ಇಂದಿನಿಂದ ಬದಲಾಗಲಿದೆ ಫಾಸ್ಟ್ಟ್ಯಾಗ್ ನಿಯಮ; ದುಪ್ಪಟ್ಟು ದಂಡ, ಹೊಸ ನಿಯಮಗಳು ಹೀಗಿವೆ

ನ್ಯೂಸ್ ಆ್ಯರೋ: ಇಂದಿನಿಂದ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ವಿಚಾರದಲ್ಲಿ ಹಲವು ನಿಯಮಗಳನ್ನು ಬದಲಾಯಿಸಿದೆ. ಫಾಸ್ಟ್ಟ್ಯಾಗ್ ಟ್ರಾಂಜಕ್ಷನ್ನಲ್ಲಿ ಯಾವುದೇ ರೀತಿಯ ಮೋಸದ ಚಟುವಟಿಕೆಗಳು ಆಗದಂತೆ ತಡೆಯಲು ಬಲಾವಣೆಗಳನ್ನು ಮಾಡಲಾಗಿದೆ.
ಇನ್ಮುಂದೆ ನಿಮ್ಮ ಫಾಸ್ಟ್ಟ್ಯಾಗ್ ಖಾತೆಯಲ್ಲಿ ಹಣ ಇಲ್ಲದೇ ಹೋದಲ್ಲಿ, ಫಾಸ್ಟ್ಟ್ಯಾಗ್ ಖಾತೆ ಕಪ್ಪು ಪಟ್ಟಿಗೆ ಸೇರಿದ್ದರೆ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ದುಪ್ಪಟ್ಟು ಹಣ ಪಾವತಿ ಮಾಡಬೇಕಾಗುತ್ತದೆ. ಅದಕ್ಕಾಗಿ ಇಂದಿನಿಂದ ಹೊಸ ನಿಯಮ ಜಾರಿಗೆ ಬಂದಿದೆ.
ಫಾಸ್ಟ್ಟ್ಯಾಗ್ನಲ್ಲಿ ಹಣ ಇರಬೇಕು, ಇಲ್ಲದಿದ್ದರೆ ಟೋಲ್ ಪ್ರವೇಶಕ್ಕೆ ಒಂದು ಗಂಟೆ ಮೊದಲು ಹಣ ಜಮೆ ಮಾಡಿರಬೇಕು. ಟೋಲ್ ಹತ್ತಿರ ಬಂದ್ಮೇಲೆ ರಿಚಾರ್ಜ್ ಮಾಡಿಸೋಣ ಅಂದ್ರೆ ಇನ್ಮೇಲೆ ಆಗಲ್ಲ. ಟೋಲ್ ದಾಟುವ 60 ನಿಮಿಷ ಮೊದಲು ಹಾಗೂ ದಾಟಿದ 10 ನಿಮಿಷಗಳ ಕಾಲ ಫಾಸ್ಟ್ಟ್ಯಾಗ್ ಆಕ್ಟೀವ್ ಇರಬೇಕು. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ, ಟೋಲ್ ಸಿಸ್ಟಮ್ನಲ್ಲಿ ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ಹಣ ಪಾವತಿ ಮಾಡಬೇಕಾಗುತ್ತದೆ.
ಕೆವೈಸಿ ಮಾಡಿರದ ಕಪ್ಟುಪಟ್ಟಿಗೆ ಸೇರಿಸಲಾಗುತ್ತದೆ. ಅಂತಹ ಟ್ಯಾಗ್ನೊಂದಿಗೆ ಬರುವ ವಾಹನಕ್ಕೆ ದುಪ್ಪಟ್ಟು ಸಂಕು ವಿಧಿಸಲಾಗುತ್ತದೆ. ಒಂದು ವೇಳೆ ವಾಹನ ಟೋಲ್ ಗೇಟ್ ದಾಟಿದ 15 ನಿಮಿಷಗಳ ನಂತರ ಫಾಸ್ಟ್ಟ್ಯಾಗ್ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರು ಹೆಚ್ಚಿನ ಶುಲ್ಕವನ್ನು ವಿಧಿಸಬೇಕಾಗುತ್ತದೆ.
ಟೋಲ್ಗೇಟ್ನಲ್ಲಿ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ತಪ್ಪು ಶುಲ್ಕ ಮತ್ತು ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದು.
Leave a Comment