‘ಅಮೆಜಾನ್ ಸ್ನೇಕ್ ಕ್ಯಾಟ್’ ಚಿತ್ರದ ಅಸಲಿಯತ್ತೇನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಚಿತ್ರ ನಕಲಿಯಾ? ಅಸಲಿಯಾ?
- ವೈರಲ್ ನ್ಯೂಸ್
- March 21, 2023
- No Comment
- 193
ನ್ಯೂಸ್ ಆ್ಯರೋ : ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಅಮೆಜಾನ್ ಸ್ನೇಕ್ ಕ್ಯಾಟ್’ ಚಿತ್ರವನ್ನು ನೋಡಿದವರು ಸೃಷ್ಟಿಯ ಅದ್ಭುತಕ್ಕೆ ಮಾರಿ ಹೋಗಿದ್ದರು. ಈ ಚಿತ್ರದ ಅಸಲಿಯತ್ತಿನ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದೆ.
ಅಮೆಜಾನ್ನಂತಹ ದಟ್ಟ ಕಾನನದಲ್ಲಿ ಅಡಗಿದ್ದ ಅಪರೂಪದ ಪ್ರಾಣಿಯ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಆದರೆ, ಈ ಚಿತ್ರ ಸುಳ್ಳು, ಫೋಟೋಶಾಪ್ ಮೂಲಕ ಎಡಿಟ್ ಮಾಡಲಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಚಿತ್ರದ ಕುರಿತು ಚರ್ಚೆ ಕಾವೇರುತ್ತಿದೆ.
‘ಅಮೆಜಾನ್ ಸ್ನೇಕ್ ಕ್ಯಾಟ್’ ಅನ್ನು ‘ಸರ್ಪನ್ಸ್ ಕ್ಯಾಟಸ್’ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಅಪರೂಪದ ಬೆಕ್ಕಿನ ಜಾತಿಯಾಗಿದೆ. ಈ ಪ್ರಾಣಿಗಳು ಅಮೆಜಾನ್ ಮಳೆಕಾಡಿನಲ್ಲಿ ಮನುಷ್ಯರೂ ಸಹ ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದ್ದರಿಂದ ಅವುಗಳು ಮಾನವರ ಕಣ್ಣಿಗೆ ಬೀಳುವುದು ಅತಿ ಕಡಿಮೆ. ಹೀಗಾಗಿ ಇವುಗಳ ಅಧ್ಯಯನವೂ ನಡೆದಿಲ್ಲ.
‘ಅಮೆಜಾನ್ ಸ್ನೇಕ್ ಕ್ಯಾಟ್’ ಮೊದಲ ಚಿತ್ರ 2020 ರಲ್ಲಿ ಕಾಣಲು ಸಿಕ್ಕಿತ್ತು ಎಂದು ಟ್ವಿಟರ್ ಬಳಕೆದಾರರೊಬ್ಬರು ಚಿತ್ರ ಫೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ಈ ಬೆಕ್ಕಿನ ಜಾತಿಯನ್ನು ‘ಸರ್ಪನ್ಸ್ ಕ್ಯಾಟಸ್’ ಎಂದು ಕೆಲವರು ಕರೆದಿದ್ದಾರೆ. ಇದರರ್ಥ ‘ಸರ್ಪ’ ಮತ್ತು ಲ್ಯಾಟಿನ್ ಭಾಷೆಯಲ್ಲಿ ‘ತಿಳಿವಳಿಕೆ, ಬುದ್ಧಿವಂತ, ಚಾಣಾಕ್ಷ, ಬುದ್ಧಿವಂತ, ವಿವೇಕಯುತ ಅಥವಾ ಜಾಗರೂಕ’ ಎಂಬ ಅರ್ಥ ನೀಡುತ್ತದೆ. ಇನ್ನು ಮತ್ತೊಂದೆಡೆ ಕೆಲ ನೆಟ್ಟಿಗರು ಇದು ಬೆಕ್ಕುಗಳ ಜಾತಿಗೆ ಸೇರಿದಲ್ಲ. ಇದು ಫೋಟೋಶಾಪ್ನಿಂದ ಡಿಸೈನ್ ಮಾಡಲಾಗಿದೆ. ಈ ಚಿತ್ರ ನಕಲಿ ಎಂದಿದ್ದಾರೆ.
ಈ ಚಿತ್ರವು ಫೋಟೋಶಾಪ್ನ ಮ್ಯಾಜಿಕ್ ಮತ್ತು ಪ್ರಕೃತಿಯ ಅದ್ಭುತವಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಚಿತ್ರಕ್ಕೆ ಹೋಲುವ ನಿಜವಾದ ಹಾವು ಚಿನ್ನದ ಉಂಗುರದ ಬೆಕ್ಕು ಹಾವು, ಇದು ಆಗ್ನೇಯ ಏಷ್ಯಾದಲ್ಲಿ ಕಂಡು ಬರುವ ವಿಷಕಾರಿ ಹಾವಿನ ಜಾತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದು ಬೆಕ್ಕಿನ ತಲೆಯನ್ನು ಹಾವಿನ ದೇಹಕ್ಕೆ ಜೋಡಿಸಿ ಹೊಂದಿಕೆಯಾಗುವಂತೆ ಬಣ್ಣ ಹಚ್ಚಲಾಗಿದೆ. ಅದು ಸಾಕಷ್ಟು ದೊಡ್ಡ ಮತ್ತು ಉದ್ದವಾದ ಹಾವು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಏನೆ ಆದರೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಚಿತ್ರ ಚರ್ಚೆಯ ಹಾಟ್ ಟಾಪಿಕ್ ಆಗಿದೆ.