
ಸಿಸೇರಿಯನ್ ಮಾಡಿದ ಬಳಿಕ ಮಹಿಳೆಯ ಹೊಟ್ಟೆಯಲ್ಲಿಯೇ ಹತ್ತಿ ಮರೆತುಬಿಟ್ಟ ವೈದ್ಯರು – ಹಾರಿ ಹೋಯಿತು ಬಾಣಂತಿ ಪ್ರಾಣ..!
- ವೈರಲ್ ನ್ಯೂಸ್
- August 23, 2023
- No Comment
- 100
ನ್ಯೂಸ್ ಆ್ಯರೋ : ವೈದ್ಯರೊಬ್ಬರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತೆಲಂಗಾಣದ ನಾಗರಕರ್ನೂಲ್ ಬಳಿ ನಡೆದಿದೆ. ಆಪರೇಷನ್ ಮಾಡಿದ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿಯೇ ಹತ್ತಿಯನ್ನು ಬಿಟ್ಟಿದ್ದರಿಂದ ಅವಘಡ ಸಂಭವಿಸಿದೆ ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.
ಘಟನೆ ವಿವರ
ದರ್ಶನಗಡ ತಾಂಡಾದ ಆದಿವಾಸಿ ಮಹಿಳೆ ರೋಜಾ ಅಚ್ಚಂಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಆಗಸ್ಟ್ 15ರಂದು ಆರೋಗ್ಯವಂತ ಗಂಡುವಿಗೆ ಜನ್ಮ ನೀಡಿದ್ದರು.
ಹೆರಿಗೆಯ ದಿನದಂದೇ ವೈದ್ಯರು ಆಕೆಗೆ ಕುಟುಂಬ ಯೋಜನಾ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಈ ವೇಳೆ ವೈದ್ಯರು ಹತ್ತಿಯನ್ನು ಹೊಟ್ಟೆಯೊಳಗೆ ಮರೆತು ಬಿಟ್ಟು ಹೊಲಿಗೆ ಹಾಕಿದ್ದರು. ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ರೋಜಾ ಸ್ಥಿತಿ ಗಂಭೀರವಾಗಿತ್ತು.
ತೀವ್ರ ರಕ್ತಸ್ರಾವ ಆರಂಭವಾದ ಬಳಿಕ ಆತಂಕಗೊಂಡ ಕುಟುಂಬಸ್ಥರು ಆಕೆಯನ್ನು ಕರೆದುಕೊಂಡು ಅಚ್ಚಂಪೇಟೆ ಸರಕಾರಿ ಆಸ್ಪತ್ರೆಗೆ ತೆರಳಿದರು. ಪರೀಕ್ಷೆ ನಡೆಸಿದ ವೈದ್ಯರು ಸೂಚಿಸಿದ ಹಿನ್ನಲೆಯಲ್ಲಿ ಆಕೆಯನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಹತ್ತಿ ಇರುವುದು ಪತ್ತೆಯಾಯಿತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ಅಚ್ಚಂಪೇಟೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಮಹಿಳೆಯ ಸಂಬಂಧಿಕರು ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳದಂತೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ನವಜಾತ ಶಿಶು ತಾಯಿ ಇಲ್ಲದೆ ಪರದಾಡುವಂತಾಗಿದೆ.