Paris Olympics 2024 : ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಾಟ್ ಅನರ್ಹ – ಕೋಟ್ಯಾಂತರ ಭಾರತೀಯರ ಚಿನ್ನದ ಕನಸಿಗೆ ಕೊಳ್ಳಿ ಇಟ್ಟ ತೂಕ‌..!!

Spread the love

ನ್ಯೂಸ್ ಆ್ಯರೋ : ಒಲಿಂಪಿಕ್ಸ್ ನಲ್ಲಿ ‌ಚೊಚ್ಚಲ ಪದಕ ಗೆಲುವಿನ ನಿರೀಕ್ಷೆಯಲ್ಲಿದ ವಿನೇಶ್ ಫೋಗಟ್ ಕೂಟದಿಂದಲೇ ಅನರ್ಹರಾಗುವ ಸಂಕಟಕ್ಕೆ ಸಿಲುಕಿದ್ದಾರೆ‌.

ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವಚಾಂಪಿಯನ್ ಯುಯಿ ಸುಸಾಕಿ ಅವರನ್ನೇ ಬಗ್ಗುಬಡಿದಿದ್ದ ವಿನೇಶ್ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು.

ಆದರೆ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ಅವರು 100 ಗ್ರಾಂ ತೂಕ ಹೆಚ್ಚಿರುವುದು ಪತ್ತೆಯಾಗಿತ್ತು. ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಇದರೊಂದಿಗೆ ಭಾರತೀಯರ ಚಿನ್ನದ ಪದಕದ ಕನಸಿಗೆ ಮತ್ತೊಮ್ಮೆ ಕೊಳ್ಳಿಯಿಟ್ಟಂತಾಗಿದ್ದು, ನಿನ್ನೆ ರಾತ್ರಿ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್ಸ್ ನಲ್ಲಿ ಜರ್ಮನಿ ವಿರುದ್ಧ 3-2 ಗೋಲುಗಳ ಅಂತರದಿಂದ ಸೋತು ಚಿನ್ನದ ಪದಕದಾಸೆಗೆ ತಣ್ಣೀರು ಎರಚಿತ್ತು.

Leave a Comment

Leave a Reply

Your email address will not be published. Required fields are marked *