
ಕೊರಿಯರ್ ಬಾಯ್ ಗೆ 5 ರೂಪಾಯಿ ಪಾವತಿ ಮಾಡಿ 80 ಸಾವಿರ ಕಳಕೊಂಡ ಮಹಿಳೆ – ಆನ್ಲೈನ್ ಬ್ಯಾಂಕಿಂಗ್ ಮಾಡೋರು ಈ ಸುದ್ದಿ ಓದಿ…
- ವೈರಲ್ ನ್ಯೂಸ್
- November 17, 2023
- No Comment
- 82
ನ್ಯೂಸ್ ಆ್ಯರೋ : ಎಷ್ಟೇ ಜಾಗ್ರತೆ ಮಾಡಿಕೊಂಡರೂ ಕೆಲವೊಮ್ಮೆ ನಾವು ಮೋಸ ಹೋಗುತ್ತೇವೆ. ಡಿಜಿಟಲ್ ಯುಗದಲ್ಲಿ ಇಂದು ನಾವಿದ್ದೇವೆ. ಎಲ್ಲಿ, ಯಾವಾಗ, ಹೇಗೆ ಮೋಸ ಹೋಗುತ್ತೇವೆ ಎಂಬುದು ನಮಗೆ ಅರಿವಾಗುವುದಿಲ್ಲ. ಹೀಗಾಗಿ ಸದಾ ಎಚ್ಚರಿಕೆ ಇಂದ ನಾವು ಇರಲೇಬೇಕಾಗುತ್ತದೆ.
ನಾವಿಂದು ಎಲ್ಲ ವ್ಯವಹಾರಗಳನ್ನು ಆನ್‌ಲೈನ್‌ನಲ್ಲೇ ಮಾಡುತ್ತಿದ್ದೇವೆ. ಹೀಗಾಗಿ ಮೋಸ ಮಾಡುವವರೂ ಸುಲಭವಾಗಿ ನಮ್ಮ ಖಾತೆಗೆ ನೇರವಾಗಿ ಕನ್ನ ಹಾಕುತ್ತಿದ್ದಾರೆ. ಕಷ್ಟ ಪಟ್ಟು ದುಡಿದ ಹಣ ಕ್ಷಣ ಮಾತ್ರದಲ್ಲೇ ನಮ್ಮ ಖಾತೆಯಿಂದ ಮಾಯವಾದಾಗ ಎಂತವರಿಗೂ ಒಮ್ಮೆ ಏನು ಮಾಡುವುದು, ಯಾರನ್ನು ಕೇಳುವುದು ಎನ್ನುವ ಚಿಂತೆಯಾಗುವುದು ಸಹಜ.
ಇಲ್ಲೊಬ್ಬರು ಕೊರಿಯರ್ ನವನಿಗೆ 5 ರೂ. ಪಾವತಿ ಮಾಡಲು ಹೋಗಿ 80 ಸಾವಿರ ರೂ. ಕಳೆದುಕೊಂಡಿದ್ದಾರೆ.
ಪಂಜಾಬ್‌ನ ಮೊಹಾಲಿಯ ಶೆಫಾಲಿ ಚೌಧರಿ ಎಂಬ ಮಹಿಳೆ ಡೆಲಿವರಿಯನ್ನು ಸ್ವೀಕರಿಸಲು 5 ರೂ. ಪಾವತಿ ಮಾಡುವಂತೆ ಹೇಳಿದ್ದಾರೆ. ಇದನ್ನು ನಂಬಿದ ಆಕೆ 5 ರೂಪಾಯಿ ಪಾವತಿ ಮಾಡಿ ಎಂದಿದ್ದಾರೆ. ಜೊತೆಗೆ ಆನ್‌ಲೈನ್‌ನಲ್ಲೇ ಆಕೆಯ ವಿಳಾಸವನ್ನು ಖಚಿತಪಡಿಸಿಕೊಂಡಿದ್ದಾರೆ.
ಆನ್ ಲೈನ್ ಖದೀಮರು ಕಳುಹಿಸಿದ ಲಿಂಕ್ ಗೆ ಮಹಿಳೆ 5 ರೂ. ಪಾವತಿ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಮಹಿಳೆಯ ಖಾತೆಯಿಂದ ಎರಡು ಬಾರಿ 40 ಸಾವಿರದಂತೆ ಒಟ್ಟು 80 ಸಾವಿರ ರೂಪಾಯಿ ಹಣ ಕಡಿತಗೊಂಡಿದೆ. ಒಟ್ಟಿನಲ್ಲಿ 5 ರೂ. ಪಾವತಿ ಮಾಡಲು ಹೋಗಿ ಮಹಿಳೆ 80 ಸಾವಿರ ರೂ. ಕಳೆದುಕೊಂಡಿದ್ದಾರೆ.