ಭಾರತಕ್ಕೆ ಸ್ಥಳಾಂತರಗೊಂಡ ಫೋನ್‌ಪೇ – ವಾಲ್‌ಮಾರ್ಟ್‌ ಮೇಲೆ 1 ಶತಕೋಟಿ ಡಾಲರ್‌ ತೆರಿಗೆ

ಭಾರತಕ್ಕೆ ಸ್ಥಳಾಂತರಗೊಂಡ ಫೋನ್‌ಪೇ – ವಾಲ್‌ಮಾರ್ಟ್‌ ಮೇಲೆ 1 ಶತಕೋಟಿ ಡಾಲರ್‌ ತೆರಿಗೆ

ನ್ಯೂಸ್‌ ಆ್ಯರೋ : ಫೋನ್‌ಪೇ ಭಾರತೀಯ ಡಿಜಿಟಲ್ ಪಾವತಿ ಕಂಪೆನಿಯು ತನ್ನ ಪ್ರಧಾನ ಕಚೇರಿಯನ್ನು ಭಾರತಕ್ಕೆ ಸ್ಥಳಾಂತರಿಸಲು 1 ಶತಕೋಟಿ ಡಾಲರ್‌ ತೆರಿಗೆಯನ್ನು ಪಾವತಿಸಿರುವುದಾಗಿ ತಿಳಿದುಬಂದಿದೆ. ಈ ಮೂಲಕ ಫೋನ್‌ಪೇ ಫ್ಲಿಪ್‌ಕಾರ್ಟ್‌ ತೆಕ್ಕೆಯಿಂದ ಹೊರಬಂದಿದ್ದು, ಇನ್ಮುಂದೆ ಸ್ವತಂತ್ರವಾಗಿ ಕೆಲಸ ಮಾಡಲಿದೆ.

ಫ್ಲಿಪ್‌ಕಾರ್ಟ್‌ನಿಂದ ಬೇರೆಯಾಗಿರುವ ಫೋನ್‌ಪೇ ಪ್ರಧಾನ ಕಚೇರಿಯನ್ನು ಸಿಂಗಾಪುರದಿಂದ ಭಾರತಕ್ಕೆ ಸ್ಥಳಾಂತರಿಸಲಿದೆ. ಇದರಲ್ಲಿ ಗಮನಿಸಬೇಕಾದ ಮಾಹಿತಿ ಏನೆಂದರೆ ಈ ಎರಡೂ ಸಂಸ್ಥೆಗಳ ದೊಡ್ಡ ಪಾಲುದಾರನಾಗಿ ಅಮೆರಿಕಾದ ವಾಲ್‌ಮಾರ್ಟ್‌ ಗುರುತಿಸಿಕೊಂಡಿದೆ.

ಇದುವರೆಗೆ ಫ್ಲಿಪ್‌ಕಾರ್ಟ್‌ ತೆಕ್ಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫೋನ್‌ಪೇ ಇನ್ನು ಮುಂದಿನ ದಿನಗಳಲ್ಲಿ ಸ್ವತಂತ್ರ ಭಾರತೀಯ ಉದ್ಯಮವಾಗಿ ಗುರುತಿಸಿಕೊಳ್ಳಲಿದೆ. ಇದಕ್ಕಾಗಿ ಪ್ರಧಾನ ಕಚೇರಿಯನ್ನು ಭಾರತದಲ್ಲಿ ಸ್ಥಾಪನೆ ಮಾಡಲಿದೆ.

ಡಿಸೆಂಬರ್‌ನಲ್ಲಿ ಫ್ಲಿಪ್‌ಕಾರ್ಟ್ ಮತ್ತು ಫೋನ್‌ಪೇ ತಮ್ಮ ಪ್ರತ್ಯೇಕತೆಯನ್ನು ಪೂರ್ಣಗೊಳಿಸಿದ್ದು, ಎರಡೂ ಘಟಕಗಳು ವಾಲ್‌ಮಾರ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ಈ ವಹಿವಾಟಿನ ಭಾಗವಾಗಿ ವಾಲ್‌ಮಾರ್ಟ್ ನ ಅಸ್ತಿತ್ವದಲ್ಲಿರುವ ಫ್ಲಿಪ್‌ಕಾರ್ಟ್ ಸಿಂಗಾಪುರ ಮತ್ತು ಫೋನ್‌ಪೇ ಸಿಂಗಾಪುರದ ಷೇರುದಾರರು ನೇರವಾಗಿ ಫೋನ್‌ಪೇ ಭಾರತದಲ್ಲಿ ಷೇರುಗಳನ್ನು ಖರೀದಿಸಿದ್ದಾರೆ. ಇದು ಫೋನ್‌ಪೇ ಅನ್ನು ಸಂಪೂರ್ಣವಾಗಿ ಭಾರತದ ಕಂಪೆನಿಯನ್ನಾಗಿ ಮಾಡುವ ಕ್ರಮವಾಗಿದೆ.

ಫೋನ್‌ಪೇ ಈಗಾಗಲೇ ಜನರಲ್ ಅಟ್ಲಾಂಟಿಕ್, ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿ ಸೇರಿದಂತೆ ಇತರರಿಂದ ಸುಮಾರು 12 ಶತಕೋಟಿ ಡಾಲರ್‌ ಮೌಲ್ಯದೊಂದಿಗೆ ಭಾರಿ ಹಣವನ್ನು ಸಂಗ್ರಹಿಸಿದೆ. ಇದರ ನಂತರ ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಭಾರತದಲ್ಲಿ ಫೋನ್‌ಪೇ ಷೇರುಗಳನ್ನು ಹೊಸ ಬೆಲೆಗೆ ಖರೀದಿಸಿದೆ. ಇದರಿಂದಾಗಿ ಕಂಪೆನಿಯು ಸುಮಾರು ₹8 ಸಾವಿರ ಕೋಟಿ ತೆರಿಗೆ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.

ಇಲ್ಲಿಯವರೆಗೆ ಫೋನ್‌ಪೇ ತನ್ನ ಸಂಪೂರ್ಣ ವ್ಯವಹಾರ ಮತ್ತು ಕಾರ್ಯಾಚರಣೆಯನ್ನು ಸಿಂಗಾಪುರದಿಂದ ಮಾಡುತ್ತಿತ್ತು. ಈ ಮೂಲಕ ಸಿಂಗಾಪುರದಿಂದ ಸಾರ್ವಜನಿಕರಿಗೆ ವಿದೇಶಿ ವಿನಿಮಯ ಸೌಲಭ್ಯಗಳನ್ನು ಒದಗಿಸುವುದು ಕೂಡ ಸುಲಭವಾಗಿತ್ತು. ಆದರೆ, ಇನ್ಮುಂದೆ ಈ ಎಲ್ಲಾ ಕಾರ್ಯಗಳು ಭಾರತದಿಂದಲೇ ಜರುಗುತ್ತದೆ. ಅದರಲ್ಲೂ ಬೆಂಗಳೂರಿನಿಂದಲೇ ಎನ್ನುವುದು ಇನ್ನಷ್ಟು ವಿಶೇಷ.

ಸಿಂಗಾಪುರ ಇಂಡಿಯಾ ಬ್ರೀಫಿಂಗ್ ವರದಿ ಗಮನಿಸಿದರೆ ದೇಶದ 8 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಸಿಂಗಾಪುರದಲ್ಲಿಯೇ ಇವೆಯಂತೆ. ಇದೆಲ್ಲದರ ನಡುವೆ ಫೋನ್‌ ಪೇ ಮಾತ್ರ ಸಿಂಗಾಪುರ ಬಿಟ್ಟು ಬರುತ್ತಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಭಾರತದ ಕಂಪೆನಿಯಾಗುತ್ತಿರುವುದು, ಇನ್ನೊಂದು ಫ್ಲಿಪ್‌ಕಾರ್ಟ್‌ನಿಂದ ಬೇರ್ಪಟ್ಟಿರುವುದು, ಮತ್ತೊಂದು ಈಗಾಗಲೇ ಫೋನ್‌ಪೇ ಸಾಕಷ್ಟು ಹಣ ಸಂಗ್ರಹಿಸಿರುವುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *