ಹಸುವನ್ನು ಮುಂದೆ ಕೂರಿಸಿಕೊಂಡು ಕಾರ್ ನಲ್ಲಿ ಜಾಲಿ ರೈಡ್ ಹೋದ ಯುವಕ – ಈ ವೈರಲ್ ವಿಡಿಯೋ ನೋಡಿದ್ರೆ ತಲೆ ತಿರುಗುತ್ತೆ..!

ಹಸುವನ್ನು ಮುಂದೆ ಕೂರಿಸಿಕೊಂಡು ಕಾರ್ ನಲ್ಲಿ ಜಾಲಿ ರೈಡ್ ಹೋದ ಯುವಕ – ಈ ವೈರಲ್ ವಿಡಿಯೋ ನೋಡಿದ್ರೆ ತಲೆ ತಿರುಗುತ್ತೆ..!

ನ್ಯೂಸ್ ಆ್ಯರೋ : ನೀವು ಈ ಸಾಮಾಜಿಕ ಜಾಲತಾಣ ಅನ್ನುವ ವಿಚಿತ್ರ ಜಗತ್ತಿನಲ್ಲಿ ಎಷ್ಟೆಲ್ಲಾ ವಿಚಿತ್ರಗಳನ್ನು ಕಂಡಿರಬಹುದು. ಒಂದೇ ಬೈಕಿನಲ್ಲಿ ಇಬ್ಬರು, ಮೂವರು, ಹೆಚ್ಚೆಂದರೆ ಹತ್ತು ಜನರು ಒಂದೇ ಬಾರಿಗೆ ರೈಡ್ ಹೋಗುವುದನ್ನು ಕಂಡಿರಬಹುದು. ಆದರೆ ಹಸುವೊಂದನ್ನು ಬೈಕಿನಲ್ಲಿ ಕೂರಿಸಿಕೊಂಡು ಜಾಲಿ ರೈಡ್ ಹೋಗುವುದನ್ನು ಕಂಡಿದ್ದೀರಾ? ಇದು ಕೇಳಲು ವಿಚಿತ್ರ ಎನಿಸಿದರೂ ಸತ್ಯ ಸಂಗತಿ. ಇಂತಹದ್ದೊಂದು ವಿಚಿತ್ರ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ‌.

ಹಸು ಮುಂದೆ, ರೈಡರ್ ಹಿಂದೆ!

ಸದ್ಯ, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್‌ ಮೇಲೆ ಹಸುವನ್ನು ಕೂರಿಸಿಕೊಂಡು ಸವಾರಿ ಮಾಡುತ್ತಿರುವುದನ್ನು ನೀವು ನೋಡಬಹುದು. ಇಂತಹ ವಿಶಿಷ್ಟವಾದ ಸವಾರಿ ನೀವು ಬಹುಶಃ ಹಿಂದೆಂದೂ ನೋಡಿರಲಿಕ್ಕಿಲ್ಲ. ವ್ಯಕ್ತಿಯೊಬ್ಬ ಹಸುವನ್ನು ಬೈಕ್ ನಲ್ಲಿ ತನ್ನ ಮುಂದೆ ಕೂರಿಸಿ ಹಸುವಿನ ಹಿಂಬದಿಗೆ ಕುಳಿತು ಬೈಕ್ ಸವಾರಿ ಮಾಡಿದ್ದಾನೆ‌.

ದೊಡ್ಡ ಕೊಂಬುಗಳನ್ನು ಹೊಂದಿರುವ ಹಸು ಕೂಡ ಬಹಳ ಖುಷಿಯಿಂದ ಬೈಕ್ ಸವಾರಿಯನ್ನು ಆನಂದಿಸುತ್ತಿದೆ. ಈ ತಮಾಷೆಯ ದೃಶ್ಯವನ್ನು ಕಾರ್ ಸವಾರನೊಬ್ಬ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ.

ಲಕ್ಷಾಂತರ ವೀಕ್ಷಣೆ ಪಡೆದ ವಿಡಿಯೋ..!

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೆಳಗೆ ಷೇರು ಮಾರುಕಟ್ಟೆ ಶೈಲಿಯಲ್ಲಿ ‘ರ್ಯಾಲಿಯಲ್ಲಿ ಬುಲ್ ಅನ್ನು ಸವಾರಿ ಮಾಡುವುದು ಅಂದರೆ ಇದೆ ನೋಡಿ’ ಎಂಬ ತಮಾಷೆಯ ಶೀರ್ಷಿಕೆ ಬರೆಯಲಾಗಿದೆ. ಕೇವಲ 12 ಸೆಕೆಂಡ್ ಗಳ ಈ ವೀಡಿಯೋ ಇದುವರೆಗೆ 1 ಲಕ್ಷ 93 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದು, ನೂರಾರು ಮಂದಿ ಲೈಕ್ ಕೂಡ ಮಾಡಿದ್ದಾರೆ. ಈ ವಿಡಿಯೋ‌ ಕಂಡಿರುವ ನೆಟ್ಟಿಗರು ಮನಬಂದಂತೆ ಕಮೆಂಟ್ ಮಾಡುತ್ತಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *