Shocking : ಅತಿಯಾಗಿ ಚಪಾತಿ, ರೋಟಿ ತಿಂದ್ರೆ ಬರುತ್ತೆ ಕ್ಯಾನ್ಸರ್…!! – ವಿಜ್ಞಾನಿಗಳು ಬಾಯ್ಬಿಟ್ಟ ಕಹಿ ಸತ್ಯ ಏನ್ ಗೊತ್ತಾ..!?

Shocking : ಅತಿಯಾಗಿ ಚಪಾತಿ, ರೋಟಿ ತಿಂದ್ರೆ ಬರುತ್ತೆ ಕ್ಯಾನ್ಸರ್…!! – ವಿಜ್ಞಾನಿಗಳು ಬಾಯ್ಬಿಟ್ಟ ಕಹಿ ಸತ್ಯ ಏನ್ ಗೊತ್ತಾ..!?

ನ್ಯೂಸ್ ಆ್ಯರೋ‌ : ಫಿಟ್ನೆಸ್ ಹಿಂದೆ ಬಿದ್ದಿರುವ ಇಂದಿನ ಯುವ ಜನತೆಯ ಫೇವರೇಟ್ ತಿನಿಸು ಎಂದರೆ ಚಪಾತಿ. ತರಕಾರಿ ಜೊತೆಗೆ ನೆಂಚಿಕೊಂಡು ತಿನ್ನುವ ಚಪಾತಿ ದೇಹದ ಸಮತೋಲನವನ್ನು ಸ್ಥಿರವಾಗಿಡುತ್ತದೆ ಎಂಬ ಕಾರಣಕ್ಕೆ ಅನ್ನದ ಬದಲಾಗಿ ಚಪಾತಿ, ರೋಟಿಯನ್ನು ಸೇವಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಇಂದಿನ ಸಭೆ ಸಮಾರಂಭಗಳ ಊಟೋಪಚಾರಗಳಲ್ಲಿ ಚಪಾತಿ, ರೋಟಿಗಳು ಅಗ್ರಮಾನ್ಯ ವಾಗಿದೆ. ಬಾರ್ ಎಂಡ್ ರೆಸ್ಟೋರೆಂಟ್ ಗಳಂತು ಚಪಾತಿ,ರೋಟಿಗಳನ್ನು ಬಟರ್ ಮಸಾಲ, ಪನ್ನಿರ್ ಕಡಾಯಿ ಹೀಗೆ ನಾನಾ ಬಗೆಯ ಕಾಂಬಿನೇಷನಗಳ ಜೊತೆಗೆ ಪ್ರಮೋಟ್ ಮಾಡುತ್ತಿವೆ. ಜನರೂ ಇದನ್ನೇ ಇಷ್ಟ ಪಟ್ಟು ಸವಿಯುತ್ತಿದ್ದಾರೆ. ಇಂತಿಪ್ಪ ಚಪಾತಿ, ಕ್ಯಾನ್ಸರ್ ರೋಗವನ್ನು ಉಂಟು ಮಾಡಬಲ್ಲದು ಎಂಬ ಭಯಾನಕ ಸುದ್ದಿ ಇದೀಗ ಚಪಾತಿ ಪ್ರಿಯರಿಗೆ ಶಾಕ್ ನೀಡಿದೆ. ಹಾಗಾದರೆ ಚಪಾತಿ ಹಾಗೂ ರೋಟಿಗಳು ಯಾವ ಬಗೆಯಲ್ಲಿ ಕ್ಯಾನ್ಸರ್ ಜನಕವಾಗಿದೆ ಎಂಬುದನ್ನು ತಿಳಿಯೋಣ

ಅಧ್ಯಯನಗಳ ಪ್ರಕಾರ, ಪ್ರಖರವಾದ ಉರಿಯ ಮೇಲೆ ಅಡುಗೆ ಮಾಡುವುದರಿಂದ ಹೆಟೆರೋಸೈಕ್ಲಿಕ್ ಅಮೈನ್ಸ್, ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋ ಕಾರ್ಬನ್ ಗಳು ಬಿಡುಗಡೆಗೊಳ್ಳುತ್ತವೆ. ಇವುಗಳೇ ಪ್ರಮುಖವಾದ ಕ್ಯಾನ್ಸರ್ ಕಾರಕವಾಗಿದೆ.

ಸಂಶೋಧನೆಗಳು ಏನು ಹೇಳುತ್ತವೆ..!?

ನೈಸರ್ಗಿಕ ಅನಿಲ ಒಲೆಗಳು, ಕುಕ್ ಟಾಪ್ ಗಳು, ಕಾರ್ಬನ್ ಮಾನಾಕ್ಸೈಡ್ ಮತ್ತು ನೈಟ್ರೋಜನ್ ಡೈ ಆಕ್ಸೈಡ್ ನಂತಹ ವಾಯುಮಾಲಿನ್ಯ ಕಾರಕಗಳನ್ನು ಹೊರ ಹಾಕುತ್ತವೆ. ಇದರಲ್ಲಿರುವ ಸಣ್ಣ ಕಣಗಳಿಂದ ಹೃದಯ ಸಂಬಂಧಿ ಹಾಗೂ ಕ್ಯಾನ್ಸರ್ ಕಾಯಿಲೆಗಳು ಬಾಧಿಸುತ್ತದೆ ಎಂಬ ಆಘಾತಕಾರಿ ಅಂಶವನ್ನು ‘ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಸೈನ್ಸ್ ಆಂಡ್ ಟೆಕ್ನಾಲಜಿ’ ತನ್ನ ಸಂಶೋಧಿತ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಹೆಚ್ಚಿನ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ಕಾರ್ಸಿನೋಜೆನ್ಗಳು ಉತ್ಪತಿಯಾಗುತ್ತವೆ ಎಂದು ‘ಜರ್ನಲ್ ಆಫ್ ನ್ಯೂಟ್ರಿಷನ್ ಆಂಡ್ ಕ್ಯಾನ್ಸರ್’ ಸಂಶೋಧನಾ ವರದಿಯನ್ನು ಪ್ರಕಟಿಸಿದೆ.

ರೋಟಿಯೂ ಕ್ಯಾನರ್ ತರಬಲ್ಲದು..!!

ರೋಟಿಯನ್ನು ನೇರವಾಗಿ ಅನಿಲದ ಉರಿಯ ಮೇಲೆ ಕಾಯಿಸುವುದರಿಂದ, ಅದು ಅಕ್ರಿಲಾಮೈಡ್ ಎಂಬ ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತದೆ. ನೇರವಾಗಿ ಅನಿಲದ ಜ್ವಾಲೆಯ ಮೇಲೆ ಆಹಾರಗಳನ್ನು ಕಾಯಿಸುವುದರಿಂದ ಕಾರ್ಸಿನೋಜೆನ್ಗಳು ಉತ್ಪತಿಗೊಳ್ಳುತ್ತದೆ. ಇದು ಮಾನವನ ಆರೋಗ್ಯವನ್ನು ದುಸ್ಥಿಗೆ ತಳ್ಳಬಹುದು ಎಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಪುಡ್ ಸ್ಟಾಂಡರ್ಡ್ ನ ಮುಖ್ಯ ವಿಜ್ಞಾನಿ ಡಾ.ಪಾಲ್ ಬ್ರೆಂಟ್ 2011ರಲ್ಲಿ ಈ ಬಗ್ಗೆ ವರದಿ ನೀಡಿದ್ದಾರೆ.

ಈ ವರದಿಗಳನ್ವಯ ನೇರವಾಗಿ ಅನಿಲ ಜ್ವಾಲೆಯಲ್ಲಿ ಸುಟ್ಟ ಚಪಾತಿ ಹಾಗೂ ರೋಟಿಯನ್ನು ತಿನ್ನುವುದು ಮಾನವನ ಜೀವಕ್ಕೆ ಮಾರಕವಾಗಿದೆ. ಆದರೆ ಈ ರೀತಿ ತಿನ್ನುವುದರಿಂದ ಕ್ಯಾನ್ಸರ್ ಬರುವುದೆಂಬ ವಾದ ಗಟ್ಟಿಯಾಗಬೇಕಾದರೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾದ ಅನಿವಾರ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *