್ತದೆ ಎನ್ನಲಾಗಿದೆ.


ಹಾಗೆಯೇ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಂದ ರೂ. 25,000 ಮತ್ತು ರೂ.10 ಲಕ್ಷದವರೆಗಿನ ಸಾಲದ ಮೇಲೆ ಶೇ. 7.70ರಿಂದ ಶೇ. 8.75ರಷ್ಟು ಬಡ್ಡಿ ವಿಧಿಸುತ್ತದೆ. ಬ್ಯಾಂಕ್ ಆಫ್ ಬರೋಡಾ 50 ಲಕ್ಷ ರೂ. ವರೆಗಿನ ಚಿನ್ನದ ಸಾಲಗಳ ಮೇಲೆ ಶೇಕಡಾ 8.85 ಬಡ್ಡಿ ದರವನ್ನು ವಿಧಿಸುವುದರಿಂದ ಚಿನ್ನದ ಮೇಲೆ ಸಾಲ ಪಡೆಯಲು ಈ ಬ್ಯಾಂಕುಗಳು ಉತ್ತಮವಾದುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *