ವೈದ್ಯರನ್ನು ದಿಗ್ಭ್ರಮೆಗೊಳಿಸಿದ ಸ್ಟೋರಿ; ಹಲ್ಲುಜ್ಜುವಾಗ ಆಕಸ್ಮಿಕವಾಗಿ ಬ್ರಶ್ ನುಂಗಿದ ಮಹಿಳೆ
ನ್ಯೂಸ್ ಆ್ಯರೋ: ಮಹಾರಾಷ್ಟ್ರದ ಪುಣೆಯ ಮಹಿಳೆಯೊಬ್ಬರು ನಾಲಿಗೆಯನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ 20 ಸೆಂ.ಮೀ ಉದ್ದದ ಟೂತ್ ಬ್ರಷ್ ಅನ್ನು ನುಂಗಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿ ಈ ರೀತಿ ನಡೆದ ಮೊದಲ ಪ್ರಕರಣವಾಗಿದೆ. ಇದು ಇಡೀ ದೇಶದ ವೈದ್ಯಕೀಯ ತಜ್ಞರನ್ನು ದಿಗ್ಭ್ರಮೆಗೊಳಿಸಿದೆ. ಪುಣೆಯ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ತಕ್ಷಣ ಆಪರೇಷನ್ ಮಾಡಿ ಬ್ರಶ್ ಅನ್ನು ಹೊರಗೆ ತೆಗೆದು, ಆಕೆ ಉಸಿರುಗಟ್ಟಿ ಸಾಯುವುದರಿಂದ ರಕ್ಷಿಸಲಾಯಿತು.
ಕಳೆದ ವರ್ಷ ಟೂತ್ ಬ್ರಷ್ ಅನ್ನು ನುಂಗಿ ಸ್ಪ್ಯಾನಿಷ್ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ಭಾರತದಲ್ಲಿ ಕೂಡ ಅಂತಹದ್ದೇ ಘಟನೆ ನಡೆದಿದೆ. ಪುಣೆಯ ಮಹಿಳೆಯೊಬ್ಬರು ನಾಲಿಗೆಯನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ 20 ಸೆಂ.ಮೀ ಉದ್ದದ ಟೂತ್ ಬ್ರಷ್ ಅನ್ನು ನುಂಗಿದ್ದಾರೆ.
“ಮೊದಲಿಗೆ ಇದು ಅಸಾಧ್ಯವೆಂದು ತೋರುತ್ತಿದೆ” ಎಂದು ಆಪರೇಷನ್ಗೆ ಹಾಜರಾದ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಅಭಿಜೀತ್ ಕರದ್ ಅವರು ಪುಣೆ ಮಿರರ್‌ಗೆ ಪ್ರತಿಕ್ರಿಯಿಸಿ, ಮಹಿಳೆಯು ಟೂತ್ ಬ್ರಷ್ ಅನ್ನು ಹೇಗೆ ನುಂಗಿರಬಹುದು ಎಂದು ಆಶ್ಚರ್ಯಪಟ್ಟಿದ್ದರು.
ಟೂತ್ ಬ್ರಷ್ ನುಂಗುವಿಕೆ ವಿಶ್ವಾದ್ಯಂತ ಬಹಳ ಅಪರೂಪವಾಗಿದೆ. ಈ ರೀತಿಯ 30ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಟೂತ್ ಬ್ರಶ್ ನುಂಗುವವರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಸ್ಕಿಜೋಫ್ರೇನಿಯಾ, ಬುಲಿಮಿಯಾ ಅಥವಾ ಅನೋರೆಕ್ಸಿಯಾದಿಂದ ಬಳಲುತ್ತಿರುವವರು ಕೂಡ ಆಗಿರಬಹುದು ಎಂದು ಹೇಳಿದ್ದಾರೆ.
Leave a Comment