ಕುಸ್ತಿಪಟು ವಿನೇಶ್ ಫೋಗಟ್ ನಾಪತ್ತೆ; ವಿಧಾನಸಭೆಗೂ ಗೈರು, ಪೋಸ್ಟರ್ ವೈರಲ್
ನ್ಯೂಸ್ ಆ್ಯರೋ: ಹರಿಯಾಣದ ಜುಲಾನಾ ಕ್ಷೇತ್ರದ ಶಾಸಕಿ ಮತ್ತು ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮತ್ತೆ ಸುದ್ದಿಯಲ್ಲಿದ್ದಾರೆ. ನೂತನ ಶಾಸಕಿ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್‌ಗಳು ವೈರಲ್ ಆಗಿವೆ. ಈ ಪೋಸ್ಟರ್‌ಗಳು ಜಿಂದ್‌ನಲ್ಲಿಯೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಜೂಲಾನಾ ಕ್ಷೇತ್ರದಲ್ಲಿ ಬಹಳ ಸಮಯದಿಂದ ಕಾಣದ ಹಿನ್ನೆಲೆಯಲ್ಲಿ ಮತ್ತು ವಿಧಾನಸಭೆಗೂ ಅವರು ಗೈರಾದ ಕಾರಣ ಈ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ವಾಸ್ತವವಾಗಿ, ನಾಪತ್ತೆಯಾಗಿರುವ ಜುಲಾನಾ ಎಂಎಲ್ಎ ಮತ್ತು ಒಲಿಂಪಿಯನ್ ವಿನೇಶ್ ಫೋಗಟ್ ಅವರ ಪೋಸ್ಟರ್‌ಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಚಾಲ್ತಿಯಲ್ಲಿವೆ. ಪೋಸ್ಟರ್‌ನಲ್ಲಿ ನಾಪತ್ತೆಯಾಗಿರುವ ಎಂಎಲ್‌ಎಗಾಗಿ ಹುಡುಕಾಟ ಎಂದು ಬರೆಯಲಾಗಿದೆ. ಇಡೀ ವಿಧಾನಸಭೆ ಅಧಿವೇಶನ ಮುಗಿದರೂ ಮೇಡಂ ಕಾಣಿಸಲಿಲ್ಲ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ. ಈ ಸಂಪೂರ್ಣ ವಿವಾದದ ಬಗ್ಗೆ ವಿನೇಶ್ ಅವರ ಪಿಎ ಪ್ರತಿಕ್ರಿಯಿಸಿದ್ದಾರೆ.
ವಿನೇಶ್ ಫೋಗಟ್ ಅವರ ಸಂಖ್ಯೆಗೆ ಸಂಪರ್ಕಿಸಿದಾಗ, ಆಕೆಯ ಪಿಎ ಸೋನು ಅವರು ‘ವಿನೇಶ್ ಫೋಗಟ್ ಅವರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಮಾಡಿದೆ ಮತ್ತು ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ. ಚುನಾವಣೆಯಲ್ಲಿ ಬ್ಯುಸಿಯಾಗಿರುವ ಕಾರಣ ವಿಧಾನಸಭೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಜೂಲಾನಾ ಕ್ಷೇತ್ರದ ಸಮಸ್ಯೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆಂದು ವರದಿಯಾಗಿದೆ. ಮತ್ತೊಂದೆಡೆ, ಹರಿಯಾಣ ವಿಧಾನಸಭೆ ಸ್ಪೀಕರ್ ಹರ್ವಿಂದರ್ ಕಲ್ಯಾಣ್, ವಿನೇಶ್ ಫೋಗಟ್ ಮತ್ತು ಇತರ ಶಾಸಕರ ಗೈರುಹಾಜರಿಯ ಹಿಂದೆ ಹಲವು ಕಾರಣಗಳಿವೆ ಎಂದು ಹೇಳಿದರು. ಶಾಸಕರು ಮೊದಲೇ ಮಾಹಿತಿ ನೀಡುತ್ತಾರೆ. ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿತ್ತು ಎಂದಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಫೋಗಟ್ ಅವರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು 6015 ಮತಗಳಿಂದ ಸೋಲಿಸಿದ್ದಾರೆ. ಜೂಲಾನಾ ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ 65,080 ಮತಗಳನ್ನು ಪಡೆದರೆ, ಕ್ಯಾಪ್ಟನ್ ಯೋಗೀಶ್ ಬೈರಾಗಿ 59,065 ಮತಗಳನ್ನು ಪಡೆದಿದ್ದರು.
ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಕುಸ್ತಿಯ ನಂತರ ರಾಜಕೀಯಕ್ಕೆ ಪ್ರವೇಶಿಸಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ವಿಧಾನಸಭೆಗೆ ಆರಿಸಿ ಬಂದಿದ್ದಾರೆ. ಆದರೆ ವಿಧಾನಸಭೆ ಅಧಿವೇಶನಕ್ಕೂ ಗೈರುಹಾಜರಾದ ಕಾರಣ ಇದೀಗ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ನಾಪತ್ತೆ ಭಿತ್ತಿಪತ್ರವನ್ನು ಪ್ರತಿಪಕ್ಷದವರು ಲೇವಡಿ ಮಾಡುತ್ತಿದ್ದಾರೆ. ಮೇಡಂ ಎಲ್ಲಿಯಾದರೂ ಕಂಡರೆ ಜೂಲಾನಾ ಜನರಿಗೆ ಮಾಹಿತಿ ನೀಡಿ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
Leave a Comment