ರಿಯಲ್ಮಿ ಕಂಪೆನಿಯ 240W ಚಾರ್ಜಿಂಗ್ ವೇಗದ ಸ್ಮಾರ್ಟ್ಫೋನ್ ಬಿಡುಗಡೆ – ಬೆಲೆ ಎಷ್ಟು, ಫೀಚರ್ಸ್ ಗಳೇನು? ಇಲ್ಲಿದೆ ಮಾಹಿತಿ..

ರಿಯಲ್ಮಿ ಕಂಪೆನಿಯ 240W ಚಾರ್ಜಿಂಗ್ ವೇಗದ ಸ್ಮಾರ್ಟ್ಫೋನ್ ಬಿಡುಗಡೆ – ಬೆಲೆ ಎಷ್ಟು, ಫೀಚರ್ಸ್ ಗಳೇನು? ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ : ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹಲವಾರು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿದೆ. ಆದರೆ ಈ ಎಲ್ಲಾ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಮೂಡಿದೆ. ಅದ್ರಲ್ಲೂ 2022ರಲ್ಲಿ ಬಿಡುಗಡೆಯಾದಂತಹ ಮೊಬೈಲ್ಗಳಿಗೆ ಈಗಲೂ ಎಲ್ಲಿಲ್ಲದ ಬೇಡಿಕೆ.

ಹಿಂದಿನ ವರ್ಷವನ್ನೊಮ್ಮೆ ಮೆಲುಕು ಹಾಕುವುದಾದರೆ ಆ ವರ್ಷದಲ್ಲಿ ತಿಂಗಳಿಗೆ ಎರಡರಂತೆ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿತ್ತು. ಜನಪ್ರಿಯ ಸ್ಮಾರ್ಟ್ಫೋನ್ ಕಂಪೆನಿಗಳಲ್ಲಿ ರಿಯಲ್ಮಿ ಕೂಡ ಒಂದು. ರಿಯಲ್ಮಿ ಕಂಪೆನಿ ತನ್ನ ಕಂಪೆನಿಯ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ.

ಈ ಸ್ಮಾರ್ಟ್ಫೋನ್ಗಳು ತನ್ನದೇ ಆದ ಮಾರಾಟವನ್ನು ಮಾರುಕಟ್ಟೆಯಲ್ಲಿ ಸೃಷ್ಟಿಸಿಕೊಂಡಿದೆ. ಇದೀಗ ಈ ಹಿಂದೆ ಮಾರುಕಟ್ಟೆಯಲ್ಲಿ ಭಾರೀ ಸುದ್ದಿಯಲ್ಲಿದ್ದ 240 ವ್ಯಾಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದ ಸ್ಮಾರ್ಟ್ಫೋನ್ ಸದ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಹಾಗಾದರೆ ನೂತನ ರಿಯಲ್‌ ಮಿ GT ನಿಯೋ 5 ಸ್ಮಾರ್ಟ್ಫೋನ್ ಹೇಗಿದೆ?, ಈ ಸ್ಮಾರ್ಟ್‌ಫೋನ್ ನ ಫೀಚರ್ಸ್ ಗಳೇನು..? ಬೆಲೆ ಏನು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ರಿಯಲ್‌ ಮಿ GT ನಿಯೋ 5 ಸ್ಮಾರ್ಟ್ಫೋನ್ ದೊಡ್ಡದಾದ ಕ್ಯಾಮೆರಾ ಸೆನ್ಸಾರ್‌ಗಳನ್ನು ಹೊಂದಿರುವ ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದ್ದು, ಈ ಸ್ಮಾರ್ಟ್‌ಫೋನ್ 6.74-ಇಂಚಿನ 1.5K ರೆಸಲ್ಯೂಶನ್ AMOLED ಡಿಸ್‌ಪ್ಲೇ ಹೊಂದಿದೆ. ಇದು ಬರೋಬ್ಬರಿ 144Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ಬೆಂಬಲ, 1400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್, 2160Hz UHF PWM ಡಿಮ್ಮಿಂಗ್ ಮತ್ತು 5000000:1 ಡೈನಾಮಿಕ್ ಕಾಂಟ್ರಾಸ್ಟ್ ಫೀಚರ್ಸ್ ಗಳನ್ನು ಒಳಗೊಂಡಿದ್ದು, ಹುಡ್ ಅಡಿಯಲ್ಲಿ, 16GB RAM ಮತ್ತು 1TB ಸ್ಟೋರೇಜ್‌ ಜೊತೆಗೆ ಜೋಡಿಸಲಾಗಿರುವ Snapdragon 8+ Gen 1 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್ಫೋನ್ Android 13 ಆಧಾರಿತ Realme UI4.0 ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.

ರಿಯಲ್ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಶನ್) ಜೊತೆಗೆ 50-ಮೆಗಾಪಿಕ್ಸೆಲ್ ಸೋನಿ IMX890 ಲೆನ್ಸ್, ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ಗಳಿಂದ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.


ಅಲ್ಲದೇ ಈ ಸ್ಮಾರ್ಟ್‌ಫೋನ್, 240W ಚಾರ್ಜಿಂಗ್ ಬೆಂಬಲಿತ 4600mAh ಸಾಮರ್ಥ್ಯದ ಬ್ಯಾಟರಿ ಮತ್ತು 150W ಚಾರ್ಜಿಂಗ್ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯ ಎರಡು ಆಯ್ಕೆಗಳಲ್ಲಿ ಬಂದಿದ್ದು, ಕೇವಲ 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ ಸಾಮರ್ಥವನ್ನು ಹೊಂದಿರಲಿದೆ.

ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು, 240W ಸಾಮರ್ಥ್ಯದ ರಿಯಲ್ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ 16GB + 256GB ಮಾದರಿಯು ಆರಂಭಿಕ ಬೆಲೆ 38,000 ರೂ. ಗಳಿಂದ ಪ್ರಾರಂಭವಾಗಿದ್ದರೆ, ಇದರ 16GB + 1TB ಹೈ- ಎಂಡ್ ಮಾದರಿಯು ಅಂದಾಜು ರೂ. 41,700 ರೂ. ಗಳ ಬೆಲೆಯಲ್ಲಿ ಬಿಡುಗಡೆಯಾಗಿದೆ.


150Wಸಾಮರ್ಥ್ಯದ ರಿಯಲ್ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್ 8GB + 256GB, 12GB + 256GB ಮತ್ತು 16GB + 256GB ಮೂರು ಮಾದರಿಗಳಲ್ಲಿ ಕ್ರಮವಾಗಿ 29,800 ರೂ., 32,100 ರೂ. ಮತ್ತು 34,500 ರೂ.ಗಳಲ್ಲಿ ಲಭ್ಯವಿದೆ.

Related post

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…
ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…

Leave a Reply

Your email address will not be published. Required fields are marked *