
ಶಕ್ತಿಗಿಂತ ಯುಕ್ತಿ ಮೇಲು ಎನ್ನುವುದು ಇದೇ ಕಾರಣಕ್ಕೆ - ಎರಡನೇ ಅಂತಸ್ತಿನಿಂದ ಟೇಬಲ್ ಇಳಿಸಿದ ವೀಡಿಯೋ ವೈರಲ್..!
- ವೈರಲ್ ನ್ಯೂಸ್
- August 24, 2023
- No Comment
- 181
ನ್ಯೂಸ್ ಆ್ಯರೋ : ಒಂದಷ್ಟು ಜನರ ಗುಂಪು ಎರಡನೇ ಅಂತಸ್ತಿನಿಂದ ಕೆಳಗೆ ಟೇಬಲ್ ಸಾಗಿಸುವ ದೃಶ್ಯವೊಂದು ಇಂಟರ್ ನೆಟ್ ನಲ್ಲಿ ಧೂಳೆಬ್ಬಿಸಿದೆ. ಅರೆ ಇದರಲ್ಲೇನು ವಿಶೇಷ ಇದೆ ಎಂದು ಕೇಳಬಹುದು. ಈ ಪೀಠೋಪಕರಣ ಸಾಗಿಸಲು ಬಳಸಿದ ತಂತ್ರವೇ ಸೃಜನಾತ್ಮಕವಾಗಿದೆ.
ವೀಡಿಯೋ ವೈರಲ್
ಮುಂಬಯಿಯಲ್ಲಿ ಕಂಡು ಬಂದ ಈ ದೃಶ್ಯ ಇದೀಗ ವೈರಲ್ ಆಗಿದೆ. aamchi_mumbai ಎನ್ನುವ ಇಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಅಷ್ಟಕ್ಕೂ ಈ ವೀಡಿಯೋದಲ್ಲೇನಿದೆ ಎನ್ನುವ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ಭಾರದ ಟೇಬಲ್ ಗಳನ್ನು ಎರಡನೇ ಮಹಡಿಯಿಂದ ಕೆಳಕ್ಕೆ ತರಲು 3-4 ಜನ ಕಷ್ಟಪಡಬೇಕು. ಆದರೆ ಇವರು ಬುದ್ದಿ ಉಪಯೋಗಿಸಿ ಅದಕ್ಕೆ ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ಹಗ್ಗ ಉಪಯೋಗಿಸಿ ಟೇಬಲ್ ಅನ್ನು ಎರಡನೇ ಅಂತಸ್ತಿನಿಂದ ಕೆಳಗೆ ಇಳಿಸಿದ್ದಾರೆ. ಮೇಲಿನಿಂದ ಕೆಲವರು ಹಗ್ಗದ ಮೇಲೆ ಟೇಬಲ್ ಇಟ್ಟು ಎಚ್ಚರಿಕೆಯಿಂದ ಜಾರಿಸಿದ್ದಾರೆ. ಇತ್ತ ಕೆಳಗೆ ನಿಂತವರೂ ಅಷ್ಟೇ ಜಾಗರೂಕತೆಯಿಂದ ಟೇಬಲ್ ಇಳಿಸಿ ಪ್ರಯಾಸಕರ ಕೆಲಸವನ್ನು ಸುಲಭವಾಗಿ ಮುಗಿಸಿ ಬಿಟ್ಟಿದ್ದಾರೆ.
ಮುಂಬಯಿಯ ಸಾಮಾನ್ಯ ರವಿವಾರ ಎನ್ನುವ ಕ್ಯಾಪ್ಶನ್ ನೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋವನ್ನು ಅನೇಕರು ವೀಕ್ಷಿಸಿದ್ದಾರೆ. ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಉತ್ತಮ ಎಂದು ಕೆಲವರು ಹೇಳಿದ್ದಾರೆ. ಇವರ ಸಂಪರ್ಕ ಸಂಖ್ಯೆ ಇದ್ದರೆ ಕೊಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಪರ್ಫೆಕ್ಟ್ ಲ್ಯಾಂಡಿಂಗ್ ಎಂದು ಮತ್ತೊಬ್ಬರು ಉದ್ಘರಿಸಿದ್ದಾರೆ. ಜೊತೆಗೆ ಅನೇಕರು ಇವರ ಐಡಿಯಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.