ಸರ್ಕಲ್ ಇನ್ಸ್‌ಪೆಕ್ಟರ್ ಜೊತೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಲವ್ವಿಡವ್ವಿ – ಅಕ್ರಮ ಸಂಬಂಧ ಹೊಂದಿದ ಇಬ್ಬರಿಗೂ ಶಾಕ್ ಕೊಟ್ಟ ಕಮೀಷನರ್

ಸರ್ಕಲ್ ಇನ್ಸ್‌ಪೆಕ್ಟರ್ ಜೊತೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಲವ್ವಿಡವ್ವಿ – ಅಕ್ರಮ ಸಂಬಂಧ ಹೊಂದಿದ ಇಬ್ಬರಿಗೂ ಶಾಕ್ ಕೊಟ್ಟ ಕಮೀಷನರ್

ನ್ಯೂಸ್ ಆ್ಯರೋ : ಸರ್ಕಲ್​ ಇನ್ಸ್​ಪೆಕ್ಟರ್​ ಹಾಗೂ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ನಡುವಿನ ಲವ್ವಿಡವ್ವಿ ಪ್ರಕರಣ ತೆಲಂಗಾಣದ ವಾರಂಗಲ್​ನಲ್ಲಿ ನಡೆದಿದ್ದು, ಮಹಿಳಾ ಸಬ್​ ಇನ್ಸ್​ಪೆಕ್ಟರ್​ ಪತಿಯ ದೂರಿನ ಹಿನ್ನೆಲೆಯಲ್ಲಿ ವಾರಂಗಲ್​ ಪೊಲೀಸ್​ ಕಮಿಷನರ್​ ರಂಗನಾಥ್​ ಅವರು ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವಾರಂಗಲ್ ನ ಗೆಸಿಗೊಂಡ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ರಾಯಲ ವೆಂಕಟೇಶ್ವರಲು ಮತ್ತು ದಮೇರಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಹರಿಪ್ರಿಯಾ ಅಮಾನತಾದ ಅಧಿಕಾರಿಗಳು. ಇಬ್ಬರ ಮಿತಿ ಮೀರಿದ ವರ್ತನೆಯಿಂದಾಗಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ಪೈಕಿ ಎಸ್​ಐ ಹರಿಪ್ರಿಯಾ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಆದರೂ ಮೊದಲಿನಿಂದಲೂ ಪರಿಚಯವಿದ್ದ ಸಿಐ ವೆಂಕಟೇಶ್ವರಲು ಜೊತೆ ತಮ್ಮ ರೊಮ್ಯಾನ್ಸ್​ ಮುಂದುವರಿಸಿದ್ದರು. ಪತ್ನಿ ಹರಿಪ್ರಿಯಾ ವರ್ತನೆಯ ಬಗ್ಗೆ ಗಂಡನಿಗೆ ಅನುಮಾನವಿತ್ತು. ಅಲ್ಲದೆ, ಪತ್ನಿಯ ವಾಟ್ಸ್​ಆಯಪ್​ ಚಾಟ್​ ಅನ್ನು ಗಂಡ ಗಮನಿಸಿದ್ದ.

ಸಿಐ ಮತ್ತು ಎಸ್​ಐ ನಡುವೆ ತುಂಬಾ ಸಲುಗೆಯ ಚಾಟಿಂಗ್​ ನಡೆಯುತ್ತಿತ್ತು. ಬಳಿಕ ವಾರಂಗಲ್​ ಕಮಿಷನರ್​ಗೆ ಹರಿಪ್ರಿಯಾ ಗಂಡ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸ್​ ಕಮಿಷನರ್​ಗೆ ಸಿಐ ಮತ್ತು ಎಸ್​ಐ ನಡುವೆ ಲವ್ವಿಡವ್ವಿ ಇರುವುದು ತಿಳಿದಿದೆ. ತಕ್ಷಣವೇ ಇಬ್ಬರನ್ನು ಅಮಾನತು ಮಾಡುವ ಮೂಲಕ ಕ್ರಮ ಜರುಗಿಸಿದ್ದು, ಪೋಲಿಸ್ ಅಧಿಕಾರಿಗಳ ಈ ವರ್ತನೆ ಭಾರೀ ಚರ್ಚೆ ಹುಟ್ಟುಹಾಕಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *