ದುಬಾರಿ ಬೆಲೆಯ ಐಫೋನ್‌ಗಳನ್ನು ಸರಳವಾಗಿ ಸ್ವಚ್ಚ ಮಾಡೋದು ಹೇಗೆ? – ಚಿಂತಿಸಬೇಕಾಗಿಲ್ಲ ಈ ವರದಿ ಓದಿ..!

ದುಬಾರಿ ಬೆಲೆಯ ಐಫೋನ್‌ಗಳನ್ನು ಸರಳವಾಗಿ ಸ್ವಚ್ಚ ಮಾಡೋದು ಹೇಗೆ? – ಚಿಂತಿಸಬೇಕಾಗಿಲ್ಲ ಈ ವರದಿ ಓದಿ..!

ನ್ಯೂಸ್ ಆ್ಯರೋ : ‘ಗೂಗಲ್ ತಿಳಿಯದ ಮಾಹಿತಿಯಿಲ್ಲ, ಸ್ಮಾರ್ಟ್ಫೋನ್ ಬಳಸದ ಮನುಷ್ಯನಿಲ್ಲ’ ಎನ್ನುವಷ್ಟರ ಮಟ್ಟಿಗೆ ಈ ಸ್ಮಾರ್ಟ್ಫೋನ್ ಗಳು ಮನುಷ್ಯರೊಂದಿಗೆ ಮಿಳಿತು ಹೋಗಿವೆ. ಆದರೆ ಈ ಸ್ಮಾರ್ಟ್ಫೋನ್ ಗಳಲ್ಲಿ ಸೇರುವ ಧೂಳು, ಕೊಳಕಿನಿಂದ ನಮ್ಮ ಆರೋಗ್ಯಕ್ಕೆ ಸಮಸ್ಯೆ ತಪ್ಪಿದ್ದಲ್ಲ. ಅದರಲ್ಲೂ ವಿಶ್ವದ ದುಬಾರಿ ಸ್ಮಾರ್ಟ್ಫೋನ್ ಎನಿಸಿಕೊಂಡ ಐಫೋನ್‌ ಬಳಕೆದಾರರಂತು ಈ ವಿಚಾರವನ್ನು ತಿಳಿಯಲೇಬೇಕು.

ಈ ಐಫೋನ್‌ಗಳು ಜಗತ್ತಿನ ದುಬಾರಿ,ಅತ್ಯುತ್ತಮ ಕಾರ್ಯ ಕ್ಷಮತೆ ಹೊಂದಿರುವ ಸ್ಮಾರ್ಟ್ಫೋನ್ ಗಳು ಆದರೆ ಹೆಚ್ಚಿನ ಐಫೋನ್ ಬಳೆಕೆದಾರರು ಇದನ್ನು ಸ್ವಚ್ಚಗೊಳಿಸಿವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಕೆಲವರಿಗೆ ಇದು ಚಿಕ್ಕ ವಿಚಾರ, ಮತ್ತೆ ಕೆಲವರಿಗೆ ಸ್ವಚ್ಚ ಮಾಡದಿದ್ದರೆ ಏನಾಗುತ್ತದೆ ಎಂಬ ನಿರ್ಲಕ್ಷ್ಯತನ. ಆದರೆ ಐಫೋನ್‌ಗಳು ಸ್ವಚ್ಚವಾಗಿದ್ದಷ್ಟು ನಿಮಗೆ ಒಳ್ಳೆಯದು. ಹೇಗಪ್ಪಾ ಸ್ವಚ್ಚಗೊಳಿಸುವುದು ಅಂತಿರಾ?. ಐಫೋನ್‌ ಸ್ವಚರಚಗೊಳಿಸುವ ವಿಧಾನ ಹೀಗಿದೆ ನೋಡಿ.

ಐಫೋನ್‌ ಯಾಕೆ ಸ್ವಚ್ಚವಾಗಿರಬೇಕು?

ಯಾವುದೇ ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಬ್ಯಾಜ್ಟಿರಿಯಾಗಳ ಜನ್ಮಸ್ಥಳ ಎಂದರೆ ತಪ್ಪಾಗಲಾರದು. ಕೆಲ ವರದಿಗಳ ಪ್ರಕಾರ ಟಾಯ್ಲೆಟ್ ಸೀಟಿಗಿಂತಲೂ ಹೆಚ್ಚಿನ ಬ್ಯಾಕ್ಟೀರಿಯಾಗಳು ಈ ಸ್ಮಾರ್ಟ್ಫೋನ್ ಗಳಲ್ಲಿ ಉತ್ಪತ್ತಿಯಾಗುತ್ತದೆ. ಆದ್ದರಿಂದ ನಿಮ್ಮ ಸ್ಮಾರ್ಟ್ಫೋನ್ ಗಳನ್ನು ಸಮಯ ಸಿಕ್ಕಾಗ ಸ್ವಚ್ಚಗೊಳಿಸುವುದು ನಿಮ್ಮ ಆರೋಗ್ಯಕ್ಕೂ, ಸ್ಮಾರ್ಟ್ಫೋನ್ ಗಳ ಆರೋಗ್ಯಕ್ಕೂ ಉತ್ತಮ.

ಸ್ವಚ್ಚತೆಗಿಳಿಯುವ ಮುನ್ನ ಹೀಗೆ ಮಾಡಿ

ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳನ್ನು ಸ್ವಚ್ಚಗೊಳಿಸುವ ಮುನ್ನ ಅದನ್ನು ಸ್ವಿಚ್ಚ್ ಆಫ್ ಮಾಡುವುದು ಒಳ್ಳೆಯದು. ಯಾಕೆಂದರೆ ನೀವು ಫೋನ್‌ಗಳನ್ನು ಸ್ವಚ್ಚ ಮಾಡಲು ಬಳಸುವ ನೀರು ಅಥವಾ ಇನ್ನಿತರ ದ್ರವ ರೂಪದ ರಾಸಾಯನಿಕಗಳಿಂದ ನಿಮ್ಮ ಐಫೋನಿಗೆ ಹಾನಿಯಾಗಬಹುದು. ಕೆಲವೊಮ್ಮೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬ್ಯಾಟರಿ ಸಮಸ್ಯೆ ಎದುರಾಗುವ ಸಂಭವವಿರುತ್ತದೆ.

ಮೈಕ್ರೋಫೈಬರ್ ಬಟ್ಟೆ ಬಳಸಿ

ಐಫೋನ್, ಸ್ಮಾರ್ಟ್ಫೋನ್ ಅಥವಾ ಇನ್ಯಾವುದೇ ಡಿವೈಸ್ ಗಳನ್ನು ಸ್ವಚ್ಚಗೊಳಿಸಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸುವುದು ಉತ್ತಮ. ಯಾಕೆಂದರೆ ಈ ಬಟ್ಟೆಯನ್ನು ಬಳಸುವುದರಿಂದ ಡಿವೈಸ್ ಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಜೊತೆಗೆ ಇದು ಫಿಂಗರ್ ಪ್ರಿಂಟ್, ದೂಳಿನ ಕಣಗಳನ್ನು ಸ್ವಚ್ಚಗೊಳಿಸಲು ಸಹಕಾರಿಯಾಗಿದೆ.

ಕಠಿಣ ರಾಸಾಯನಿಕಗಳನ್ನು ಬಳಸದಿರಿ

ಐಫೋನ್ ಸ್ವಚ್ಚಗೊಳಿಸುವಾಗ ಹೆಚ್ಚಿನ ಜನರು ಮಾಡುವ ತಪ್ಪೆಂದರೆ ಕಠಿಣ ರಾಸಾಯನಿಕಗಳಾದ ಅಮೋನಿಯ ಅಥವಾ ಬ್ಲೀಚ್ ಗಳನ್ನು ಬಳಸುವುದು. ಆದರೆ ನೆನಪಿರಲಿ ಇಂತಹಾ ರಾಸಾಯನಿಗಳನ್ನು ಬಳಸುವುದರಿಂದ ಡೈವೈಸ್ ನ ಲೇಪನ, ಡಿಸ್‌ಪ್ಲೇ ಮತ್ತು ಇನ್ನಿತರ‌ ಸೂಕ್ಷ್ಮ ಘಟಕಗಳಿಗೆ ಹಾನಿಯಾಗುವ ಸಾಧ್ಯತೆಗಳಿರುತ್ತದೆ.

ಟೂತ್ ಬ್ರಷ್ ಬಳಸುವುದು ಉತ್ತಮ

ಸಾಮಾನ್ಯವಾಗಿ ಟೂತ್ ಬ್ರಷ್ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಫೋನ್‌ಗಳ ಸ್ವಚ್ಚತೆಗೆ ನಯವಾದ ಟೂತ್ ಬ್ರಷ್ ಬಳಸುವುದು ಉತ್ತಮವಾಗಿದೆ. ಇದರ ಸಹಾಯದಿಂದ ಸ್ಮಾರ್ಟ್ಫೋನ್ ಗಳ ಅಂಚು, ಕ್ಯಾಮರಾದ ಲೆನ್ಸ್ ಗಳನ್ನು ಸುಲಭವಾಗಿ ಸ್ವಚ್ಚಗೊಳಿಸಬಹುದಾಗಿದೆ.

ಫೋನಿನ ಕೇಸ್ ಸ್ವಚ್ಚಗೊಳಿಸುವುದು ಬಹುಮುಖ್ಯ

ಸ್ಮಾರ್ಟ್ಫೋನ್ ಗಳಲ್ಲಿ ಹೆಚ್ಚು ಕೊಳಕು ನಿಲ್ಲುವುದು ಫೋನ್‌ನ ಕೇಸ್‌ನಲ್ಲಿ. ನೀವು ಫೋನ್‌ ಸ್ವಚ್ಛ ಮಾಡದೆ ಇದ್ದರೂ ಪರವಾಗಿಲ್ಲ. ಆದರೆ, ಈ ಕೇಸ್ ಅನ್ನು ಮಾತ್ರ ಕಡ್ಡಾಯವಾಗಿ ಸ್ವಚ್ಛಮಾಡಲೇ ಬೇಕು. ಯಾಕೆಂದರೆ ಇದು ಹೆಚ್ಚು ಧೂಳಿನ ಕಣ ಹಾಗೂ ನಿಮ್ಮ ಬೆವರಿನಿಂದ ಬೇಗನೇ ಕೊಳಕಾಗಿ ಬಿಡುತ್ತದೆ. ಇದನ್ನು ಸ್ವಚ್ಛ ಮಾಡಲು ಮೈಕ್ರೋಫೈಬರ್ ಬಟ್ಟೆ ಅಥವಾ ಮೃದುವಾದ ಬ್ರಷ್ ಅನ್ನು ಬಳಕೆ ಒಳ್ಳೆಯದು.

ಸರಿ ಈಗಲಾದರೂ ನಿಮ್ಮ ಸ್ಮಾರ್ಟ್ಫೋನ್ ಗಳಲ್ಲಿರುವ ದೂಳಿನ ಕಣಗಳಿಗೆ ಮುಕ್ತಿ ನೀಡಿ. ಆ ಮೂಲಕ ನಿಮ್ಮನ್ನು ಹಾಗೂ ನಿಮ್ಮ ಸ್ಮಾರ್ಟ್ಫೋನ್ ಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಿ

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *