ಪ್ರಧಾನ ಮಂತ್ರಿ ಜನಧನ್ ಯೋಜನೆಯಲ್ಲಿ ಶೂನ್ಯ ಠೇವಣಿ ಮೂಲಕ ಖಾತೆ ತೆರೆಯಬಹುದು..!! – ಇದರ ಅರ್ಹತೆಗಳೇನು? ಅದರಿಂದಾಗುವ ಲಾಭಗಳೇನು..?ಇಲ್ಲಿದೆ ಮಾಹಿತಿ..

ಪ್ರಧಾನ ಮಂತ್ರಿ ಜನಧನ್ ಯೋಜನೆಯಲ್ಲಿ ಶೂನ್ಯ ಠೇವಣಿ ಮೂಲಕ ಖಾತೆ ತೆರೆಯಬಹುದು..!! – ಇದರ ಅರ್ಹತೆಗಳೇನು? ಅದರಿಂದಾಗುವ ಲಾಭಗಳೇನು..?
ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ : ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಅನ್ನು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದರು. ದುರ್ಬಲ ವರ್ಗಕ್ಕೆ ಸೇರಿದ ಜನರು ಮತ್ತು ಕಡಿಮೆ-ಆದಾಯ ಗುಂಪು ರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ಸೇವೆಗಳಿಗೆ ಪ್ರವೇಶ ಪಡೆಯುವ ಮಹತ್ವಾಕಾಂಕ್ಷೆಯೊಂದಿಗೆ ಈ ಯೋಜನೆ ಆರಂಭಿಸಲಾಯಿತು. ಈ ಯೋಜನೆಯಡಿ ಗರಿಷ್ಠ ಮಟ್ಟದಲ್ಲಿ ಬ್ಯಾಂಕ್‌ ಖಾತೆ ತೆರೆಯುವ ಗುರಿ ಹೊಂದಲಾಗಿದೆ. PMJDY ಮೂಲಕ, ವ್ಯಕ್ತಿಗಳು ಬ್ಯಾಂಕಿಂಗ್, ಉಳಿತಾಯ ಮತ್ತು ಠೇವಣಿ ಖಾತೆ, ಹಣ ರವಾನೆ, ಪಿಂಚಣಿ, ಮತ್ತು ಕ್ರೆಡಿಟ್ ವಿಮೆ ಸೌಲಭ್ಯ ಪಡೆಯಬಹುದು.

ಯಾವುದೇ ವಾಣಿಜ್ಯ ಬ್ಯಾಂಕ್ ಶಾಖೆಯಲ್ಲಿ ಜನಧನ ಖಾತೆ ತೆರೆಯಬಹುದು. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ, ವ್ಯಕ್ತಿಗಳು ಶೂನ್ಯ ಠೇವಣಿ ಖಾತೆ (ಝೀರೋ ಬ್ಯಾಲೆನ್ಸ್‌ ಅಕೌಂಟ್‌) ತೆರೆಯಬಹುದು. ಆದರೆ, ಖಾತೆದಾರನಿಗೆ ಚೆಕ್‌ಬುಕ್ ಅಗತ್ಯವಿದ್ದರೆ, ಮಿನಿಮಮ್‌ ಬ್ಯಾಲೆನ್ಸ್‌ಗೆ ಸಂಬಂಧಿಸಿದ ಷರತ್ತುಗಳನ್ನು ಪೂರೈಸಬೇಕು.

ಈ ಯೋಜನೆಯ ಉತ್ತಮ ಅಂಶವೆಂದರೆ, ಯಾವುದೇ ವ್ಯಕ್ತಿ ಈ ಯೋಜನೆಯಡಿ ಖಾತೆ ತೆರೆಯಬಹುದು. ಅದರ ಚೆಕ್ ಬುಕ್‌ ಬಳಸಲು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಕಡ್ಡಾಯ. ಆದರೆ, ಖಾತೆ ತೆರೆಯಲು ಯಾವುದೇ ಶುಲ್ಕವಿಲ್ಲ.

ಅರ್ಹತೆಗಳೇನು..?

ಭಾರತೀಯ ಪ್ರಜೆಗಳಾಗಿರಬೇಕು
10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಕೂಡ ಈ ಯೋಜನೆಯಡಿ ಖಾತೆ ತೆರೆಯಲು ಅರ್ಹರು
ಆದರೆ, ಅಪ್ರಾಪ್ತ ವಯಸ್ಕರ ಖಾತೆಗಳನ್ನು, ಮಕ್ಕಳು ವಯಸ್ಕರಾಗುವವರೆಗೆ ಪೋಷಕರು ನಿರ್ವಹಿಸುತ್ತಾರೆ.
ಅಪ್ರಾಪ್ತ ವಯಸ್ಕರು ರುಪೇ ಕಾರ್ಡ್‌ಗೆ ಅರ್ಹರಾಗಿರುತ್ತಾರೆ, ಇದನ್ನು ತಿಂಗಳಿಗೆ ನಾಲ್ಕು ಬಾರಿ ಹಣ ಹಿಂಪಡೆಯಲು ಬಳಸಬಹುದು.

ಈಗಾಗಲೇ ಉಳಿತಾಯ ಖಾತೆ ಹೊಂದಿರುವ ವ್ಯಕ್ತಿಗಳು ಕೂಡ ಈ ಯೋಜನೆಯಡಿ ಖಾತೆ ತೆರೆಯಬಹುದು.
ಒಂದು ವೇಳೆ ಭಾರತೀಯ ಪ್ರಜೆ ಎಂದು ಪ್ರಾಮಾಣೀಕರಿಸಲು ದಾಖಲೆಗಳನ್ನು ಹೊಂದಿಲ್ಲದಿದ್ದರೆ, ಅವರು ತಾತ್ಕಾಲಿಕ ಖಾತೆ ತೆರೆಯಲು ಅನುಮತಿಸಲಾಗಿದೆ, ಖಾತೆ ತೆರೆದ ದಿನಾಂಕದಿಂದ 12 ತಿಂಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಶಾಶ್ವತ ಖಾತೆಯಾಗಿ ಮಾರ್ಪಡಿಸಬಹುದು.

ಆಫ್‌ಲೈನ್ ಅಪ್ಲಿಕೇಶನ್‌ಗೆ ಈ ದಾಖಲೆಗಳು ಅಗತ್ಯ

PMJDY ಯೋಜನೆಯಡಿ ಖಾತೆ ತೆರೆಯಲು ವಿಳಾಸ ಪುರಾವೆ ಹೊಂದಿರಬೇಕು. (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಖಾಯಂ ಖಾತೆ ಸಂಖ್ಯೆ (PAN), ಮತದಾರರ ಗುರುತಿನ ಚೀಟಿ ಮತ್ತುಆಧಾರ್ ಕಾರ್ಡ್ ಮೊದಲಾದವು)

ಖಾತೆ ತೆರೆಯಲು ಆಧಾರ್ ಕಾರ್ಡ್ ಕಡ್ಡಾಯ ದಾಖಲೆಯಾಗಿದೆ. ಆಧಾರ್ ಸಂಖ್ಯೆ ಹೊಂದಿಲ್ಲದಿದ್ದರೆ, ಕೂಡಲೇ ಆಧಾರ್‌ಗಾಗಿ ನೋಂದಾಯಿಸಿಕೊಂಡು, ನಂತರ ಅರ್ಜಿ ಸಲ್ಲಿಸಬೇಕು.
ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕು.
PMJDY ಯೋಜನೆಯಡಿಯಲ್ಲಿ ಖಾತೆಯನ್ನು ತೆರೆಯಲು ಹತ್ತಿರದ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಆನ್‌ಲೈನ್ ಮೂಲಕ ಖಾತೆ ತೆರೆಯಬಹುದು

ನೀವು ಪಿಎಂ ಜನ್ ಧನ್ ಯೋಜನೆ ಖಾತೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ತೆರೆಯಬಹುದು. ಆನ್‌ಲೈನ್ ಅರ್ಜಿ ನಮೂನೆ ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಲಭ್ಯವಿದೆ. ಅರ್ಜಿ ನಮೂನೆಯನ್ನು PMJDY ಯ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು. ಆನ್‌ಲೈನ್‌ನಲ್ಲೇ ಅರ್ಜಿಯ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅದನ್ನು ಸಲ್ಲಿಸಬಹುದು. ನಾಮಿನಿಗೆ ಸಂಬಂಧಿಸಿದ ಮಾಹಿತಿ ಮತ್ತು ಖಾತೆಯನ್ನು ಎಲ್ಲಿ ತೆರೆಯಲಾಗುತ್ತಿದೆ ಎಂಬುದರ ಜೊತೆಗೆ ಅಗತ್ಯ ವಿವರಗಳನ್ನು ಒದಗಿಸಬೇಕು. ಈ ಯೋಜನೆಯಡಿ ತೆರೆಯಲಾದ ಉಳಿತಾಯ ಖಾತೆಗಳ ಠೇವಣಿ ಮೇಲೆ ಬಡ್ಡಿ ನೀಡಲಾಗುತ್ತದೆ. ವಿವಿಧ ಬ್ಯಾಂಕ್‌ಗಳಲ್ಲಿ ವಿವಿಧ ಬಡ್ಡಿ ದರಗಳನ್ನು ನಿಗದಿಪಡಿಸಿವೆ.

ಈ ಸರ್ಕಾರಿ ಯೋಜನೆಗಳ ಪ್ರಯೋಜನ ಲಭ್ಯ

  • ಸರ್ಕಾರದ ವಿವಿಧ ಯೋಜನೆಗಳ ಧನಸಹಾಯವನ್ನು ನೇರವಾಗಿ ಫಲಾನುಭವಿಯ ಜನ್ ಧನ್ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಸರ್ಕಾರದ ಯಾವುದಾದ್ರೂ ಯೋಜನೆ ಫಲಾನುಭವಿಯಾಗಿದ್ರೆ ಈಗ ಈ ಹಿಂದಿನಂತೆ ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾದ ಅಗತ್ಯವಿಲ್ಲ. ಬದಲಿಗೆ ಹಣ ನೇರವಾಗಿ ನಿಮ್ಮ ಜನ್ ಧನ್ ಖಾತೆಗೆ ಜಮೆ ಆಗುತ್ತದೆ.

*ಪಿಎಂಜಿಡಿವೈ ಖಾತೆಗಳಿಗೆ ನೇರ ಲಾಭ ವರ್ಗಾವಣೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ,ಅಟಲ್ ಪಿಂಚಣಿ ಯೋಜನೆ, ಕಿರು ಘಟಕ ಅಭಿವೃದ್ಧಿ ಹಾಗೂ ಮರುಹಣಕಾಸು ಏಜೆನ್ಸಿ ಬ್ಯಾಂಕ್ ಯೋಜನೆಯ ಪ್ರಯೋಜನಗಳು ಸಿಗುತ್ತವೆ.

*ಜನ್‍ಧನ್ ಖಾತೆ ತೆರೆದವರಿಗೆ ರುಪೇ ಡೆಬೆಟ್ ಕಾರ್ಡ್ ನೀಡಲಾಗುತ್ತದೆ. ಇದರ ಮೂಲಕ ನೀವು ಎಟಿಎಂ ಕೇಂದ್ರಗಳಲ್ಲಿ ನಿಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಬಹುದು. ಅಲ್ಲದೆ, ಆನ್‍ಲೈನ್ ಅಥವಾ ಶಾಪ್‍ಗಳಲ್ಲಿ ವಸ್ತುಗಳನ್ನು ಖರೀದಿಸಿದ ಬಳಿಕ ರುಪೇ ಕಾರ್ಡ್ ಬಳಸಿ ಪೇಮೆಂಟ್ ಮಾಡಬಹುದಾಗಿದೆ.

*2018 ಆಗಸ್ಟ್ 28ರ ಬಳಿಕ ತೆರೆದ ಖಾತೆಗಳಿಗೆ ಆಕಸ್ಮಿಕ ವಿಮೆ ಸೌಲಭ್ಯ ಕಲ್ಪಿಸಲಾಗಿದ್ದು, ಈ ಖಾತೆ ಹೊಂದಿರೋರಿಗೆ 2ಲಕ್ಷ ರೂ. ತನಕ ಅಪಘಾತ ವಿಮೆ ಕವರೇಜ್ ನೀಡಲಾಗಿದೆ.

*ಖಾತೆದಾರ ಮೃತ್ಯುವಾದ್ರೆ 30ಸಾವಿರ ರೂ. ಜೀವ ವಿಮೆ ನೀಡಲಾಗುತ್ತದೆ. ಆದ್ರೆ ಈ ಸೌಲಭ್ಯ ಪಡೆಯಲು ಕೆಲವು ಷರತ್ತುಗಳಿದ್ದು, ಅವರ ಮೃತ್ಯು ಅದಕ್ಕೆ ಅನುಗುಣವಾಗಿ ಆಗಿದ್ರೆ ಮಾತ್ರ ವಿಮೆ ಹಣ ಸಿಗುತ್ತೆ. ಈ ಖಾತೆ ಹೊಂದಿರೋರು ದೇಶಾದ್ಯಂತ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.

OD ಸೌಲಭ್ಯ ಪಡೆಯಲು ಅರ್ಹತೆಗಳೇನು?

ಎರಡು ಸಾವಿರ ರೂ. ತನಕ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಯಾವುದೇ ನಿಯಮ ಅಥವಾ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಆದ್ರೆ ಅದಕ್ಕಿಂತ ಹೆಚ್ಚಿನ OD ಸೌಲಭ್ಯ ಪಡೆಯಲು ನೀವು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು.

ನೀವು ಜನ್ ಧನ್ ಖಾತೆ ತೆರೆದು ಕನಿಷ್ಠ 6 ತಿಂಗಳಾಗಿದ್ರೆ ಮಾತ್ರ 10 ಸಾವಿರ ರೂ. OD ಸೌಲಭ್ಯ ಪಡೆಯಬಹುದು. ಒಂದು ವೇಳೆ ಆರು ತಿಂಗಳಾಗದಿದ್ರೆ 2000ರೂ. ತನಕ ಮಾತ್ರ OD ಸೌಲಭ್ಯ ಪಡೆಯಲು ಸಾಧ್ಯ. ಇನ್ನು OD ಸೌಲಭ್ಯ ಪಡೆಯಲು ಈ ಹಿಂದೆ 60 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿತ್ತು. ಆದ್ರೆ ಈಗ ಆ ಗರಿಷ್ಠ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಿಸಲಾಗಿದೆ.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *