ತಾಯಿಯಾಗುತ್ತಿರುವ ಸಂಭ್ರಮದಲ್ಲಿ ‘ಜೋಶ್’ ಸಿನಿಮಾ ನಟಿ ಪೂರ್ಣಾ – ಸಕ್ಕತ್ ವೈರಲ್ ಆಗುತ್ತಿದೆ ಸೀಮಂತದ ಫೋಟೋಸ್..
- ಮನರಂಜನೆ
- February 6, 2023
- No Comment
- 253
ನ್ಯೂಸ್ ಆ್ಯರೋ : ಕನ್ನಡದ ಜೋಶ್ ಸೇರಿದಂತೆ ದಕ್ಷಿಣ ಭಾರತ ಪ್ರಮುಖ ಸಿನಿ ರಂಗದಲ್ಲಿ ಗುರುತಿಸಿಕೊಂಡ ಬಹುಭಾಷಾ ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಕಾಸೀಮ್ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ ಉದ್ಯಮಿ ಶಮೀದ್ ಅವರೊಂದಿಗೆ ವಿವಾಹವಾದ ಪೂರ್ಣಾ ಇದೀಗ ಸೀಮಂತದ ಸಂಭ್ರಮದಲ್ಲಿದ್ದಾರೆ. ಆ ಸುಂದರ ಕ್ಷಣಗಳ ಫೊಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಶಾಮ್ನಾ ಮೂಲತಃ ಮಲೆಯಾಳಂ ಚಿತ್ರರಂಗದವರು. ಆದರೂ ಕೂಡ ಹಲವು ಚಿತ್ರರಂಗದಲ್ಲಿ ನಾಯಕಿಯಾಗಿ, ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ‘ಜೋಶ್’ ಸಿನಿಮಾಗೆ ನಾಯಕಿಯಾಗುವ ಮೂಲಕ ಶಮ್ನಾ ಚಂದನವನಕ್ಕೆ ಎಂಟ್ರಿಯಾಗಿದ್ದರು. ಅನಂತರ ಕನ್ನಡದ ರಾಧನ ಗಂಡ ಮತ್ತು ರಮೇಶ್ ಅರವಿಂದ್ ಜತೆಗೆ 100 ಶೀರ್ಷಿಕೆ ಚಿತ್ರದಲ್ಲೂ ನಟಿಸಿದ್ದಾರೆ.
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರದಲ್ಲೂ ಹೆಚ್ಚು ಗುರುತಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಇತ್ತೀಚೆಗೆ ಟೀಸರ್ ಮೂಲಕ ಸದ್ದು ಮಾಡಿದ ನಾನಿ ಅಭಿನಯದ ‘ದಸರಾ’ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ‘ಅಮ್ಮಾಯಿ, ಪಿಸಾಸು2’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಮಲೆಯಾಳಂ ಭಾಷೆಯ ಹಲವು ಚಿತ್ರಗಳಲ್ಲೂ ಶಮ್ನಾ ಬಣ್ಣ ಹಚ್ಚಿದ್ದಾರೆ.
ಇದೀಗ, ಸೋಶಿಯಲ್ ಮೀಡಿಯಾದಲ್ಲಿ ಇವರ ಸೀಮಂತದ ಸುಂದರ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿದೆ. ಸೀಮಂತದಲ್ಲಿ ಕಂದು ಬಣ್ಣದ ಬೆಳ್ಳಿ ವರ್ಣದ ಅಂಚಿನ ಸೀರೆ, ಕೈಗಳಿಗೆ ಆಕರ್ಷಕ ಮೆಹಂದಿ, ಮೈ ತುಂಬ ಆಭರಣಗಳನ್ನು ಧರಿಸಿ ಶಮ್ನಾ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಶಮ್ನಾ ಅವರಿಗೆ ಭರಪೂರ ಶುಭಾಶಯಗಳು ಹರಿದು ಬಂದಿವೆ.