Udupi : ಅತ್ತ ಜೈಲಿನಲ್ಲಿ ದರ್ಶನ್, ಇತ್ತ ವಿಜಯಲಕ್ಷ್ಮಿ ಟೆಂಪಲ್ ರನ್ – ತಡರಾತ್ರಿ ಕೊಲ್ಲೂರಿಗೆ ದರ್ಶನ್ ಪತ್ನಿ ಎಂಟ್ರಿ, ನಾಳೆ ನವ ಚಂಡಿಕಾ ಹೋಮಕ್ಕೆ ಸಿದ್ಧತೆ
ನ್ಯೂಸ್ ಆ್ಯರೋ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದರೆ ಇತ್ತ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ದರ್ಶನ್ ಪತ್ನಿ ತನ್ನ ಆಪ್ತರ ಜೊತೆ ಇಂದು ತಡರಾತ್ರಿ ಭೇಟಿ ನೀಡಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ ದೇಗುಲದಲ್ಲಿ ಮೂಕಾಂಬಿಕಾ ದೇವಿಯ ದರ್ಶನಗೈದು ಪ್ರಾರ್ಥನೆ ಸಲ್ಲಿಸಿದ್ದಾರೆ.
ನಾಳೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಂಕಲ್ಪ, ಪಾರಾಯಣ ನಡೆಯಲಿದ್ದು, ಇದೇ ವೇಳೆ ವಿಜಯಲಕ್ಷ್ಮಿ ನವ ಚಂಡಿಕಾ ಹೋಮ ನಡೆಸಲಿದ್ದಾರೆ ಎನ್ನಲಾಗಿದೆ.
ದೇವಸ್ಥಾನದಲ್ಲಿ ನಾಳೆ ಬೆಳಗ್ಗೆ ನವ ಚಂಡಿಕಾ ಹೋಮ ನಡೆಯಲಿದ್ದು, ಸಕಲ ಕಷ್ಟ ಪರಿಹಾರವಾಗುವ ಆಕಾಂಕ್ಷೆಯೊಂದಿಗೆ ನಾಳೆ ಪೂಜಾ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಭಾಗವಹಿಸಿಲಿದ್ದಾರೆ ಎಂದು ದೇಗುಲದ ಮೂಲಗಳು ತಿಳಿಸಿವೆ.
Leave a Comment