ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್, ಆತ ನನ್ನ ದೇಹವನ್ನು ಸಿಗರೇಟ್‌ನಿಂದ ಸುಡುತ್ತಿದ್ದ – ಮಾಜಿ ಪ್ರಿಯಕರನ ಬಗ್ಗೆ ನಟಿಯಿಂದ ಸಾಲು ಸಾಲು ಆರೋಪ

ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್, ಆತ ನನ್ನ ದೇಹವನ್ನು ಸಿಗರೇಟ್‌ನಿಂದ ಸುಡುತ್ತಿದ್ದ – ಮಾಜಿ ಪ್ರಿಯಕರನ ಬಗ್ಗೆ ನಟಿಯಿಂದ ಸಾಲು ಸಾಲು ಆರೋಪ

ನ್ಯೂಸ್ ಆ್ಯರೋ : ಒಂದು ಕಾಲದಲ್ಲಿ ನಟ ಸಲ್ಮಾನ್ ಖಾನ್ ಜತೆ ಸಂಬಂಧ ಹೊಂದಿದ್ದ ನಟಿ ಸೋಮಿ ಅಲಿ ಅವರು ಈಚೆಗೆ ತಮ್ಮ ಮಾಜಿ‌ ಪ್ರಿಯತಮ ತನಗೆ ನೀಡಿದ ಟಾರ್ಚರ್ ಬಗ್ಗೆ ಸಾಮಾಜಿಕ ಜಾಲತಣದಲ್ಲಿ ಸಾಲು ಸಾಲು ಆರೋಪವನ್ನು ಮಾಡಿದ್ದಾರೆ.

ಸಲ್ಮಾನ್ ಖಾ‌ನ್ ಹಾಗು ಸೋಮಿ ಅಲಿ ಅವರು 90 ರ ದಶಕದಲ್ಲಿ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳಿದ್ದವು. ಇದೀಗ ಈ ಸಂಬಂಧವನ್ನು ನಟಿ‌ ಒಪ್ಪಿಕೊಂಡಿದ್ದಾರೆ.

ಗುರುವಾರ ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್‌ ಖಾನ್‌ ಜೊತೆಗಿನ ತನ್ನ ಆಪಾದಿತ ನಿಂದನೀಯ ಸಂಬಂಧವನ್ನು ನೆನಪಿಸಿಕೊಂಡು, ತಾನು ಅನುಭವಿಸಿದ ಚಿತ್ರಹಿಂಸೆಗಳ ಬಗ್ಗೆ ಮಾತನಾಡಿದ್ದಾರೆ.

“ಮುಂಬೈನಲ್ಲಿದ್ದಾಗ ನನ್ನ ಮನೆಯ ಸಹಾಯಕರು ಸೇರಿದಂತೆ ಎಲ್ಲರಿಗೂ ಸಲ್ಮಾನ್ ಖಾನ್ ನನ್ನನ್ನು ದೈಹಿಕವಾಗಿ ಹಿಂಸಿಸುತ್ತಾನೆ ಎಂದು ತಿಳಿದಿತ್ತು. ನನ್ನ ಕೆಲಸದಾಕೆ ಹಿಂಸೆ ನೀಡಬೇಡಿ ಎಂದು ಸಲ್ಮಾನ್ ಖಾನ್ ಬಳಿ ಬೇಡಿಕೊಳ್ಳುತ್ತಿದ್ದಳು. ನನ್ನ ದೇಹದಲ್ಲಿದ್ದ ಗಾಯವನ್ನು ಮರೆಮಾಚಲು ಮೇಕಪ್ ಮ್ಯಾನ್ ಪ್ರಯತ್ನಿಸುತ್ತಿದ್ದರು’.

“ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್. ಸಿಗರೇಟ್‌ನಿಂದ ಸುಡುತ್ತಿದ್ದ” ಎಂದು ಆರೋಪಿಸಿದ್ದಾರೆ. ನಾನು ಮಾನಸಿಕ, ಲೈಂಗಿಕ ಮತ್ತು ದೈಹಿಕ ಕಿರುಕುಳವನ್ನು ಅನುಭವಿಸಿದ್ದೆ” ಎಂದು ಅವರು ಹೇಳಿದ್ದಾರೆ.

ಪ್ರಚಾರಕ್ಕಾಗಿ ಸಲ್ಮಾನ್ ಹೆಸರನ್ನು ಬಯಸುತ್ತಿಲ್ಲ. ಆತ ನನಗೆ ನೀಡಿದ ಕಿರುಕುಳವನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು.‌ ಸಲ್ಮಾನ್‌ ಒಬ್ಬ ಅಹಂಕಾರದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.

ಒಂದೊಮ್ಮೆ ನನ್ನ ತಲೆ ಮೇಲೆ ಥಂಬ್ಸ್ ಅಪ್ ಗ್ಲಾಸ್ ಅನ್ನು ಸುರಿದರು. ಏಕೆಂದರೆ ನನ್ನ ಕೈಯಲ್ಲಿ ರಮ್ ಇತ್ತು ಮತ್ತು ನಾನು ಮೊದಲ ಬಾರಿಗೆ ಆಲ್ಕೋಹಾಲ್ ಅನ್ನು ಸೇವಿಸಲು ಪ್ರಯತ್ನಿಸುತ್ತಿದ್ದೆ. ಇದನ್ನೆಲ್ಲ ಸಹ ಕಲಾವಿದರು ನೋಡಿದ್ದಾರೆ. ಸಲ್ಮಾನ್ ಖಾನ್ ಯಾರಿಗೂ ಹೆದರುವುದಿಲ್ಲ ಎಂದು ಮಾಜಿ ಪ್ರಿಯತಮನ ಬಗ್ಗೆ ಸಾಲು ಸಾಲು ಆರೋಪವನ್ನು ಮಾಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *