ಮುದ್ದಿನ ಮೊಲ ಕಚ್ಚಿ ಪ್ರಾಣಬಿಟ್ಟ ಮಹಿಳೆ; ಅಸಲಿಗೆ ಆಗಿದ್ದೇನು..?

rabbit
Spread the love

ನ್ಯೂಸ್ ಆ್ಯರೋ: ಸಾಕಿದ ಮೊಲವೇ ಕಡಿದು ಮಹಿಳೆಯೊಬ್ಬರು ಸಾವನ್ನಪ್ಪಿರುವಂತಹ ಆಘಾತಕಾರಿ ಘಟನೆ ಕೇರಳದ ಅಲಪ್ಪುಳ ತಕಾಝೀಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪತ್ನಿ ಶಾಂತಮ್ಮ (63) ಎಂದು ಗುರುತಿಸಲಾಗಿದೆ. ಮಹಿಳೆಗೆ ಮೊಲ ಕಚ್ಚಿದ ಬಳಿಕ ರೇಬೀಸ್ ಲಸಿಕೆಯನ್ನು ಹಾಕಲಾಗಿತ್ತು. ಮೂರನೇ ಡೋಸ್ ಪಡೆದರೂ ಮಹಿಳೆ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ.

ವರದಿಗಳ ಪ್ರಕಾರ, ಮಹಿಳೆ ಅಕ್ಟೋಬರ್ 21 ರಂದು ಅಲಪ್ಪುಳ ವೈದ್ಯಕೀಯ ಕಾಲೇಜಿನಿಂದ ಲಸಿಕೆಯನ್ನು ಪಡೆದಿದ್ದರು. ಚುಚ್ಚುಮದ್ದಿನ ನಂತರ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ. ಲಸಿಕೆ ಹಾಕಿದ ಬಳಿಕ ಶಾಂತಮ್ಮ ಅವರ ದೇಹ ಸಂಪೂರ್ಣ ದುರ್ಬಲಗೊಂಡಿದ್ದು, ಮಾತನಾಡುವ ಸಾಮರ್ಥ್ಯ ಕಳೆದುಕೊಂಡಿದ್ದರು ಎಂದು ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.

ಪರೀಕ್ಷೆಯ ಡೋಸ್‌ನಲ್ಲಿಯೇ ಅಲರ್ಜಿ ಸ್ಪಷ್ಟವಾಗಿತ್ತು, ಆದರೆ ಎಲ್ಲಾ ಮೂರು ಡೋಸ್ ಲಸಿಕೆಗಳನ್ನು ತೆಗೆದುಕೊಂಡಿದ್ದರು. ಲಸಿಕೆ ಹಾಕಿದ ಬಳಿಕ ಶಾಂತಮ್ಮ ನಿತ್ರಾಣಳಾಗಿದ್ದಳು. ವೆಂಟಿಲೇಟರ್‌ನಲ್ಲಿದ್ದ ಶಾಂತಮ್ಮ ಅವರನ್ನು ನಂತರ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು.

ಲಸಿಕೆ ತೆಗೆದುಕೊಂಡ ಬಳಿಕ ಅದರ ಅಡ್ಡ ಪರಿಣಾಮದಿಂದ ಇಂತಹ ಸ್ಥಿತಿ ಉಂಟಾಗಿರಬಹುದು ಹಾಗೂ ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ ಎಂದು ವೈದ್ಯಕೀಯ ಕಾಲೇಜು ಅಧಿಕಾರಿಗಳು ವಿವರಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!