ಮದುವೆಗೂ ಮುನ್ನವೇ ತಾಯಿಯಾಗ್ತಿದ್ದಾರೆ ನಟಿ ಇಲಿಯಾನಾ ಡಿಕ್ರೂಜ್ – ನಟಿ ಮಾಡಿರುವ ಪೋಸ್ಟ್ ವೈರಲ್, ತಲೆಕೆಡಿಸಿಕೊಂಡ ಅಭಿಮಾನಿಗಳು..!!

ಮದುವೆಗೂ ಮುನ್ನವೇ ತಾಯಿಯಾಗ್ತಿದ್ದಾರೆ ನಟಿ ಇಲಿಯಾನಾ ಡಿಕ್ರೂಜ್ – ನಟಿ ಮಾಡಿರುವ ಪೋಸ್ಟ್ ವೈರಲ್, ತಲೆಕೆಡಿಸಿಕೊಂಡ ಅಭಿಮಾನಿಗಳು..!!

ನ್ಯೂಸ್ ಆ್ಯರೋ : ಬಹುಭಾಷಾ ನಟಿ ನಟಿ ಇಲಿಯಾನಾ ಡಿಕ್ರೂಜ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ಹಾಟ್ ಫೋಟೋ ಶೂಟ್ ಮೂಲಕ ಮಿಂಚುತ್ತಿದ್ದ ಇಲಿಯಾನಾ ಇದೀಗ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ನಟಿ ಇಲಿಯಾನಾ ಬಹಿರಂಗ ಪಡಿಸಿದ್ದಾರೆ.

ತಾಯಿ ಆಗುತ್ತಿರುವ ಸಂತಸದ ವಿಚಾರವನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲಿಯಾನಾ ಹಂಚಿಕೊಂಡ ಸಂತಸದ ಸುದ್ದಿ ಅಭಿಮಾನಿಗಳ ತಲೆಕೆಡಿಸಿದೆ. ಮದುವೆಯಾಗದೇ ತಾಯಿ ಆಗುತ್ತಿರುವ ಇಲಿಯಾನಾ ಅವರಿಗೆ ಆ ಮಗುವಿನ ತಂದೆ ಯಾರು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಇಲಿಯಾನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಅಡ್ವೆಂಚರ್ ಆರಂಭವಾಗುತ್ತಿದೆ ಎಂದು ಮಗುವಿನ ಬಟ್ಟೆ ಶೇರ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅಮ್ಮ ಎನ್ನುವ ಪೆಂಡೆಂಟ್ ಧರಿಸಿರುವ ಚೈನ್ ನ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ಇಲಿಯಾನಾ, ‘ನನ್ನ ಪುಟ್ಟ ಡಾರ್ಲಿಂಗ್ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ, ಶೀಘ್ರದಲ್ಲೇ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇಲಿಯಾನಾ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಅಂದಹಾಗೆ ಇಲಿಯಾನಾ ಯಾರನ್ನು ಮದುವೆಯಾಗಿದ್ದಾರಾ ಅಥವಾ ಯಾರ ಜೊತೆ ಸಂಬಂಧದಲ್ಲಿದ್ದಾರೆ ಎನ್ನುವ ಬಗ್ಗೆ ಬಹಿರಂಗ ಪಡಿಸಿಲ್ಲ.

ಇಲಿಯಾನಾ, ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅನೇಕ ಬಾರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರವಾಸಕ್ಕೆ ಹೋದ ಸಮಯದಲ್ಲಿ ಕತ್ರಿನಾ ಗ್ಯಾಂಗ್ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದರು. ಆದರೆ ಅವರನ್ನೇ ಮದುವೆಯಾಗಿದ್ದಾರಾ ಅಥವಾ ಮದುವೆಯಾಗದೇ ತಾಯಿಯಾಗುತ್ತಿದ್ದಾರಾ ಎನ್ನುವ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

ಇಲಿಯಾನಾ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವಾಗಲೇ ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಲಿವಿಂಗ್ ಟುಗೇದರ್ ನಲ್ಲಿದ್ದರು ಎನ್ನಲಾಗಿತ್ತು. ಆಂಡ್ರ್ಯೂ ನೀಬೋನ್ ಜೊತೆ ಡೋಟಿಂಗ್ ಪ್ರಾರಂಭಿಸಿದ ಬಳಿಕ ಇಲಿಯಾನಾ ಸಿನಿಮಾರಂಗದಿಂದ ದೂರ ಸರಿದಿದ್ದರು. ಆದರೆ 2019ರಲ್ಲಿ ಬ್ರೇಕಪ್ ಮಾಡಿಕೊಳ್ಳುವ ಅಚ್ಚರಿ ಮೂಡಿಸಿದ್ದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *