ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಬಂದು ಬಿತ್ತು 657 ಕೋಟಿ ಆದಾಯ – ಹೊಸ ವರ್ಷ ಸಂಭ್ರಮದಲ್ಲಿ ಎಣ್ಣೆಯ ಅಲೆಯಲ್ಲಿ ತೇಲಾಡಿದ ಪಾನಪ್ರಿಯರು‌

ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಬಂದು ಬಿತ್ತು 657 ಕೋಟಿ ಆದಾಯ – ಹೊಸ ವರ್ಷ ಸಂಭ್ರಮದಲ್ಲಿ ಎಣ್ಣೆಯ ಅಲೆಯಲ್ಲಿ ತೇಲಾಡಿದ ಪಾನಪ್ರಿಯರು‌

ನ್ಯೂಸ್ ಆ್ಯರೋ : ಕೊರೊನಾದಿಂದಾಗಿ ಕಳೆದ ಮೂರು ವರ್ಷದಿಂದ ಹೊಸ ವರ್ಷವನ್ನು ಸಂಭ್ರಮಿಸಲಾಗಿರಲಿಲ್ಲ. ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶ ಸಿಕ್ಕಿತ್ತು. ಹಾಗಾಗಿ ಇಡೀ ರಾಜ್ಯದ ಜನರು ರಾತ್ರಿಯೆಲ್ಲ ಕಣಿದು ಕುಪ್ಪಳಿಸುವ ಮೂಲಕ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಇಡೀ ಜಗತ್ತು 2022ಗೆ ಗುಡ್ ಬಾಯ್ ಹೇಳಿ 2023 ಬರಮಾಡಿಕೊಂಡಿದೆ. ಇನ್ನು ಹೊಸ ವರ್ಷವೆಂದ ಮೇಲೆ ಗುಂಡು ತುಂಡು ಇರಲೇಬೇಕು. ಹೊಸ ವರ್ಷದ ಆರಂಭದಲ್ಲಿ ಭರ್ಜರಿ ಎಣ್ಣೆ ಮಾರಾಟ ಮಾಡುವ ಮೂಲಕ ಅಬಕಾರಿ ಇಲಾಖೆ ಬಂಪರ್​ ಬೆಳೆ ಬೆಳೆದಿದೆ. ಹೊಸ ವರ್ಷಕ್ಕೆ ಲಕ್ಷ ಲಕ್ಷ ಲೀಟರ್ ಮದ್ಯವನ್ನು ಪಾನಪ್ರಿಯರು ಹೊಟ್ಟೆಗಿಳಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ರೂ. ಆದಾಯ ಹರಿದು ಬಂದಿದ್ದು, ಕಳೆದ ಒಂಬತ್ತು ದಿನದಲ್ಲಿ ಅಬಕಾರಿ ಇಲಾಖೆ ಭರ್ಜರಿ ಮದ್ಯ ಮಾರಾಟ ಮಾಡಲಾಗಿದೆ.

ಹೌದು… ಕಳೆದ 9 ದಿನಗಳಲ್ಲಿ ಅತ್ಯಧಿಕ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದ್ದು, ಒಂಬತ್ತು ದಿನಗಳಲ್ಲಿ ಒಟ್ಟು 657 ಕೋಟಿ ರೂಪಾಯಿ ಅಬಕಾರಿ ಇಲಾಖೆಯ ಬೊಕ್ಕಸ ಸೇರಿದೆ.

ಡಿಸೆಂಬರ್ 23ರಿಂದ 31ರವರೆಗೆ ಐಎಂಎಲ್​ ಮದ್ಯ 20.66 ಲಕ್ಷ ಲೀಟರ್ ಮಾರಾಟವಾಗಿದ್ರೆ, 15.04 ಲಕ್ಷ ಲೀಟರ್ ಬಿಯರ್ ಮಾರಾಟಗೊಂಡಿದೆ. ಇನ್ನು ಡಿ.31ರಂದು ಒಂದೇ ದಿನ 181 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ವರದಿಯಾಗಿದೆ.

ಹೊಸವರ್ಷ ಸಂಬಂಧ ಚರ್ಚ್ ಸ್ಟ್ರೀಟ್​ಪಬ್​ಗಳಿಗೆ ಫುಲ್​​ ಡಿಮ್ಯಾಂಡ್ ಇತ್ತು. ಕೊರೊನಾ ನಂತರ ಅದ್ಧೂರಿಯಾಗಿ ಹೊಸ ವರ್ಷಾಚರಣೆ ಆಚರಿಸಿದ್ದು, ಪಬ್ ಮಾಲೀಕರು ಹೊಸ ವರ್ಷದ ಪಾರ್ಟಿಗೆ ಪ್ರತಿ ಬಾರಿಗಿಂತ ಇಂದು ಶೇ.50 ರಷ್ಟು ಬೆಲೆ ಏರಿಕೆ ಮಾಡಿದ್ದರು. ದುಪ್ಪಟ್ಟು ಚಾರ್ಚ್ ನಡುವೆಯೂ ಪಬ್​ಗಳು ಹೌಸ್ ಫುಲ್ ಆಗಿದ್ದವು. ಪಾರ್ಟಿ ಪ್ರಿಯರು ದುಪ್ಪಟ್ಟು ಹಣ ಕೊಟ್ಟು ಮುಂಗಡ ಬುಕ್ಕಿಂಗ್ ಮಾಡಿದ್ದರು.

ಪಬ್​ಗಳಲ್ಲಿ ಮೋಜು ಮಸ್ತಿ ಮಾಡೋರಿಗೆ ಸ್ಪೆಷಲ್ ಪ್ಯಾಕೇಜ್ ಕೊಡಲಾಗಿತ್ತು. ಪಾರ್ಟಿ ಪ್ರಿಯರನ್ನು ಅಟ್ರ್ಯಾಕ್ಟ್ ಮಾಡಲು ಅನ್ ಲಿಮಿಟೆಡ್ ಆಫರ್ ವ್ಯವಸ್ಥೆ ನೀಡಲಾಗಿತ್ತು. ಕಪಲ್ಸ್, ಫ್ಯಾಮಿಲಿ, ಸಿಂಗಲ್ಸ್​ಗಳಿಗೆ ಪ್ರತ್ಯೇಕ ಚಾರ್ಜ್ ಫಿಕ್ಸ್​ ಮಾಡಲಾಗಿತ್ತು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *