ರೋಮ್ ನಲ್ಲಿ ಪಿಗ್ಗಿ ಜೋನಾಸ್ ಫುಲ್ ರೋಮ್ಯಾನ್ಸ್ – ಪ್ರಿಯಾಂಕಾ ತುಟಿಗೆ ಜೋನಾಸ್ ಸಿಹಿಮುತ್ತು : ವಿಡಿಯೋ ವೈರಲ್…!!

ರೋಮ್ ನಲ್ಲಿ ಪಿಗ್ಗಿ ಜೋನಾಸ್ ಫುಲ್ ರೋಮ್ಯಾನ್ಸ್ – ಪ್ರಿಯಾಂಕಾ ತುಟಿಗೆ ಜೋನಾಸ್ ಸಿಹಿಮುತ್ತು : ವಿಡಿಯೋ ವೈರಲ್…!!

ನ್ಯೂಸ್ ಆ್ಯರೋ‌ : ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ತನಗಿಂತ ಕಿರಿಯವನಾದ ನಿಕ್​ ಜೋನಸ್​ ಜೊತೆ ಮದುವೆಯಾಗಿ ಸಂಸಾರ ಮಾಡುತ್ತಿದ್ದಾರೆ. ಇದೀಗ ಸಿನಿಮಾ ಕೆಲಸಗಳ ಬಿಡುವಿನಲ್ಲಿ ಈ ದಂಪತಿ ಪ್ರವಾಸ ಕೈಗೊಂಡಿದ್ದಾರೆ. ಪ್ರಸ್ತುತ ಈ ಜೋಡಿ ರೋಮ್​ ನಗರದಲ್ಲಿ ಸುತ್ತಾಡುತ್ತಿದ್ದು, ಈ ವೇಳೆ ಪ್ರಿಯಾಂಕಾ ಚೋಪ್ರಾ ತುಟಿಗೆ ಜೊನಾಸ್ ಸಿಹಿಮುತ್ತು ನೀಡಿರುವ ವಿಡಿಯೋ ವೈರಲ್ ಆಗಿದೆ‌.

ರೋಮ್ ನಲ್ಲಿ ಈ ಜೋಡಿಗಳ ರೋಮ್ಯಾನ್ಸ್ ವಿಡಿಯೋವನ್ನು ನಿಕ್​ ಜೋನಸ್​ (Nick Jonas) ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರೋಮ್​ ನಗರಕ್ಕೆ ತೆರಳಿರುವ ನಿಕ್​ ಜೋನಸ್​ ಅವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಮೂಡ್​ನಲ್ಲಿದ್ದಾರೆ. ಮುದ್ದಿನ ಪತ್ನಿ ಪ್ರಿಯಾಂಕಾ ಚೋಪ್ರಾತುಟಿಗೆ ಅವರು ಸಿಹಿ ಮುತ್ತು ನೀಡಿದ್ದಾರೆ. ಇಬ್ಬರ ನಡುವಿನ ಪ್ರೀತಿ ಕಂಡು ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ರೋಮ್​ ನಗರದಲ್ಲಿ ಬೀದಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಅವರು ಐಸ್​ಕ್ರೀಂ ಸವಿದಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು (Priyanka Chopra Viral Video) ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ.

ಅಮೆರಿಕದಲ್ಲಿ ಪಾಪ್​ ಗಾಯಕನಾಗಿ ನಿಕ್​ ಜೋನಸ್​ ಗುರುತಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಹಾಲಿವುಡ್​ ಮ್ಯೂಸಿಕ್​ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಬೇಕು ಎಂದುಕೊಂಡಿದ್ದರು. ಆದರೆ ಅವರಿಗೆ ಆ ಕ್ಷೇತ್ರದಲ್ಲಿ ಯಶಸ್ಸು ಸಿಗಲಿಲ್ಲ. ನಂತರ ಅವರು ಇಂಗ್ಲಿಷ್​​ ಸಿನಿಮಾ ಮತ್ತು ವೆಬ್​ ಸಿರೀಸ್​ಗಳ ಕಡೆಗೆ ಗಮನ ಹರಿಸಲು ಆರಂಭಿಸಿದರು. ಅದು ಅವರಿಗೆ ಫಲ ನೀಡಿದೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ನಡುವೆ 10 ವರ್ಷಗಳ ವಯಸ್ಸಿನ ಅಂತರ ಇದೆ. ನಿಕ್​ ಅವರು ಪ್ರಿಯಾಂಕಾಗಿಂತ 10 ವರ್ಷ ಚಿಕ್ಕವರು. ಈ ಜೋಡಿಯ ಪ್ರೀತಿಗೆ ವಯಸ್ಸಿನ ಅಂತರದಿಂದ ಯಾವುದೇ ಅಡ್ಡಿ ಆಗಿಲ್ಲ. ಇಬ್ಬರೂ ಕೂಡ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಇಬ್ಬರ ದೇಶ ಬೇರೆ, ಧರ್ಮ ಕೂಡ ಬೇರೆ. ಇಷ್ಟೆಲ್ಲ ವ್ಯತ್ಯಾಸಗಳು ಇದ್ದರೂ ಕೂಡ ಇವರಿಬ್ಬರು ಅನೇಕರಿಗೆ ಮಾದರಿ ಜೋಡಿಯಾಗಿ ಬದುಕುತ್ತಿರುವುದು ಫ್ಯಾನ್ಸ್ ಗಳಿಗೂ ಖುಷಿ ತರಿಸಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *