ಗರಿಷ್ಠ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಬ್ರಿಸ್ಕ್ ಇವಿ – ಫುಲ್ ಚಾರ್ಜ್ ಆದ್ರೆ ಬರೋಬ್ಬರಿ 333 ಕಿಲೋಮೀಟರ್ ಓಡುತ್ತೆ ಈ ಗಾಡಿ..!!

ಗರಿಷ್ಠ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಬ್ರಿಸ್ಕ್ ಇವಿ – ಫುಲ್ ಚಾರ್ಜ್ ಆದ್ರೆ ಬರೋಬ್ಬರಿ 333 ಕಿಲೋಮೀಟರ್ ಓಡುತ್ತೆ ಈ ಗಾಡಿ..!!

ನ್ಯೂಸ್‌ ಆ್ಯರೋ : ಈಗ ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಯುಗ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ವಾಹನ ತಯಾರಕ ಕಂಪನಿಗಳು ಹತ್ತಾರು ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರುಟಕ್ಟಗೆ ಬಿಡುಗಡೆ ಮಾಡುತ್ತಿವೆ. ಇದೀಗ ದೇಶೀಯ ಕಂಪನಿ ಬ್ರಿಸ್ಕ್ ಇವಿ ಗರಿಷ್ಠ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ.

ಹೈದರಾಬಾದ್ ಮೋಟಾರ್ ಶೋನಲ್ಲಿ ಬ್ರಿಸ್ಕ್ ಇವಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವರ್ಚುವಲ್ ರಿಯಾಲಿಟಿ ಮೂಲಕ ಪರಿಚಯಿಸಲಾಗಿದೆ. ಆರಿಜಿನ್ ಹಾಗೂ ಆರಿಜಿನ್ ಪ್ರೊ ಸ್ಕೂಟರ್‌ಗಳಲ್ಲಿ ಸಂಪೂರ್ಣ ಚಾರ್ಜಿನಲ್ಲಿ ಆರಿಜಿನ್ ಪ್ರೊ ಗರಿಷ್ಠ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದರ ಬೆಲೆಯೂ ಕಡಿಮೆಯಿರಲಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ರೇಂಜ್ ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಹೆಚ್ಚಿನ ಗ್ರಾಹಕರು ಖರೀದಿಸಬಹುದು.

ಆರಿಜಿನ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು 4.8 ಕಿಲೊ ವ್ಯಾಟ್‌ ಸ್ಥಿರ ಬ್ಯಾಟರಿ ಹಾಗೂ 2.1 ಕಿಲೊ ವ್ಯಾಟ್‌ಗೆ ಬದಲಾಯಿಸಬಹುದಾದ ಬ್ಯಾಟರಿ ಆಯ್ಕೆಯಲ್ಲಿ ಖರೀದಿಸಬಹುದು. ಜೊತೆಗೆ ಸಂಪೂರ್ಣ ಚಾರ್ಜಿನಲ್ಲಿ ಗರಿಷ್ಠ 333 ಕಿಲೋಮೀಟರ್ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ 85 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಾಯಿಸಬಹುದಾಗಿದೆ.

ಕೇವಲ 3.3 ಸೆಕೆಂಡುಗಳಲ್ಲಿ ಈ ಸ್ಕೂಟರ್ 0-40 ಕಿ.ಮೀ. ವೇಗವನ್ನು ಪಡೆಲಿದ್ದು, ಇದರಲ್ಲಿ ಅಳವಡಿಸಿರುವ ಮೋಟಾರ್, 5.5 ಕಿಲೊ ವ್ಯಾಟ್‌ ಪೀಕ್ ಪವರ್ ಉತ್ಪಾದಿಸಲಿದೆ. ಒಟಿಎ ಅಪ್ಡೇಟ್, ಬ್ಲೂಟೂತ್ ಸಂಪರ್ಕ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ₹ 1,20,000 – ₹ 1,40,000 ಬೆಲೆಯಲ್ಲಿ ಈ ಸ್ಕೂಟರ್ ಖರೀದಿಗೆ ಲಭ್ಯವಾಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಇದೇ ಅತಿ ಹೆಚ್ಚು ರೇಂಜ್ ನೀಡುವ ಸ್ಕೂಟರ್ ಆಗಲಿದೆ ಎಂದು ಹೇಳಲಾಗಿದೆ.

ಆರಿಜಿನ್ ಸ್ಕೂಟರ್‌ ಬಗ್ಗೆ ಮಾತನಾಡುವುದಾದರೆ ಇದು ಫುಲ್ ಚಾರ್ಜಿನಲ್ಲಿ 175 ಕಿ.ಮೀ. ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದು, 65 ಕಿ.ಮೀ. ಗರಿಷ್ಠ ಟಾಪ್ ಸ್ವೀಡ್ ಹೊಂದಿದೆ. ಕೇವಲ 5 ಸೆಕೆಂಡುಗಳಲ್ಲಿ 0-40 ಕಿ.ಮೀ. ವೇಗವನ್ನು ಪಡೆಯಲಿದೆ. ಜೊತೆಗೆ ಕೊಂಚ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದ್ದು, ₹ 70,000 ದಿಂದ ₹ 80,000 ದರದಲ್ಲಿ ಸಿಗಬಹುದು. ಈ ಸ್ಕೂಟರ್ ಕೂಡ ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಸಿಗಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಬ್ರಿಸ್ಕ್ ಇವಿಯ ಇವರೆಡು ಸ್ಕೂಟರ್‌ಗಳನ್ನು ಹೈದರಾಬಾದ್‌ ಉತ್ಪಾದನಾ ಘಟಕದಲ್ಲಿ ತಯಾರಿಸುತ್ತಿದ್ದು, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಬರುವ ನಿರೀಕ್ಷೆ ಇದೆ. ಕೈಗೆಟುಕುವ ಬೆಲೆ ಹಾಗೂ ಅಧಿಕ ರೇಂಜ್ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಓಲಾ ಕಂಪನಿ ಭಾರತದಲ್ಲಿ ತನ್ನ ಎಂಟ್ರಿ ಲೆವೆಲ್ ‘ಎಸ್1 ಏರ್’ ಸ್ಕೂಟರ್ ಅನ್ನು ಮೂರು ರೂಪಾಂತರದಲ್ಲಿ ಖರೀದಿಗೆ ನೀಡುತ್ತಿದೆ. ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಗೆ ಅನುಗುಣವಾಗಿ ಕ್ರಮವಾಗಿ ₹ 84,999, ₹ 99,999 ಹಾಗೂ ₹ 1,09,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಓಲಾದ ಟಾಪ್ ಎಂಡ್ ಮಾದರಿ ಎಸ್1 ಪ್ರೊ ₹ 129,999 ದರವನ್ನು ಪಡೆದಿದ್ದು, ಗರಿಷ್ಠ 181 ಕಿ.ಮೀ. ರೇಂಜ್ ನೀಡಲಿದ್ದು, 95 ಕಿ.ಮೀ. ಟಾಪ್ ಸ್ಪೀಡ್ ಹೊಂದಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *