Bhavani Revanna gets angry after accident

ಐಶಾರಾಮಿ ಕಾರಿಗೆ ಬೈಕ್ ಡಿಕ್ಕಿ, ಭವಾನಿ ರೇವಣ್ಣ ಫುಲ್ ಗರಂ – ಅಂತಹದ್ದೇನಿದೆ ಗೊತ್ತಾ ಈ ಕೋಟಿ ಬೆಲೆಯ ಕಾರಿನಲ್ಲಿ..?

ನ್ಯೂಸ್ ಆ್ಯರೋ : ದೊಡ್ಡ ಗೌಡರ ಸೊಸೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ದುಬಾರಿ ಕಾರಿಗೆ ಕಳೆದ ಶುಕ್ರವಾರ ಸಾಲಿಗ್ರಾಮದ ಬಳಿ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿದ್ದ. ಇದರಿಂದ ಗರಂ ಆಗಿದ್ದ ಭವಾನಿ ರೇವಣ್ಣ ರಸ್ತೆಯಲ್ಲೇ ಕೂಗಾಡಿ, ಅವಾಚ್ಯ ಶಬ್ದಗಳಿಂದ ಬೈಕ್ ಸವಾರನನ್ನು ನಿಂದಿಸಿದ್ದರು. ಈ ಸುದ್ದಿ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿತ್ತು.

KA-03-NK-5 ನಂಬರಿನ ಟೊಯೋಟಾ ಕಂಪೆನಿಯ ಈ ಐಶಾರಾಮಿ ಕಾರಿನಲ್ಲಿ ಅಂತಹದ್ದೇನಿದೆ ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವ ಕಾರು, ಎಷ್ಟು ಬೆಲೆ?

ಸದ್ಯ, ರಸ್ತೆ ಅಪಘಾತ ಸಂಭವಿಸಿದಾಗ ಭವಾನಿ ರೇವಣ್ಣ ಅವರು ಟೊಯೋಟಾ ವೆಲ್ ಫೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಕಾರಿನ ಅನ್ ರೋಡ್ ಬೆಲೆ ಬರೋಬ್ಬರಿ ರೂ.1,48, 58,511‌ ಆಗಿದ್ದು, ಈ ಕಾರಿನ ಟಾಪ್ ವೆರಿಯೆಂಟ್ ಮಾದರಿಯ ಆನ್ ರೋಡ್ ಬೆಲೆ 1.61 ಕೋಟಿ. ಇದೊಂದು ಸ್ಟ್ಯಾಂಡ್ ಹೈಬ್ರೀಡ್ ಎಲೆಕ್ಟ್ರಿಕಲ್ ವಾಹನವಾಗಿದ್ದು, 2.5 ಲೀಟರ್ ಇನ್ ಲೈನ್ 4 ಸಿಲಿಂಡರ್ DOHC ಎಂಜಿನ್ ಹೊಂದಿದೆ.

ಮೈಲೇಜ್ ಎಷ್ಟು?

ಈ ಅತ್ಯಾಧುನಿಕ ಕಾರು 142kW ಮತ್ತು ಗರಿಷ್ಠ 240 NM ಟಾರ್ಕ್ ಹೊರ ಹಾಕುವುದರೊಂದಿಗೆ, ಮೋಟಾರು ಮತ್ತು ಹೈಬ್ರಿಡ್ ಬ್ಯಾಟರಿಯೊಂದಿಗೆ ಕಡಿಮೆ ಕಾರ್ಬನ್ ಹೊರ ಸೂಸುವಿಕೆಯನ್ನು ಖಾತ್ರಿ‌ ಪಡಿಸುತ್ತದೆ. ಕಂಪೆನಿಯ ಪ್ರಕಾರ ಈ ಕಾರು ಪ್ರತಿ ಲೀಟರ್ ಗೆ 19.28 ಕಿ.ಮೀ ಮೈಲೇಜ್ ನೀಡುತ್ತದೆ.

ಇನ್ನು ಈ ಕಾರಿನ ಇಂಟೀರೀಯರ್ ಬಗ್ಗೆ ಹೇಳುವುದಾದರೆ, ಹೆಚ್ಚಿನ ಆಸನ ಅಂತರದೊಂದಿಗೆ ಹೊಸ ಸುದಾರಿತ ಆಂತರಿಕ‌ ಸ್ಥಳವನ್ನು ಅಪ್ಟಿಮೈಸ್ ಮಾಡಲಾಗಿದೆ. ಡ್ರೈವರ್ ಸೀಟ್ ಮಾರ್ಪಾಡುಗಳ ಮಾಸ್ಟರ್ ಫುಲ್ ಆರ್ಕಸ್ಟ್ರನ್ ಮತ್ತು ಎರಡನೇ ಸಾಲಿನ ಆಸನಗಳ ಅತ್ಯಾಧುನಿ ನಿರ್ಮಾಣದ ಮೂಲಕ, ಮುಂಬಾಗ ಮತ್ತು ಎರಡನೇ ಸಾಲಿನ ಆಸನಗಳ ಅಂತರ ಹೆಚ್ಚಿಸಲಾಗಿದೆ‌.

ಅತ್ಯಾಧುನಿಕ ಸುರಕ್ಷತೆಗಳೇನು?

ಟೊಯೋಟಾ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಟೊಯೋಟಾ ಸೇಪ್ಟಿ ಸೆನ್ಸ್ ನೊಂದಿಗೆ ಹೊಸ ವೆಲ್ ಫೈರ್ ಪ್ರಯಾಣಿಕರಿಗೆ ಮತ್ತು ಪಾದಾಚಾರಿಗಳಿಗೆ ಸಮಗ್ರ ಸಮಗ್ರ ರಕ್ಷಣೆ ನೀಡುತ್ತದೆ. ಇದರಲ್ಲಿ ಫ್ರೀ ಕೊಲೀಷನ್ ಸೇಪ್ಟಿ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಸೆನ್ಸ್ ಅಸಿಸ್ಟೆಂಟ್, ಅಡಾಫ್ಟಿವ್ ಹೈ ಬೀಮ್ ಎಲ್.ಇ.ಡಿ ಹೆಡ್ ಲ್ಯಾಂಪ್ ಮತ್ತು ಬ್ಯೈಂಡ್ ಸ್ಟಾಪ್ ಮಾನಿಟರ್ ಗಳನ್ನು ಕೂಡ ಅಳವಡಿಸಲಾಗಿದೆ.