80 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್ಆ್ಯಪ್ ಖಾತೆಗಳು ಬ್ಯಾನ್; ಇದಕ್ಕೆ ಕಾರಣ ಏನು ಗೊತ್ತಾ?

ನ್ಯೂಸ್ ಆ್ಯರೋ: ವಾಟ್ಸ್ಆ್ಯಪ್ ಅತ್ಯಂತ ತ್ವರಿತವಾಗಿ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ಈಗಾಗಲೇ ವಿಶ್ವದಾದ್ಯಂತ ಕೋಟಿಗೂ ಅಧಿಕ ಜನರು ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ಇತ್ತ ಭಾರತದಲ್ಲೂ ವಾಟ್ಸ್ಆ್ಯಪ್ ಬಳಕೆಯ ಜೊತೆಗೆ ದೈನಂದಿನ ವ್ಯವಹಾರ ಮಾಡಲು ಯೋಗ್ಯವಾದ ಅಪ್ಲಿಕೇಶನ್ ಎಂದೆನಿಸಿಕೊಂಡಿದೆ. ಹೀಗಿರುವಾಗ ಭಾರತೀಯರ 80 ಲಕ್ಷಕ್ಕೂ ಅಧಿಕ ಖಾತೆಗಳನ್ನ ವಾಟ್ಸ್ಆ್ಯಪ್ ಬ್ಯಾನ್ ಮಾಡಿದೆ.
ವಾಟ್ಸ್ಆ್ಯಪ್ ಜನಪ್ರಿಯತೆ ಜೊತೆಗೆ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಸ್ಕ್ಯಾಮರ್ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾಟ್ಸ್ಆ್ಯಪ್ ಬಳಸಿಕೊಂಡು ಬೆದರಿಕೆ, ವಂಚನೆ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಅಂತಹ ಅನುಮಾನದ ಖಾತೆಗಳನ್ನು ಪರಿಶೀಲಿಸಿ ನಿಷೇಧಿಸಿದೆ. ಸುಮಾರು 8,458.000 ಲಕ್ಷ ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.
ಮಾಹಿತಿ ತಂತ್ರಜ್ಞಾನದ ನಿಯಮದ ಪ್ರಕಾರ, 2021ರ ನಿಯಮ 4(1)(ಡಿ) ಮತ್ತು 3ಎ (7)ಗೆ ಅನುಗುಣವಾಗಿ ಪ್ರಕಟವಾದ ವರದಿಯಂತೆ, ವಾಟ್ಸ್ಆ್ಯಪ್ ತನ್ನ ನೀತಿಯನ್ನು ಉಲ್ಲಂಘಿಸುವ ಮತ್ತು ತೊಡಗಿಸಿಕೊಳ್ಳುವ ಖಾತೆಗಳ ವಿರುದ್ಧ ಜಾಗರೂಕತೆಯನ್ನು ಸಾರಿದೆ. ಹೀಗಾಗಿ ವಾಟ್ಸ್ಆ್ಯಪ್ ಬಳಕೆದಾರರ ಸುರಕ್ಷತೆ ಬಗ್ಗೆ ಗಮನಹರಿಸಿ ಆನ್ಲೈನ್ ವಂಚನೆ ತಡೆಯಲು 80 ಲಕ್ಷಕ್ಕೂ ಅಧಿಕ ಖಾತೆಗಳನ್ನು ಬ್ಯಾನ್ ಮಾಡಿದೆ.
1,661,000 ಖಾತೆಗಳನ್ನು ಬಳಕೆದಾರರ ದೂರುಗಳನ್ನು ಸ್ವೀಕರಿಸುವ ಮೊದಲೇ ಪತ್ತೆಹಚ್ಚಿ ಕ್ರಮ ಕೈಗೊಂಡಿದೆ. 2024ರಲ್ಲಿ ವಾಟ್ಸ್ಆ್ಯಪ್ ತನ್ನ ಕಾರ್ಯವಿಧಾನದ ಮೂಲಕ 10,707 ಬಳಕೆದಾರರಿಮದ ದೂರನ್ನು ಸ್ವೀಕರಿಸಿಕೊಂಡಿದೆ. ಅದರಲ್ಲಿ 93 ದೂರುಗಳ ಮೇಲೆ ಕ್ರಮ ಕೈಗೊಂಡಿದೆ.
Leave a Comment