
ವಯಾಗ್ರ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್ – ಚಪಲ ಚೆನ್ನಿಗರಾಯನಿಗೆ ಮುಂದೇನಾಯ್ತು ಗೊತ್ತಾ?
- Viral News
- May 27, 2023
- No Comment
- 184
ನ್ಯೂಸ್ ಆ್ಯರೋ : ಸೆಕ್ಸ್ ಲೈಫ್ ಚೆನ್ನಾಗಿರಬೇಕೆಂದು ಅತಿಯಾಗಿ ವಯಾಗ್ರ ಸೇವಿಸಿದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಟಲಿಯಲ್ಲಿ ನಡೆದಿದೆ. ಸದ್ಯ ಆತನ ಸ್ಥಿತಿ ಗಂಭೀರವಾಗಿ ಇದೆ.
ಜರ್ಮನಿಯ 50 ವರ್ಷದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗ ನಿಮಿರುವಿಕೆಗಾಗಿ ವಯಾಗ್ರ ಮಾತ್ರೆ ಸೇವಿಸಿ 24 ಗಂಟೆಗೂ ಅಧಿಕ ಕಾಲ ಸೆಕ್ಸ್‌ನಲ್ಲಿ ತೊಡಗಿದ್ದ. ಆರಂಭದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿದೆ. ನಂತರ ನೋವು ತೀವ್ರವಾಗಿದೆ. ಇದರಿಂದ ಗಾಬರಿಗೊಂಡ ವ್ಯಕ್ತಿ ತಕ್ಷಣವೇ ಆಸ್ಪತ್ರೆಗೆ ತೆರಳಿದ್ದಾನೆ. ಆತನನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆಗಾಗಿ ದಾಖಲಿಸಿಕೊಂಡಿದ್ದಾರೆ. ಇಟಲಿಯ ಗ್ರೊಸೆಟೊ ಆಸ್ಪತ್ರೆಯೊಂದರಲ್ಲಿ ಈ ವಿಚಿತ್ರ ಪ್ರಕರಣ ವರದಿಯಾಗಿದೆ.
ರಜೆಯ ಮೇಲೆ ಇಟಲಿಗೆ ಪ್ರವಾಸಕ್ಕೆ ಬಂದಿದ್ದ ಜರ್ಮನಿಯ ವ್ಯಕ್ತಿ ನಿರಂತರ ಸಂಭೋಗದಿಂದ ಅಸ್ವಸ್ಥಗೊಂಡಿದ್ದಾನೆ. ಮೇ 11ರಂದು ಆತ ಆಸ್ಪತ್ರೆಗೆ ಭೇಟಿ ನೀಡಿದ್ದು, ಆತನ ಪತ್ನಿಯೂ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ.
ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ವೈದ್ಯರು ಆತನನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅತಿಯಾಗಿ ವಯಾಗ್ರ ಸೇವಿಸಿರುವುದೇ ಸಮಸ್ಯೆಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.