
ಸಾವಲ್ಲೂ ಜೊತೆಯಾದ ಅಪರೂಪದ ಬಾಳ ಸಂಗಾತಿ – ಅಮೆರಿಕದಲ್ಲಿ ಸಾವಿಗೀಡಾದ ಪತಿಯ ಅಂತ್ಯಕ್ರಿಯೆ ಬಳಿಕ ಪತ್ನಿ ಭಾರತದಲ್ಲಿ ಆತ್ಮಹತ್ಯೆ..!!
- Viral News
- May 27, 2023
- No Comment
- 140
ನ್ಯೂಸ್ ಆ್ಯರೋ : ಅಮೆರಿಕದಲ್ಲಿ ಪತಿ ಹೃದಯಾಘಾತದಿಂದ ಮೃತಪಟ್ಟರೆ ಇತ್ತ ಭಾರತದಲ್ಲಿ ದುಃಖ ತಡೆಯಲಾರದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೋಜ್ (31) ಮತ್ತು ಸಾಹಿತಿ (29) ಮೃತ ದಂಪತಿ.
ಘಟನೆಯ ವಿವರ :
ಅಂಬರಪೇಟೆಯ ಡಿಡಿ ಕಾಲನಿ ನಿವಾಸಿ ಸಾಹಿತಿ ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಮನೋಜ್ ಎಂಬವರನ್ನು ಮದುವೆ ಆಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್ನಲ್ಲಿ ನೆಲೆಸಿದ್ದರು. ಮೇ 2ರಂದು ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಅಮೆರಿಕದಿಂದ ಮರಳಿದ್ದರೆ, ಮನೋಜ್ ಅಮೆರಿಕದಲ್ಲೇ ಉಳಿದುಕೊಂಡಿದ್ದರು.
ಮೇ 20ರಂದು ಮನೋಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇ 23ರಂದು ಮೃತದೇಹವನ್ನು ಅಮೆರಿಕದಿಂದ ವನಸ್ಥಳಿಪುರಂಗೆ ತರಿಸಿಕೊಳ್ಳಲಾಯಿತು. ಮೇ 24ರಂದು ಪತಿಯ ಅಂತ್ಯಕ್ರಿಯೆ ಮುಗಿಸಿ ಅದೇ ದಿನ ರಾತ್ರಿ ತನ್ನ ಪಾಲಕರ ಮನೆಗೆ ಸಾಹಿತಿ ಹಿಂತಿರುಗಿದ್ದರು. ಸಾಹಿತಿಯು ಸಹೋದರಿ ಸಂಜನಾ ಜೊತೆ ಕೋಣೆಯಲ್ಲಿ ಮಲಗಿದ್ದರು. ಸಂಜನಾ ಬೆಳಗ್ಗೆ ವಾಶ್ರೂಮ್ಗೆ ತೆರಳಿದಾಗ ಎದ್ದ ಸಾಹಿತಿ ರೂಮಿನ ಬಾಗಿಲನ್ನು ಲಾಕ್ ಮಾಡಿ, ಫ್ಯಾನಿಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡಿದ್ದಾರೆ.
ಈ ವಿಚಾರ ಗೊತ್ತಾದ ತಕ್ಷಣ ರೂಮಿನ ಬಾಗಿಲು ಒಡೆದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಾಹಿತಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.