ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಾಮಿಡಿ ಕಿಲಾಡಿ’ ಹಿತೇಶ್ ಕಾಪಿನಡ್ಕ – ಹತ್ತು ವರ್ಷದ ಪ್ರೀತಿಗೆ ಮುದ್ರೆ ಹಾಕಿದ ಪ್ಯಾಕೂ ಪ್ಯಾಕೂ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಾಮಿಡಿ ಕಿಲಾಡಿ’ ಹಿತೇಶ್ ಕಾಪಿನಡ್ಕ – ಹತ್ತು ವರ್ಷದ ಪ್ರೀತಿಗೆ ಮುದ್ರೆ ಹಾಕಿದ ಪ್ಯಾಕೂ ಪ್ಯಾಕೂ

ನ್ಯೂಸ್ ಆ್ಯರೋ : ಕಾಮಿಡಿ ಕಿಲಾಡಿಗಳು ‘ಪ್ಯಾಕೂ ಪ್ಯಾಕೂ’ ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಅವರು ಪ್ರೀತಿಸಿದ ಹುಡುಗಿ ಜತೆ ಕಳೆದ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಕಲ್ಯಾಣಕ್ಕೆ ಕುಟುಂಬಸ್ಥರು, ಆಪ್ತರು,‘ಕಾಮಿಡಿ ಕಿಲಾಡಿಗಳು’, ಕಲಾವಿದರು ಸಾಕ್ಷಿಯಾಗಿದ್ದರು. ಡಿಸೆಂಬರ್ 19, 2021 ರಂದು ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಅವರ ನಿಶ್ಚಿತಾರ್ಥ ನಡೆದಿತ್ತು.

10 ವರ್ಷದ ಪ್ರೀತಿಗೆ ಮದುವೆಯ ಮುದ್ರೆ:

ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಕಳೆದ ಒಂದು ದಶಕದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಹಿತೇಶ್ ಕುಮಾರ್ ಕಾಪಿನಡ್ಕ ಮತ್ತು ಸ್ವಾತಿ ಒಂದೇ ಗ್ರಾಮಕ್ಕೆ ಸೇರಿದವರು. ದೇವಸ್ಥಾನವೊಂದರಲ್ಲಿ ಸ್ವಾತಿ ಅವರನ್ನು ಹಿತೇಶ್ ಮೊದಲ ಬಾರಿಗೆ ನೋಡಿದ್ದರು. ಆನಂತರ ಪರಿಚಯವಾದ ಇವರಿಬ್ಬರು ಸ್ನೇಹಿತರಾದರು. ಸ್ನೇಹ ಪ್ರೀತಿಗೆ ತಿರುಗಿದೆ. ಇದೀಗ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ.

ಜೀ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಹಿತೇಶ್ ಕುಮಾರ್ ಕಾಪಿನಡ್ಕ ಎರಡನೇ ರನ್ನರ್ ಅಪ್ ಆಗಿ ಹೆಸರು ಗಳಿಸಿದ್ದರು. ಇವರ ಲೇಡಿ ಗೆಟಪ್ ಮಾತ್ರ ವೀಕ್ಷರಿಗೆ ಹೊಟ್ಟೆ ಹುಣ್ಣಾಗಿಸುತ್ತಿತ್ತು. ಅದಾದ ಬಳಿಕ ಇವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು.

ಗೋವಿಂದೇ ಗೌಡ ನಿರ್ದೇಶನದ ‘ಜಂತರ್ ಮಂತರ್’, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಗೀತಾ’, ಮನೋರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್‌ಪೇಟೆ’, ‘ಯಜಮಾನ’, ‘ಏಕ್‌ ಲವ್ ಯಾ’ ಮುಂತಾದ ಸಿನಿಮಾಗಳಲ್ಲಿ ಹಿತೇಶ್ ಕುಮಾರ್ ಕಾಪಿನಡ್ಕ ಮಿಂಚಿದ್ದಾರೆ. ತುಳು ಸಿನಿಮಾಗಳಲ್ಲೂ ಹಿತೇಶ್ ಕುಮಾರ್ ಕಾಪಿನಡ್ಕ ಕಾಣಿಸಿಕೊಂಡಿದ್ದಾರೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *