ವಿಶ್ವದ ಅತ್ಯಂತ ಚಿಕ್ಕ ಚಮಚ ತಯಾರಿಸಿ ಗಿನ್ನಿಸ್ ದಾಖಲೆ ಬರೆದ ಜೈಪುರದ ಯುವಕ – ಆ ಚಮಚ ಹೇಗಿದೆ ಗೊತ್ತಾ..?

ವಿಶ್ವದ ಅತ್ಯಂತ ಚಿಕ್ಕ ಚಮಚ ತಯಾರಿಸಿ ಗಿನ್ನಿಸ್ ದಾಖಲೆ ಬರೆದ ಜೈಪುರದ ಯುವಕ – ಆ ಚಮಚ ಹೇಗಿದೆ ಗೊತ್ತಾ..?

ನ್ಯೂಸ್ ಆ್ಯರೋ : ನಾವು ನೀವು ಹೋಟೆಲ್ ಗೆ ಹೋದಾಗ ಬಗೆಬಗೆಯ ತಿಂಡಿ ಇನ್ನಲು ವಿವಿಧ ರೂಪದ ಚಮಚಗಳನ್ನು ಬಳಸುತ್ತೇವೆ. ಕೆಲ ಹುಡುಗಿಯರು ಲಿಪ್ ಸ್ಟಿಕ್ ಹಾಳಾಗದಿರಲಿ ಅಂತ ಚಮಚ ಬಳಸಿದರೆ, ಮತ್ತೆ ಕೆಲವರು ಸ್ಟೈಲ್ ಆಗಿರಲಿ ಎಂದು ಚಮಚ ಬಳಸುತ್ತಾರೆ. ಆದರೆ ಇಲ್ಲೊಬ್ಬ ಯುವಕ ಆ ಚಮಚದಿಂದಲೆ ಗಿನ್ನೆಸ್ ದಾಖಲೆ ಪುಟ ಸೇರಿದ್ದಾನೆ.

ಕೇಳುವುದಕ್ಕೆ ಆಶ್ಚರ್ಯವಾದರೂ ಇದು ಸತ್ಯ ಸಂಗತಿ. ಜೈಪುರದ ನಿವಾಸಿಯಾಗಿರುವ ನವ್ರತನ್ ಎಂಬ ಯುವಕನೇ ಈ ನೂತನ ದಾಖಲೆ ನಿರ್ಮಿಸಿದ ಸಾಧಕ. ಬಾಲ್ಯದಿಂದಲೂ ನವ್ರತನ್ ಅವರಿಗೆ ಏನಾದರೊಂದು ಸಾಧನೆ ಮಾಡಬೇಕೆಂಬ ತುಡಿತ ಇತ್ತಂತೆ. ಅದೇ ಹಾದಿಯಲ್ಲಿ ಸಾಕಷ್ಟು ಪ್ರಯತ್ನಗಳನ್ನು‌ ಕೂಡ ಮಾಡುತ್ತಿದ್ದರಂತೆ. ಕೊನೆಗೆ ಅವರ ಕೈ ಹಿಡಿದದ್ದು ಚಮಚ. ಸದ್ಯ ವಿಶ್ವದ ಅತ್ಯಂತ ಚಿಕ್ಕದಾದ ಚಮಚವನ್ನು ತಯಾರಿಸಿದ ಹಿರಿಮೆ ನವ್ರತನ್ ಅವರದ್ದಾಗಿದೆ‌.

ಜೈಪುರದ ನವ್ರತನ್ ಪ್ರಜಾಪತಿ ತಯಾರಿಸಿದ ಈ ಚಮಚ 2 ಮಿಲಿ ಮೀಟರ್ ಇದೆ. ಈ ಚಮಚವನ್ನು ಮರದಿಂದ ತಯಾರಿಸಲಾಗಿದೆ. ಸದ್ಯ ಇದೇ ಚಮಚ ಜಗತ್ತಿನ ಅತ್ಯಂತ ಚಿಕ್ಕದಾದ ಚಮಚ ಎನಿಸಿಕೊಂಡಿದೆ, ಜೊತೆಗೆ ಈ ಸಾಧನೆ ಗಿನ್ನೆಸ್ ಪುಟ ಸೇರಿದೆ.

ನವ್ರತನ್ ಪ್ರಜಾಪತಿ ಅವರಿಗಿಂತ ಮೊದಲು ತೆಲಂಗಾಣದ ಗೌರಿಶಂಕರ ಎಂಬಾತ 2021ರಲ್ಲಿ 4.6 ಮಿಲಿ‌ ಮೀಟರ್ ಉದ್ದದ ಸ್ಪೂನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದಿದ್ದರು. ಆದರೆ ಇದೀಗ ನವ್ರತನ್ ಮಾಡಿರುವ ಸ್ಪೂನ್ ಅದಕ್ಕಿಂತಲೂ ಚಿಕ್ಕದಾಗಿದ್ದು. ಗಿನ್ನೆಸ್ ದಾಖಲೆಯಲ್ಲಿ ನವ್ರತನ್ ಹೆಸರು ಅಚ್ಚಾಗುವಂತಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *