ಚಳಿಗಾಲದಲ್ಲಿ ಕೂದಲಿನ ಆರೈಕೆ ಅತೀ ಮುಖ್ಯ; ನಿಮ್ಮ ತಲೆಕೂದಲನ್ನು ಕಾಪಾಡಿಕೊಳ್ಳಲು ಒಂದಿಷ್ಟು ಸರಳ ಟಿಪ್ಸ್

Hair
Spread the love

ನ್ಯೂಸ್ ಆ್ಯರೋ: ಚಳಿಗಾಲವೆಂದರೆ ಆ ಸಮಯ ಹೆಪ್ಪುಗಟ್ಟುವ ಸಮಯವಾಗಿರುತ್ತದೆ. ಕೆಲವೊಂದು ಕಡೆ ಮಂಜಿನ ಮಳೆಯಾಗುತ್ತದೆ. ಆದರೆ ಕೆಲವೊಂದು ಕಡೆ ಮಂಜಿನ ಮಳೆಯಾಗದಿದ್ದರೂ ಚಳಿ ಮಾತ್ರ ಅಧಿಕವಾಗಿರುತ್ತದೆ. ಚಳಿಗಾಲದ ಸಮಯದಲ್ಲಿ ದೇಹವನ್ನು ಆರೈಕೆ ಮಾಡುವುದು ಕಷ್ಟದ ಕೆಲಸ. ಯಾಕೆಂದರೆ ಚಳಿಗಾಲದಲ್ಲಿ ಚರ್ಮ ಮತ್ತು ಕೂದಲಿನ ಆರೈಕೆ ತುಂಬಾ ಕಷ್ಟ. ಚರ್ಮ ಹಾಗೂ ಕೂದಲು ಚಳಿಗಾಲದಲ್ಲಿ ಒಣಗಿದಂತಾಗುತ್ತದೆ. ಈ ಸಮಯದಲ್ಲಿ ಹೇರ್ ಡ್ರೈಯರ್ ಅಥವಾ ಬೇರೆ ಯಾವುದೇ ಕೂದಲಿನ ಉಪಕರಣಗಳನ್ನು ಬಳಸಬೇಡಿ. ಒಂದು ವೇಳೆ ಬಳಸಿದರೂ ಮೊದಲು ಕಂಡೀಷನರ್ ಹಾಕಿಕೊಳ್ಳಿ.

ಚಳಿಗಾಲದಲ್ಲಿ ತಲೆಬುರುಡೆ ಕೂಡ ಒಣಗಿ ಹೋಗುವ ಕಾರಣದಿಂದ ತಲೆಹೊಟ್ಟಿನ ಸಮಸ್ಯೆ, ಕಿಣ್ವಗಳಿಂದ ತಲೆಕೂದಲು ಉದುರಬಹುದು. ತಲೆಬುರುಡೆಯನ್ನು ಸ್ವಚ್ಛವಾಗಿಡಲು ತಲೆಬುರುಡೆಗೆ ಕೆಲವು ಹನಿ ತೆಂಗಿನೆಣ್ಣೆ, ಆಲೀವ್ ಅಥವಾ ಜೊಜೊಬಾ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುವುದು. ತಲೆಹೊಟ್ಟು ನಿವಾರಣೆ ಮಾಡುವಂತಹ ಶಾಂಪೂ ಹಾಕಿಕೊಂಡು ವಾರದಲ್ಲಿ ಒಂದು ಸಲ ಕೂದಲು ತೊಳೆದುಕೊಂಡರೆ ತುಂಬಾ ಒಳ್ಳೆಯದು.

ಬಾಳೆಹಣ್ಣು ಹಾಗೂ ಜೇನುತುಪ್ಪ ಬಾಳೆಹಣ್ಣು, ಎರಡು ಚಮಚ ಜೇನುತುಪ್ಪ ಮತ್ತು ಕೆಲವು ಹನಿ ಆರ್ಗಾನ್ ಎಣ್ಣೆಯನ್ನು ಹಾಕಿಕೊಂಡು ದಪ್ಪ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಂಡು 30-40 ನಿಮಿಷ ಕಾಲ ಬಿಟ್ಟು ಕೂದಲನ್ನು ತೊಳೆದರೆ ಆಗ ಕೂದಲಿಗೆ ಒಳ್ಳೆಯ ಕಾಂತಿ ಬರುವುದು. ಇದು ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಮಾಡಬಹುದಾದ ಮನೆಮದ್ದಾಗಿದೆ. ಕೂದಲಿಗೆ ಆಳವಾಗಿ ಕಂಡೀಷನ್ ಮಾಡುವುದು. ಕೂದಲಿಗೆ ಸ್ಪಾ ಚಿಕಿತ್ಸೆ, ಬಿಸಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಕೊಳ್ಳುವುದು ಮತ್ತು ಶಾಂಪೂ ಹಾಕಿಕೊಳ್ಳುವ ಮೊದಲು ಸ್ಟೀಮ್ ಮಾಡಿಸಿಕೊಳ್ಳುವುದು ಚಳಿಗಾಲದಲ್ಲಿ ಮಾಡಬಹುದಾದ ಸಾಮಾನ್ಯ ಕೂದಲಿನ ಆರೈಕೆಯ ಕ್ರಮಗಳು.

ಚಳಿಗಾಲದಲ್ಲಿ ಕೂದಲು ಒರಟು ಹಾಗೂ ಒಣಗಿದಂತೆ ಕಾಣುತ್ತದೆ. ಇದು ಮಾಯಿಶ್ಚರೈಸ್ ಅನ್ನು ಕಳೆದುಕೊಳ್ಳುತ್ತದೆ ಹಾಗೂ ಕೂದಲಿನ ಅಂದವನ್ನು ಬದಲಾಯಿಸುತ್ತದೆ. ಹಾಗಾಗಿ ಬಿಸಿ ಎಣ್ಣೆಯ ಮಸಾಜ್ ಕೂದಲಿನ ಶೈಲಿಯನ್ನು ಬದಲಾಯಿಸುತ್ತದೆ, ಹಾಗೂ ಮರು – ಹೈಡ್ರೇಟ್ಸ್ ಅನ್ನು ಒದಗಿಸುತ್ತದೆ. ಬಿಸಿ ಎಣ್ಣೆಯು ಚಳಿಗಾಲದಲ್ಲಿ ಉಂಟಾಗಿರುವ ಕೂದಲಿನ ಒರಟನ್ನು ಹೋಗಲಾಡಿಸುತ್ತದೆ. ಬಿಸಿ ಎಣ್ಣೆ ಮಸಾಜ್ ಅನ್ನು ಯಾವುದೇ ಎಣ್ಣೆಯನ್ನು ಬಳಸಿಕೊಂಡು ಕೂಡ ಮಾಡಬಹುದು. ಚಲಿಗಾಲದಲ್ಲಿ ಇದನ್ನು ನಿರಂತರವಾಗಿ ಮಾಡಿದರೆ, ತುಂಬಾ ಉಪಯುಕ್ತವಾಗಿರುತ್ತದೆ.

ಚಳಿಗಾಲದ ತಂಪು ವಾತಾವರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೆಚ್ಚಿನ ಮಹಿಳೆಯರು ತಮ್ಮ ನೀಳಕೂದಲನ್ನು ಕಟ್ಟುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಕೂದಲಿನ ಬುಡ ತೆಳ್ಳಗಾಗ ತೊಡಗುತ್ತದೆ. ಇದು ಬಕ್ಕತಲೆಯನ್ನುಂಟು ಮಾಡಬಹುದು, ಅಲ್ಲದೆ ತಲೆಹೊಟ್ಟನ್ನು ಉಂಟು ಮಾಡಿ ಕೂದಲಿಗೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಒದ್ದೆಕೂದಲನ್ನು ಎಂದಿಗೂ ಕಟ್ಟಬೇಡಿ. ಈ ರೀತಿಯ ತಪ್ಪುಗಳನ್ನು ಜನರು ಚಳಿಗಾಲದಲ್ಲಿ ಮಾಡುತ್ತಾರೆ. ಚಳಿಗಾಲದಲ್ಲಿ ಕೇಶ ರಕ್ಷಣೆ ಅತೀ ಅವಶ್ಯಕ ಮತ್ತು ಇದಕ್ಕೆ ಬೇಕಾದ ಆರೈಕೆಯನ್ನು ಮಾಡಲು ಮರೆಯದಿರಿ.

ಪ್ರತಿ ಋತುವಿಗೆ ಅನುಗುಣವಾಗಿ ನಿಮ್ಮ ಶ್ಯಾಂಪು ಮತ್ತು ಕಂಡೀಷನರ್‌ಗಳನ್ನು ಬದಲಾಯಿಸಿ. ನಿಮ್ಮ ಕೂದಲಿಗೆ ಹೊಂದಿಕೊಳ್ಳುವ ಶ್ಯಾಂಪುವನ್ನು ಚಳಿಗಾಲದಲ್ಲಿ ಬಳಸಿ. ಕೂದಲು ತಜ್ಞರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಶ್ಯಾಂಪು ಮತ್ತು ಕಂಡೀಷನರ್ ಬಳಸಿ.

Leave a Comment

Leave a Reply

Your email address will not be published. Required fields are marked *

error: Content is protected !!