ಸೋರಿಯಾಸಿಸ್ ನಿಂದ ನೀವು ಅಥವಾ ನಿಮ್ಮವರು ಬಳಲುತ್ತಿದ್ದಾರಾ? – ಹೋಮಿಯೋ ಕೇರ್ ನಲ್ಲಿದೆ ಇದಕ್ಕೆ ಚಿಕಿತ್ಸೆ, ಡೀಟೈಲ್ಸ್ ಇಲ್ಲಿದೆ..

ಸೋರಿಯಾಸಿಸ್ ನಿಂದ ನೀವು ಅಥವಾ ನಿಮ್ಮವರು ಬಳಲುತ್ತಿದ್ದಾರಾ? – ಹೋಮಿಯೋ ಕೇರ್ ನಲ್ಲಿದೆ ಇದಕ್ಕೆ ಚಿಕಿತ್ಸೆ, ಡೀಟೈಲ್ಸ್ ಇಲ್ಲಿದೆ..

ನ್ಯೂಸ್ ಆ್ಯರೋ : ಮನುಷ್ಯನ ದೈಹಿಕ‌ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ‌ ಬೀರುವ ಕಾಯಿಲೆಗಳಲ್ಲಿ ಸೋರಿಯಾಸಿಸ್ ಕೂಡ ಒಂದು. ಚರ್ಮದ ತಳದ ಪದರಗಳು ವಿಪರೀತ ವಿಭಜನೆಯಾಗುವುದು ಈ ಕಾಯಿಲೆಗೆ ಪ್ರಮುಖ ಕಾರಣ. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಂದಿದಾಗ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.

ಮನುಷ್ಯ ದೇಹದ ಚರ್ಮವು ಹಳೆಯ‌ ಪದರವನ್ನು ತೆಗೆದುಹಾಕಿ ಹೊಸ ಪದರವನ್ನು ರೂಪಿಸುವುದಕ್ಕೆ ಕೆಲವು ದಿನಗಳ ಸಮಯ ತೆಗೆದುಕೊಳ್ಳುತ್ತದೆ‌. ಈ ಕ್ರಿಯೆ ಸೋರಿಯಾಸಿಸ್ ನಲ್ಲಿ ಬಲು‌ ಬೇಗ ಮುಗಿದು ಹೋಗುತ್ತದೆ. ಆದರೆ ಈ ಸಮಯದಲ್ಲಿ ಉದುರಿ ಹೋಗಬೇಕಾದ ಹಳೆ ಚರ್ಮದ ಪದರವು ಹಾಗೇ‌ ಉಳಿದು ಹೊಸ ಚರ್ಮದ ಪದರ ರಚನೆಯಾಗುತ್ತದೆ. ಇದು ಚರ್ಮದ ಮೇಲಿನ ಮಡಿಕೆಗಳನ್ನು ರಚಿಸಿ, ಭಾವನಾತ್ಮಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದ್ಯ, ಈ ಕೆಳಗಿನ ವರದಿಯಲ್ಲಿ ಸೋರಿಯಾಸಿಸ್ ಲಕ್ಷಣ, ವಿಧ ಹಾಗೂ ಚಿಕಿತ್ಸೆಯನ್ನು ನೀವು ತಿಳಿಯಬಹುದಾಗಿದೆ.

ಸೋರಿಯಾಸಿಸ್ ವಿಧಗಳು :
ಸೋರಿಯಾಸಿಸ್ ನಲ್ಲಿ ಹಲವು ವಿಧಗಳಿವೆ. ಅವುಗಳೆಂದರೆ, ಪ್ಲೇಕ್ ಸೋರಿಯಾಸಿಸ್, ಗಟ್ಟೇಟ್ ಸೋರಿಯಾಸಿಸ್, ಪಸ್ಟ್ ಲಾರ್ ಸೋರಿಯಾಸಿಸ್, ಇನ್ ವರ್ಸ್ ಸೋರಿಯಾಸಿಸ್, ಎರಿಥ್ರೋಡರ್ಮಿಕ್ ಸೋರಿಯಾಸಿಸ್ ಎಂಬ ಐದು ವಿಧಗಳಿವೆ‌.

ಸೋರಿಯಾಸಿಸ್ ಲಕ್ಷಣಗಳು :
ಅಂಗೈ, ಮೊಣಕೈ, ತಲೆ, ಪಾದ, ಮೊಣಕಾಲು ಹಾಗೂ ಹೊಟ್ಟೆಯ ಮೇಲ್ಭಾಗದ ಚರ್ಮದ ಮೇಲೆ ಸೋರಿಯಾಸಿಸ್ ಪ್ರಭಾವ ಬೀರುತ್ತದೆ. ಚರ್ಮ ಕೆಂಪು ಆಗುವುದು, ತೀವ್ರ‌ ತುರಿಕೆ, ಚರ್ಮ ಒಡೆದು ಹೋಗುವುದರಿಂದ ತೀವ್ರವಾದ ನೋವು, ಸೋರಿಯಾಸಿಸ್ ತಲೆಯಲ್ಲಿದ್ದಾಗ ಕೂದಲು ಉದುರುವಿಕೆ ಹಾಗೂ ಹೊಟ್ಟು, ಅಂಗೈ ಹಾಗೂ ಪಾದಗಳಲ್ಲಿ ಚರ್ಮ‌ ಹೊಟ್ಟಿನ ರೂಪದಲ್ಲಿ ಉದುರುವುದು ಹಾಗೂ ಕೀಲು ನೋವು ಕಾಣಿಸಿಕೊಳ್ಳುವುದು ಸೋರಿಯಾಸಿಸ್ ಕಾಯಿಲೆಯ ಲಕ್ಷಣಗಳಾಗಿವೆ. ಇದರಿಂದಾಗಿ ಮಾನಸಿಕ ಅಶಾಂತಿ ಹಾಗೂ ದೇಹದಲ್ಲಿನ ಲವಣಗಳು ಮತ್ತು ಮಿಟಮಿನ್ ಗಳು ಕಡಿಮೆಯಾಗುತ್ತದೆ‌.

ಸೋರಿಯಾಸಿಸ್ ಆವರಿಸಲು ಕಾರಣ
ಸಂಶೋಧನೆಯ ಪ್ರಕಾರ, ಸೋರಿಯಾಸಿಸ್ ಅನುವಂಶಿಕವಾಗಿ ವ್ಯಕ್ತಿಯ ದೇಹವನ್ನು ಆಕ್ರಮಿಸುವ ಸಾಧ್ಯತೆಗಳಿರುತ್ತವೆ‌. ಜೊತೆಗೆ ವಿಪರೀತ ಮದ್ಯಪಾನ, ಧೂಮಪಾನ‌ ಹಾಗೂ ದೇಹದಲ್ಲಿ ಅತಿಯಾದ ಬೊಜ್ಜಿನಿಂದಲೂ ಈ ಕಾಯಿಲೆ ಬರಬಹುದು. ಕೆಲ ಔಷಧಿಗಳನ್ನು ದೀರ್ಘಕಾಲದಿಂದ ಸೇವಿಸುತ್ತಿದ್ದರೂ ಸೋರಿಯಾಸಿಸ್ ಬರುವ ಸಾಧ್ಯತೆಯಿದೆ. ಮಾನಸಿಕ ಒತ್ತಡ, ದೈಹಿಕ ವ್ಯಾಯಾಮದ ಕೊರತೆಯೂ ಕೂಡ ಇದಕ್ಕೆ ಕಾರಣವಾಗಬಹುದು.

ಸೋರಿಯಾಸಿಸ್ ಚಿಕಿತ್ಸೆ
ಹೋಮಿಯೋಕೇರ್ ನಲ್ಲಿ ನೀಡುವ ಕಾನ್ಸ್ಟಿಟ್ಯೂಷನಲ್ ಚಿಕಿತ್ಸೆಯು ರೋಗಿಯ ದೈಹಿಕ, ಸಮಸ್ಯೆಗಳ ಜೊತೆಗೆ ಮಾನಸಿಕ ಬದಲಾವಣೆಗಳು, ಭಾವನಾತ್ಮಕ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ನೀಡುವಂತಹುದಾಗಿದೆ‌. ಇದು ಕೇವಲ ರೋಗ ಲಕ್ಷಣವನ್ನಷ್ಟೇ ಅಲ್ಲದೆ ರೋಗಿಯ ಸಂಪೂರ್ಣ ಆರೋಗ್ಯವಂತನಾಗಲು ಸಹಕರಿಸುತ್ತದೆ‌. ಈ ಲಕ್ಷಣಗಳಿಂದ ಬಳಲುತ್ತಿದ್ದ ಅನೇಕರು ಹೋಮಿಯೋಕೇರ್ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂಬುದು ವೈದ್ಯರ ಮಾತು.
ಸೋರಿಯಾಸಿಸ್ ಚಿಕಿತ್ಸೆ ಹಾಗೂ ಉಚಿತ ಸಲಹೆಗಾಗಿ 1800 108 1212 ಈ ದೂರವಾಣಿ ಸಂಖ್ಯೆಯನ್ನು ಬಳಸಬಹುದು‌.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *