ನೀವು ತುಂಬಾ ದಪ್ಪಗಿದ್ದೀರಾ? -ಹಾಗಿದ್ರೆ ತೂಕ ಇಳಿಸುವುದಕ್ಕೆ ಜೇನುತುಪ್ಪವನ್ನು ಈ ರೀತಿ ಬಳಸಿ…

ನೀವು ತುಂಬಾ ದಪ್ಪಗಿದ್ದೀರಾ? -ಹಾಗಿದ್ರೆ ತೂಕ ಇಳಿಸುವುದಕ್ಕೆ ಜೇನುತುಪ್ಪವನ್ನು ಈ ರೀತಿ ಬಳಸಿ…

ನ್ಯೂಸ್ ಆ್ಯರೋ : ದಪ್ಪಗಿದ್ದೀವಿ ಅಂತ ಚಿಂತಿಸುವುದು ಬಿಟ್ಟು ತೂಕ ಇಳಿಸುವುದು ಹೇಗೆ ಅಂತ ಯೋಚಿಸೋದು ಒಳ್ಳೆಯದಲ್ವಾ? ನಿಮಗೆ ಹಾಗೊಂದು ಯೋಚನೆ‌ ಇರೋದಾದ್ರೆ ತೂಕ ಇಳಿಸೋದಿಕ್ಕೆ ಇಲ್ಲಿ ಕೆಲವೊಂದು ಟಿಪ್ಸ್ ಗಳಿವೆ‌. ಹೆಚ್ಚಾಗಿ ಡಯೆಟ್ ಮಾಡುವವರು ತೂಕ ಕರಗಿಸಲು ಜೇನುತುಪ್ಪ ಬಳಸುತ್ತಾರೆ. ಇದೊಂದು ನೈಸರ್ಗಿಕವಾದ ಸಿಹಿ ಉತ್ಪನ್ನವಾಗಿದ್ದು, ಇದರ ಸರಿಯಾದ ಬಳಕೆಯಿಂದ ನಿಮ್ಮ‌ ದೇಹದ ತೂಕ ಗಣನೀಯವಾಗಿ ಇಳಿಕೆಯಾಗುವುದರಲ್ಲಿ ಅನುಮಾನವಿಲ್ಲ. ತೂಕ‌ ಇಳಿಸಲು ಜೇನುತುಪ್ಪವನ್ನು‌ ಹೇಗೆ ಬಳಸಬೇಕು ಅನ್ನುವ ಮಾಹಿತಿ ಇಲ್ಲಿದೆ ನೋಡಿ.

ಸಕ್ಕರೆ ಬದಲಿಗೆ ಜೇನುತುಪ್ಪ ಬಳಸಿ :

ಜೇನುತುಪ್ಪವು ಸಕ್ಕರೆಗಿಂತ‌ ಹೆಚ್ಚು ಸಿಹಿಯಾಗಿದ್ದರೂ ಕೂಡ ಕಡಿಮೆ ಕ್ಯಾಲೊರಿಗಳನ್ನು‌ ಹೊಂದಿದೆ. ಜೇನುತುಪ್ಪ ಕ್ಯಾಲೊರಿ ಸೇವನೆಯನ್ನು ತೀವ್ರವಾಗಿ ಹೆಚ್ಚಿಸದೆ ತಮ್ಮ ಸಿಹಿ ಬಯಕೆಯನ್ನು‌ ಪೂರೈಸಲು ಬಯಸುವವರಿಗೆ ಉತ್ತಮ‌ ಆಯ್ಕೆಯಾಗಿದೆ. ದೇಹಕ್ಕೆ ಕಡಿಮೆ‌ ಕ್ಯಾಲೊರಿಯ ರವಾನೆಯಾದಷ್ಟು ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ. ಚಾಹಾ, ಕಾಫಿ ಹಾಗೂ ಇತರ ಪಾನಿಯಗಳಲ್ಲೂ ಸಕ್ಕರೆಯ ಬದಲಿಗೆ ಜೇನುತುಪ್ಪ ಬಳಸುವುದು ತೂಕ ಇಳಿಸಲು ಸಹಾಯ ಮಾಡುತ್ತದೆ.

ಗಾರ್ಸಿನಿಯಾ ಕಾಂಬೋಜಿಯಾ ಜೊತೆ ಜೇನುತುಪ್ಪ
ಆರೋಗ್ಯದ ದೃಷ್ಟಿಯಿಂದ ಗಾರ್ಸಿನಿಯಾ ಕಾಂಬೋಜಿಯಾ ಜೇನುತುಪ್ಪದೊಂದಿಗೆ ದಿನವನ್ನು ಪ್ರಾರಂಭಿಸುವುದು ಬಹಳಷ್ಟು ಉತ್ತಮ. ಇದು ನಿಮ್ಮ ತುಕ‌ ಇಳಿಸಲು ಸಹಾಯ ಮಾಡುತ್ತದೆ. ಅಧ್ಯಯನಗಳ ಪ್ರಕಾರ, ಗಾರ್ಸಿನಿಯಾ ಕಾಂಬೋಜಿಯಾ ದೇಹಕ್ಕೆ ಹೆಚ್ಚಿನ‌ ಶಕ್ತಿಯನ್ನು ನೀಡಿ, ನಿಮ್ಮ ಚಯಾಪಚಯವನ್ನು‌ ಸುಧಾರಿಸಲು ಸಹಾಯ ಮಾಡುತ್ತದೆ. ಬೆಳಗ್ಗಿನ ಹೊತ್ತು‌ ಖಾಲಿ ಹೊಟ್ಟೆಗೆ ಬೆಚ್ಚಗಿನ‌ ನೀರಿನೊಂದಿಗೆ ಜೇನುತುಪ್ಪ ಸೇರಿಸಿ‌ ಕುಡಿಯುವುದರಿಂದ ನಿಮ್ಮ‌ ಹಸಿವು ಹಾಗೂ ಕಡುಬಯಕೆಗಳು ಕಡಿಮೆಯಾಗಿ ದೇಹದ ತೂಕ‌ ಇಳಿಯುತ್ತದೆ.

ವರ್ಕ್ಔಟ್ ಮಾಡುವ ಮುನ್ನ‌ ಜೇನುತುಪ್ಪ ಸೇವಿಸಿ
ದೇಹದ ಶಕ್ತಿಯನ್ನು ವೇಗಗೊಳಿಸಲು ಜೇನುತುಪ್ಪ ಸಹಕಾರಿಯಾಗಿದೆ. ವ್ಯಾಯಾಮದ ಸಮಯದಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಮಾಡಲು ಇದು ಸಹಕರಿಸುತ್ತದೆ. ಆದ್ದರಿಂದ ವ್ಯಾಯಾಮಕ್ಕೂ ಮೊದಲು ನಿಯಮಿತವಾಗಿ ಜೇನುತುಪ್ಪ ಸೇವಿಸುವುದು ಉತ್ತಮ. ಇದರಿಂದಾಗಿ ವರ್ಕ್ಔಟ್ ಮಾಡಲು ಶಕ್ತಿ ದೊರೆಯುತ್ತದೆ ಜೊತೆಗೆ ವ್ಯಾಯಮದಿಂದ ದೇಹದ ಬೊಜ್ಜು ಕರಗಿ ದೇಹದ ತೂಕ‌ ಇಳಿಯುತ್ತದೆ.

ಜೇನು ಸೇವನೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ
ಜೇನುತುಪ್ಪ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಊಟದ ನಂತರ ಒಂದು ಚಮಚ ಜೇನುತುಪ್ಪ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮಗೊಳ್ಳುತ್ತದೆ. ಜೇನುತುಪ್ಪದಲ್ಲಿರುವ ಕಿಣ್ವಗಳು ಆಹಾರದಲ್ಲಿರುವ ಕಾರ್ಬೋಹೈಡ್ರೇಟ್ ಅಂಶಗಳನ್ನು ವಿಭಜಿಸಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ವರ್ಧಿಸುತ್ತದೆ. ಜೊತೆಗೆ ಇದರಿಂದ ದೇಹದ ತೂಕ‌ ಇಳಿಸಬಹುದಾಗಿದೆ.

ಜೇನುತುಪ್ಪವನ್ನು ಈ ಸಮಯದಲ್ಲಿ ಸೇವಿಸಿ
ಜೀವಸತ್ವ ಹಾಗೂ ಖನಿಜಗಳಿಂದ ಸಮೃದ್ಧವಾಗಿರುವ ಜೇನುತುಪ್ಪ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೇನುತುಪ್ಪವನ್ನು‌ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಸೇವಿಸುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಈ ರೀತಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ‌ ಹಾಗೂ ಹಸಿವು ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದ ತೂಕವೂ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *