ಕೋಳಿ ಹುಂಜಗಳನ್ನು ಜೈಲಿಗಟ್ಟಿದ ಕೊಪ್ಪಳದ ಖಾಕಿ ಪಡೆ; ಕೋಳಿಗಳನ್ನ ಯಾಕೆ ಜೈಲಿಗೆ ಹಾಕಿದ್ದಾರೆ ಗೊತ್ತಾ?

ಕೋಳಿ ಹುಂಜಗಳನ್ನು ಜೈಲಿಗಟ್ಟಿದ ಕೊಪ್ಪಳದ ಖಾಕಿ ಪಡೆ; ಕೋಳಿಗಳನ್ನ ಯಾಕೆ ಜೈಲಿಗೆ ಹಾಕಿದ್ದಾರೆ ಗೊತ್ತಾ?

ನ್ಯೂಸ್ ಆ್ಯರೋ : ಅನಧಿಕೃತ ಜೂಜಾಟ, ಕೋಳಿ ಅಂಕದಲ್ಲಿ ತೊಡಗಿಸಿಕೊಂಡ‌ ಜನರನ್ನು ಜೈಲಿಗೆ ಹಾಕುವುದು ಸಾಮಾನ್ಯವಾದ ವಿಷಯ. ಆದರೆ ಕೋಳಿಗಳನ್ನ ಜೈಲಿಗೆ ಹಾಕುವ ಸುದ್ದಿಯನ್ನ ಎಂದಾದರೂ ಕೇಳಿದ್ದಿರಾ. ಇಂತಹದ್ದೊಂದು ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಬಳಿಯ ಬಸವಣ್ಣ ಕ್ಯಾಂಪಿನ ಹೊರ ವಲಯದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ದಾಳಿ ಮಾಡುವ ವೇಳೆಗೆ ಜೂಜಾಡುತ್ತಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ. ಆದ್ದರಿಂದ ಅಲ್ಲಿದ್ದ ಕೋಳಿ ಹುಂಜಗಳನ್ನು‌ ಹಿಡಿದು ತಂದು ಜೈಲಿಗೆ ಹಾಕಿದ್ದಾರೆ.

ಪೊಲೀಸರು ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದಾಗ ಅಂಕ ನಡೆಸುತ್ತಿದ್ದ ಜನರೆಲ್ಲ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ. ಕೊನೆಗೆ ಅಲ್ಲಿ ಉಳಿದಿದ್ದ 10‌ ಬೈಕ್ ಮತ್ತು ಹುಂಜಗಳನ್ನು‌ ವಶಕ್ಕೆ ಪಡೆದಿದ್ದಾರೆ. ಬೈಕ್ ಗಳನ್ನು ಠಾಣೆಯ ಹೊರಗೆ ನಿಲ್ಲಿಸಿದ್ದರೆ ಹುಂಜಗಳನ್ನು‌ ನೇರವಾಗಿ ಜೈಲಿಗಟ್ಟಿದ್ದಾರೆ. ಈ ಘಟನೆಯನ್ನು ಪ್ರಾಣಿ ಪ್ರಿಯರು ಖಂಡಿಸಿದ್ದಾರೆ. ಖದೀಮರನ್ನು ಬಿಟ್ಟು ಪಾಪದ ಹುಂಜಗಳನ್ನು ಬಂಧಿಸಿದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಕೋಳಿಗಳನ್ನು‌ ನ್ಯಾಯಾಲಯಕ್ಕೆ ಹಾಜರು ಪಡಿಸಿ ಅನಂತರವಷ್ಟೇ ಬಿಡುಗಡೆ ಮಾಡಬೇಕಾದ ಪ್ರಮೇಯ ಪೊಲೀಸರಿಗೆ ಎದುರಾಗಿದೆ.

ಪೊಲೀಸರು ಯಾವುದೇ ಅನಧಿಕೃತ ಚಟುವಟಿಕೆ ನಡೆದರೂ ಅಲ್ಲಿಗೆ ದಾಳಿ ನಡೆಸುವುದು ಸಹಜ. ಅದರಂತೆ ದಾಳಿಯ ನಂತರ ನ್ಯಾಯಾಲಯಕ್ಕೆ ಬೇಕಾದ ಸಾಕ್ಷಿಯನ್ನು ಕೂಡ ತರಬೇಕಾಗುತ್ತದೆ. ಆದರೆ ಇಲ್ಲಿ ಕೋಳಿ ಅಂಕ ನಡೆಸುತ್ತಿದ್ದವರು ಪರಾರಿಯಾಗಿದ್ದಕ್ಕೆ ಪಾಪದ ಕೋಳಿಗಳನ್ನೇ ಹಿಡಿದು ತಂದಿದ್ದಾರೆ. ಸ್ವಲ್ಪ ಶ್ರಮ ಪಟ್ಟಿದ್ದರೆ ಆರೋಪಿಗಳನ್ನೇ ಹಿಡಿಯಬಹುದಾಗಿತ್ತು. ಆದರೆ ಇಲ್ಲಿ ಪೊಲೀಸರ ನಿರ್ಲಕ್ಷ್ಯತನ ಎದ್ದು ಕಾಣುತ್ತದೆ. ಜೊತೆಗೆ ಪೊಲೀಸರ ಈ ನಡೆಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ‌.

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿ ವರ್ಷವೂ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸೇರಿದಂತೆ ಈ ರಾಜ್ಯಗಳ ಸುತ್ತಮುತ್ತ ಕೋಳಿ ಅಂಕಗಳು ನಡೆಯುತ್ತವೆ. ಅದರಂತೆ ಮೊನ್ನೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲೂ ಕೋಳಿ ಅಂಕ ನಡೆದಿದೆ.

ಕೋಳಿ ಅಂಕ ಹೇಗೆ ನಡೆಯುತ್ತೆ ಗೊತ್ತಾ?

ಕೋಳಿ ಅಂಕ ಎಂಬುದು ಒಂದು ಅನಧಿಕೃತ ಚಟುವಟಿಕೆಯಾಗಿದೆ‌. ಇದರಲ್ಲಿ ಎರಡು ಹುಂಜಗಳು ಕಾಲಿಗೆ ಹರಿತವಾದ ಕತ್ತಿ ಕಟ್ಟಿ ಕಾದಾಡುತ್ತವೆ. ಒಂದು ಹುಂಜವನ್ನು ಮತ್ತೊಂದು ಹುಂಜದ ಮೇಲೆ ದಾಳಿಗೆ ಬಿಡಲಾಗುತ್ತದೆ. ಸೋತ ಹುಂಜದ ಜೊತೆ ಅದಕ್ಕೆ ಕಟ್ಟಿದ ಹಣವನ್ನು ಗೆದ್ದ ಹುಂಜದ ಮಾಲೀಕ ಪಡೆದುಕೊಳ್ಳುತ್ತಾನೆ. ನೋಡಲು ಇದು ರೋಚಕವಾಗಿದ್ದರೂ ಕೂಡ ಎರಡರಲ್ಲಿ ಒಂದು ಹುಂಜ ಸಾಯಲೇ ಬೇಕಾಗುತ್ತದೆ.

ಕೋಳಿ ಅಂಕಕ್ಕೆ ಕರ್ನಾಟಕದಲ್ಲಿ ಅನುಮತಿಯಿಲ್ಲ

ಕರ್ನಾಟಕದಲ್ಲಿ ಕೋಳಿ ಅಂಕವನ್ನು ಅನಧಿಕೃತ ಚಟುವಟಿಕೆ ಎಂದು‌ ಪರಿಗಣಿಸಲಾಗಿದೆ, ಜೊತೆಗೆ ಇದಕ್ಕೆ ಅನುಮತಿಯನ್ನು ನೀಡಲಾಗುವುದಿಲ್ಲ. ಆದರೂ ಕೂಡ ರಾಜ್ಯದಲ್ಲೂ ಕೂಡ ಕದ್ದು ಮುಚ್ಚಿ ಈ ಕೋಳಿ ಅಂಕವನ್ನು ನಡೆಸುವವರಿದ್ದಾರೆ. ಕೋಳಿ ಅಂಕ ಜೂಜಾಟದಂತೆ, ಇಲ್ಲಿಯೂ ಕೂಡ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಸದ್ಯ, ಇದನ್ನು‌ ತಡೆಯಲು ಹೊರಟ ಕಾರಟಗಿ ಪೊಲೀಸರು ಹುಂಜಗಳನ್ನು ಬಂಧಿಸಿ ಪೇಚಿಗೆ ಸಿಲುಕಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *