
IPL FINAL ರಾತ್ರಿ 22 ಜನರ ಜೊತೆ 2,423 ಜನರೂ ಆಟವಾಡಿದ್ರಾ? – Swiggy ಮಾಡಿದ ಕಾಂಡೋಮ್ ಟ್ವೀಟ್ ವೈರಲ್..!!
- ವೈರಲ್ ನ್ಯೂಸ್
- May 31, 2023
- No Comment
- 117
ನ್ಯೂಸ್ ಆ್ಯರೋ : ಐಪಿಎಲ್ 16ನೇ ಆವೃತ್ತಿ ರೋಚಕ ಅಂತ್ಯ ಕಂಡಿದೆ. ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿ ಚೆನ್ನೈ ತಂಡ ಕಪ್ ಮುಡಿಗೇರಿಸಿಕೊಂಡಿದೆ. ಪಂದ್ಯದ ನಡೆಯುತ್ತಿರುವ ವೇಳೆ ಸುಮಾರು 2,423 ಕಾಂಡೋಮ್ ವಿತರಿಸಲಾಗಿದೆ ಎಂದು ಸ್ವಿಗ್ಗಿ ಇನ್ ಸ್ಟಾಮಾರ್ಟ್ ಟ್ವೀಟ್ ಮಾಡಿದ್ದು ವೈರಲ್ ಆಗಿದೆ.
ಇಂದು ರಾತ್ರಿ 22ಕ್ಕೂ ಹೆಚ್ಚು ಆಟಗಾರರು ಆಡುತ್ತಿರುವಂತೆ ತೋರುತ್ತಿದೆ ಎಂದು ಕಾಂಡೋಮ್ ಕಂಪೆನಿಯೊಂದನ್ನು ಟ್ಯಾಗ್ ಮಾಡಿ ಸ್ವಿಗ್ಗಿ ಇನ್ ಸ್ಟಾಮಾರ್ಟ್ ಟ್ವೀಟ್ ಮಾಡಿದ್ದು, ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ.
ಈ ಟ್ವೀಟ್ 793.3 ಲಕ್ಷ ಜನರಿಗೆ ತಲುಪಿದ್ದು, 8,878 ಸಾವಿರ ಮಂದಿ ಲೈಕ್ ಮಾಡಿದ್ದಾರೆ. “ಇದು ಸ್ವಿಗ್ಗಿಯ ನಿಜವಾದ ಮಟ್ಟ” ಎಂದು ಒಬ್ಬರು ರಿಟ್ವೀಟ್ ಮಾಡಿದ್ದಾರೆ. “ನನಗೆ 22 ಆಟಗಾರರ ಬಗ್ಗೆ ತಿಳಿದಿಲ್ಲ, ಆದರೆ ಇತರ 2,423 ಆಟಗಾರರು ನಿಜವಾಗಿಯೂ ಸುರಕ್ಷಿತವಾಗಿ ಆಡುತ್ತಿದ್ದಾರೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. “ಈ ಅಂಕಿಅಂಶಗಳನ್ನು ನೋಡಿದ ಬಳಿಕ ಸಿಂಗಲ್ಸ್ ಒಂದು ಬದಿಯಲ್ಲಿ ಕೂತು ಅಳುತ್ತಾರೆ” ಎಂದು ಇನ್ನೊಬ್ಬರು ಟ್ವೀಟ್ ಹೇಳಿದ್ದಾರೆ.
ಪಂದ್ಯದ ವೇಳೆ ಪ್ರತಿ ನಿಮಿಷಕ್ಕೆ 212 ಬಿರಿಯಾನಿಗಳು ಆರ್ಡರ್ ಆಗಿವೆ. ಒಟ್ಟು 12 ಮಿಲಿಯನ್ ಬಿರಿಯಾನಿಗಳು ಫೈನಲ್ ಪಂದ್ಯದ ವೇಳೆ ಸ್ವೀಕರಿಸಿದ್ದೇವೆ ಎಂದು ಸ್ವಿಗ್ಗಿ ತಿಳಿಸಿದೆ.