ʼಇನ್ ರಿಲೇಷನ್ ಶಿಪ್ʼ ಎಂದ ವಿಜಯ್; ಕೊನೆಗೂ ಆಕೆ ಜೊತೆಗಿನ ಲವ್ ಲೈಫ್ ಬಗ್ಗೆ ಹೇಳಿಕೊಂಡ ಸೌತ್ ಸ್ಟಾರ್
ನ್ಯೂಸ್ ಆ್ಯರೋ: ಸೌತ್ ಸ್ಟಾರ್ ವಿಜಯ್ ದೇವರಕೊಂಡ ಹೆಸರು ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಜೊತೆ ಬಹಳ ಹಿಂದಿನಿಂದಲೂ ತಳುಕು ಹಾಕಿಕೊಂಡಿದೆ. ಇವರಿಬ್ಬರೂ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಫ್ಯಾನ್ಸ್ ಕೂಡ ಈ ಜೋಡಿಯನ್ನು ಒಟ್ಟಿಗೆ ನೋಡಲು ಇಷ್ಟಪಡ್ತಾರೆ. ರಶ್ಮಿಕಾ ಜೊತೆಗಿನ ಸಂಬಂಧದ ವದಂತಿ ಮಧ್ಯೆ ವಿಜಯ್ ದೇವರಕೊಂಡ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ರಿಲೇಶನ್ಶಿಪ್ ನಲ್ಲಿರೋದನ್ನು ಅವರು ದೃಢಪಡಿಸಿದ್ದಾರೆ.
ಕರ್ಲಿ ಟೇಲ್ಸ್ ಜೊತೆ ಪ್ರೀತಿ ಮತ್ತು ಮದುವೆ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ. ತಾನು ಡೇಟಿಂಗ್ನಲ್ಲಿರೋದನ್ನು ಅವರು ಒಪ್ಪಿಕೊಂಡಿದ್ದಾರೆ. ಆದ್ರೆ ಹುಡುಗಿ ಯಾರು ಎಂಬುದನ್ನು ವಿಜಯ್ ದೇವರಕೊಂಡ ಬಾಯ್ಬಿಟ್ಟಿಲ್ಲ.
ಫನ್ ಸಂದರ್ಶನದಲ್ಲಿ ಮಾತನಾಡಿರುವ ವಿಜಯ್ ದೇವರಕೊಂಡ, ತಾವು ಸಿಂಗಲ್ ಅಲ್ಲ ಬದಲಿಗೆ ಒಬ್ಬರೊಂದಿಗೆ ಪ್ರೀತಿಯಲ್ಲಿದ್ದೇನೆ ಎಂದಿದ್ದಾರೆ. ಆದರೆ ಅದು ಯಾರೆಂದು ಹೆಸರು ಹೇಳಿಲ್ಲ. ‘ನನಗೆ ಈಗ 35 ವರ್ಷ ವಯಸ್ಸು, ನಿಮಗೆ ಅನ್ನಿಸುತ್ತದೆಯೇ ನಾನು ಸಿಂಗಲ್ ಎಂದು’ ಎಂದು ಸಂದರ್ಶಕಿಯನ್ನು ಪ್ರಶ್ನೆ ಮಾಡಿದ್ದಾರೆ ವಿಜಯ್ ದೇವರಕೊಂಡ. ಅದೇ ಸಂದರ್ಶನದಲ್ಲಿ ತಾವು ತಮ್ಮೊಟ್ಟಿಗೆ ನಟಿಸಿದ ಸಹನಟಿಯೊಂದಿಗೆ ಪ್ರೇಮ ಸಂಬಂಧ (ಡೇಟಿಂಗ್) ಹೊಂದಿರುವುದಾಗಿಯೂ ಹೇಳಿಕೊಂಡಿದ್ದಾರೆ. ಆದರೆ ಯಾರೆಂದು ಮಾತ್ರ ಹೆಸರು ಹೇಳಿಲ್ಲ. ಆದರೆ ನೆಟ್ಟಿಗರು ಆ ನಟಿ ರಶ್ಮಿಕಾ ಮಂದಣ್ಣ ಅವರೇ ಎಂದು ಊಹಿಸಿದ್ದಾರೆ.
ಅದೇ ಸಂದರ್ಶನದಲ್ಲಿ ತಾವು ಪ್ರೀತಿ ಮಾಡುವ ಬಗೆ ಹೇಗಿರುತ್ತದೆ ಎಂಬುದನ್ನು ವಿವರಿಸಿರುವ ವಿಜಯ್ ದೇವರಕೊಂಡ, ‘ನನ್ನ ಪ್ರೀತಿ ಬೇಷರತ್ ಪ್ರೀತಿ (ಅನ್ಕಂಡೀಷನಲ್) ಅಲ್ಲ. ನನ್ನ ಪ್ರೀತಿಗೆ ಕೆಲವು ನಿರೀಕ್ಷೆಗಳಿವೆ. ನಿರೀಕ್ಷೆಗಳು ಇಲ್ಲದೆ ಯಾರೂ ಯಾರನ್ನೂ ಪ್ರೀತಿ ಮಾಡುವುದಿಲ್ಲ. ಕೆಲವರದ್ದು ಸಣ್ಣ-ಪುಟ್ಟ ನಿರೀಕ್ಷೆಗಳಿರುತ್ತವೆ, ಕೆಲವರದ್ದು ದೊಡ್ಡ ನಿರೀಕ್ಷೆಗಳು ಇರಬಹುದು. ಹಾಗೆಯೇ ನನ್ನದು ಸಹ ನಿರೀಕ್ಷೆಗಳು ಇರುವ ಪ್ರೀತಿಯೇ, ಬೇಷರತ್ ಆಗಿ ಪ್ರೀತಿಸಲು ಆಗುವುದಿಲ್ಲ. ಬೇಷರತ್ ಪ್ರೀತಿ ಎಂಬುದೆಲ್ಲ ಕ್ಲೀಷೆ’ ಎಂದಿದ್ದಾರೆ ವಿಜಯ್ ದೇವರಕೊಂಡ.
ವಿಜಯ್ ದೇವರಕೊಂಡ ಈ ಮಾತುಗಳನ್ನು ಕೇಳಿದ ಫ್ಯಾನ್ಸ್, ಹುಡುಗಿ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲದಲ್ಲಿದ್ದಾರೆ. ಬಹುತೇಕರು, ಅದು ರಶ್ಮಿಕಾ ಎನ್ನುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಿನಿಮಾ ಮೂಲಕ ಹತ್ತಿರವಾಗಿದ್ದಾರೆ. ಈ ಬಾರಿ ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿಯೇ ದೀಪಾವಳಿ ಆಚರಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಮೂರ್ನಾಲ್ಕು ವರ್ಷಗಳಿಂದ ಇಬ್ಬರು ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿಗೆ, ಈಗ ವಿಜಯ್ ದೇವರಕೊಂಡ ಹೇಳಿಕೆ ರೆಕ್ಕೆ ನೀಡಿದೆ.
Leave a Comment