ಮೋದಿ ಭೇಟಿ ಬೆನ್ನಲ್ಲೇ ಟ್ರಂಪ್ ದೊಡ್ಡ ಘೋಷಣೆ; ತಹಾವ್ವುರ್ ರಾಣಾ ಬಗ್ಗೆ ಮಹತ್ವದ ನಿರ್ಧಾರ

ನ್ಯೂಸ್ ಆ್ಯರೋ: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಇಂದು ಬೆಳಗ್ಗೆ (ಭಾರತೀಯ ಕಾಲಮಾನ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ಉಭಯ ನಾಯಕರ ಮಾತುಕತೆ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ದೊಡ್ಡ ಘೋಷಣೆ ಮಾಡಿದ್ದಾರೆ.
2008ರ ಮುಂಬೈ ದಾಳಿಯ ಭಯೋತ್ಪಾದಕ ತಹವ್ವೂರ್ ರಾಣಾ ನನ್ನು ಹಸ್ತಾಂತರಿಸುವ ಕುರಿತು ಟ್ರಂಪ್ ಹೇಳಿಕೆ ನೀಡಿದ್ದಾರೆ. ‘2008ರ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಲು ನನ್ನ ಆಡಳಿತ ಅನುಮೋದನೆ ನೀಡಿದೆ. ಇದನ್ನು ಹಂಚಿಕೊಳ್ಳಲು ಸಂತೋಷ ಆಗುತ್ತಿದೆ ಎಂದಿದ್ದಾರೆ.
ಮುಂಬೈ ದಾಳಿಯ ಅಪರಾಧಿ ತಹಾವ್ವುರ್ ರಾಣಾನ ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಜನವರಿ 25, 2024 ರಂದು ಅನುಮೋದನೆ ನೀಡಿತ್ತು. ಈ ಪ್ರಕರಣದಲ್ಲಿ ಆತನ ಶಿಕ್ಷೆಯ ವಿರುದ್ಧದ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ತಹಾವ್ವುರ್ ರಾಣಾನ 2009 ರಲ್ಲಿ ಎಫ್‌ಬಿಐ ಬಂಧಿಸಿತ್ತು. ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಆಗಿರುವ ರಾಣಾ 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.
ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಹಸ್ತಾಂತರಿಸಲು ಒಪ್ಪಿಕೊಂಡಿರುವ ಅಮೆರಿಕಾ ನಿಲುವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ‘ ಪ್ರಕ್ರಿಯೆಯನ್ನು ತ್ವರಿತಗೊಳಿಸಿದ್ದಕ್ಕಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ’ ಎಂದರು.
ಮುಂಬೈ ಮೇಲಿನ 26/11 ದಾಳಿಯಲ್ಲಿನ ಪ್ರಮುಖ ಆರೋಪಿಯಾಗಿರುವ ಪಾಕಿಸ್ತಾನಿ ಮೂಲದ ಉದ್ಯಮಿ ತಹವ್ವುರ್ ಹುಸೇನ್ ರಾಣಾ 164 ಜನರ ಸಾವಿಗೆ ಕಾರಣನಾಗಿದ್ದಾನೆ. ಭಾರತಕ್ಕೆ ಹಸ್ತಾಂತರವಾಗುತ್ತಿದ್ದಂತೆ ಭಾರತೀಯ ಏಜೆನ್ಸಿಗಳು ವಿಚಾರಣೆಗೆ ಒಳಪಡಿಸಲಿವೆ.
Leave a Comment