ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್; ಮಾರುಕಟ್ಟೆಯಲ್ಲಿ ಕುಸಿದ ಬಂಗಾರದ ಬೆಲೆ!
ನ್ಯೂಸ್ ಆ್ಯರೋ: ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆಯಲ್ಲಿ ಕುಸಿತ ಉಂಟಾಗುತ್ತಿದೆ. ಮದುವೆ ಹಾಗೂ ಹಬ್ಬಗಳ ಸೀಜನ್ ಇದಾಗಿರುವುದರಿಂದ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಭಾರೀ ಮಟ್ಟಕ್ಕೆ ಏರಲಿದೆ ಎಂಬ ಊಹೆಗಳಿದ್ದವು. ಆದ್ರೆ ಬಂಗಾರ ಹಾಗೂ ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇಷ್ಟು ದಿನ ಗ್ರಾಹಕರ ಜೇಬಿಗೆ ಭಾರವಾಗಿದ್ದ ಬಂಗಾರ ಈಗ ಹಗುರವಾಗಿದೆ.
ಮದುವೆಗಳು ನಡೆಯುವ ಕಾಲ ಇದಾಗಿರುವುದರಿಂದ ಬಂಗಾರದ ಬೆಲೆಯಲ್ಲಿ ಆಗುತ್ತಿರುವ ಇಳಿಕೆಯನ್ನು ಕಂಡು ಜನರು ಖುಷ್ ಆಗಿದ್ದಾರೆ. ಸದ್ಯ ಬಂಗಾರದ ಬೆಲೆ 10 ಗ್ರಾಂಗೆ 69,500 ರೂಪಾಯಿಗೆ ಇಳಿಕೆಯಾಗಿದೆ.
ಭಾರತದಲ್ಲಿ ಸದ್ಯ 22 ಕ್ಯಾರೆಟ್ ಬಂಗಾರ 69,490 ರೂಪಾಯಿಗೆ ತಲುಪಿದೆ.ಗೋಲ್ಡ್ ರಿಟರ್ನ್ ವೆಬ್ಸೈಟ್ ಪ್ರಕಾರ 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ 75,640 ರೂಪಾಯಿಯಷ್ಟು ಇತ್ತು. ಇನ್ನು 18 ಕ್ಯಾರೆಟ್ ಬಂಗಾರ ಪ್ರತಿ 10 ಗ್ರಾಂಗೆ 56, 730 ರೂಪಾಯಿಯಷ್ಟು ಭಾನುವಾರ ದಾಖಲಾಗಿತ್ತು.
ಇದು ಬಂಗಾರದ ಬೆಲೆಯ ಬದಲಾವಣೆ ಆದರೆ, ಬೆಳ್ಳಿಯ ಬೆಲೆ ಇಂದು ಕೆಜಿಗೆ 89,400 ರೂಪಾಯಿಗೆ ಇಳಿಕೆಯಾಗಿದೆ.ಇನ್ನು ದೆಹಲಿಯಲ್ಲಿ ಪ್ರತಿ ಗ್ರಾಂ ಚಿನ್ನದ ದರ 6,949ರಷ್ಟಿದೆ,. ನೊಯ್ಡಾ ಹಾಗೂ ಲಖನೌನಲ್ಲಿ ದೆಹಲಿಯ ದರವೇ ಇದೆ. ಮುಂಬೈ, ಬೆಂಗಳೂರು ಹಾಗೂ ಚೆನ್ನೈನಲ್ಲಿ ದೆಹಲಿಗಿಂತ ಕಡಿಮೆಯಿದೆ. ಇಲ್ಲಿ ಪ್ರತಿ ಗ್ರಾಂ ಬಂಗಾರದ ಬೆಲೆ 6,934 ರೂಪಾಯಿಯಷ್ಟಿದೆ.
Leave a Comment