23ವರ್ಷದ ಯುವತಿಯನ್ನು ಪ್ರೀತಿಸಿ 6 ಮಕ್ಕಳ ತಂದೆ, 65 ವರ್ಷದ ಮುದುಕ – ಪ್ರೀತಿಗೆ ಕಣ್ಣಿಲ್ಲ ಅನ್ನೋದು‌ ಮತ್ತೆ ಸಾಬೀತಾಯ್ತು..!!

23ವರ್ಷದ ಯುವತಿಯನ್ನು ಪ್ರೀತಿಸಿ 6 ಮಕ್ಕಳ ತಂದೆ, 65 ವರ್ಷದ ಮುದುಕ – ಪ್ರೀತಿಗೆ ಕಣ್ಣಿಲ್ಲ ಅನ್ನೋದು‌ ಮತ್ತೆ ಸಾಬೀತಾಯ್ತು..!!

ನ್ಯೂಸ್ ಆ್ಯರೋ : ಪ್ರೀತಿ ಅನ್ನೋದು ಜಾತಿ, ಮತ, ವರ್ಣ, ವಯಸ್ಸು ಎಲ್ಲವನ್ನೂ ಮೀರಿ ಎರಡು ಮನಸ್ಸುಗಳನ್ನು‌ ಒಂದಾಗಿಸುವ ಅತ್ಯದ್ಭುತ ಸಾಧನ. ಜಗತ್ತಿನಲ್ಲಿ ಅರಳಿ -ಆರಿ-ಅಳಿದು ಹೋದ ಲಕ್ಷಾಂತರ ಅಮರ ಪ್ರೇಮ ಕತೆಗಳಿವೆ‌. ಅದೇ ರೀತಿ ಸದ್ಯ, 23ವರ್ಷದ ಯುವತಿಯನ್ನು 65ವರ್ಷದ ಮುದುಕನೊಬ್ಬ ಪ್ರೀತಿಸಿ ಮದುವೆಯಾದ ಒಂದು ಪ್ರೇಮ್ ಕಹಾನಿ‌ ಇಲ್ಲಿದೆ ನೋಡಿ. ಇದು ಪ್ರೀತಿಗೆ ಕಣ್ಣಿಲ್ಲಾ ಎಂದು ನಡೆದದ್ದೋ, ಪ್ರೀತಿಸುವವರಿಗೆ ಕಣ್ಣಿಲ್ಲದೆ ನಡೆದದ್ದೋ ಗೊತ್ತಿಲ್ಲ.

65 ವರ್ಷದ 6 ಮಕ್ಕಳ ತಂದೆಯೊಬ್ಬ 23 ವರ್ಷದ ಯುವತಿಯನ್ನು ಮದುವೆಯಾದ ಘಟನೆ ನಡೆದದ್ದು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಪುರಿ ಚೌಧರಿ ಗ್ರಾಮದಲ್ಲಿ. 65ರ ಇಳಿ ವಯಸ್ಸಿನ‌ ನಖೇಶ್ ಯಾದವ್ ತನ್ನ‌ ಪತ್ನಿಯ ಸಾವಿನ ನಂತರ 6 ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ. ಆದರೆ ಅದ್ಯಾಕೋ ಆತನಿಗೆ ತನ್ನದು ಒಂಟಿ ಜೀವನ ಎನಿಸಲಾರಂಭಿಸಿತು. ಅಂತಿಮವಾಗಿ ಒಂಟಿ ಜೀವನಕ್ಕೆ ಮುಕ್ತಿ ಹಾಡಿ ಜಂಟಿ ಜೀವನ ನಡೆಸಲು ಎಲ್ಲರ ಸಮ್ಮುಖದಲ್ಲಿ 23 ವರ್ಷದ ಯುವತಿಯೊಂದಿಗೆ ಎರಡನೇ ವಿವಾಹವಾಗಿದ್ದಾನೆ.

ನಖೇಶ್ ಯಾದವ್ ಕೇವಲ ಎರಡನೇ ಮದುವೆಯಾದದ್ದಲ್ಲ, 23ವರ್ಷದ ಬಾಲೆಯನ್ನು ಪ್ರೀತಿಸಿ ಮದುವೆಯಾದ ಎಂಬುದೇ ಆಶ್ಚರ್ಯದ ಸಂಗತಿ. ಇತ್ತೀಚೆಗೆ ನಖೇಶ್ ಯಾದವ್ ತನ್ನ‌ ಕೆಲಸದ ನಿಮಿತ್ತ ರಾಂಚಿಗೆ ಹೋದಾಗ ಅಲ್ಲಿ 23 ವರ್ಷದ ನಂದಿನಿ‌ ಯಾದವ್ ಎಂಬ ಯುವತಿಯ ಪರಿಚಯವಾಗುತ್ತದೆ. ದಿನ‌ಕಳೆದಂತೆ ಈ ಸ್ನೇಹ ಪ್ರೀತಿಗೆ ತಿರುಗುತ್ತದೆ. ಅಂತಿಮವಾಗಿ ಇಬ್ಬರೂ ತಮ್ಮ‌ಮನೆಯವರಿಗೆ ವಿಷಯ ತಿಳಿಸಿ ಅವರೆಲ್ಲರ ಸಮ್ಮತಿಯ ಮೇರೆಗೆ ಊರಿದ ದೇವಸ್ಥಾನದಲ್ಲಿ 65 ವರ್ಷದ ನಖೇಶ್ ಯಾದವ್ ಹಾಗೂ 23 ವರ್ಷದ ನಂದಿನಿ‌ಯಾದವ್ ವಿವಾಹವಾಗಿದ್ದಾರೆ.

ಈ ವಿವಾಹದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಸಾಕಷ್ಟು ವೈರಲ್ ಅಗಿತ್ತು. ಅನಂತರ ತಮ್ಮ ಎರಡನೇ ವಿವಾಹದ ಬಗ್ಗೆ ಪ್ರತಿಕ್ರಿಯಿಸಿರುವ ನಖೇಶ್ ಯಾದವ್ ‘ಜೀವನದಲ್ಲಿ ಒಂಟಿತನ ಕಾಡಿದ್ದರಿಂದ ಎರಡನೇ ವಿವಾಹವಾಗಿದ್ದೇನೆ’ ಎಂದಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *