ದಿನ ಭವಿಷ್ಯ 05-09-2024 ಗುರುವಾರ | ಇಂದಿನ ರಾಶಿಫಲಗಳು ಹೇಗಿದೆ…!

IMG 20240905 WA0001
Spread the love

ನ್ಯೂಸ್ ಆ್ಯರೋ : ಶ್ರೀ ಶಾಲಿವಾಹನ ಶಕೆ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಿತೀಯ/ತೃತೀಯ,ಉತ್ತರ ಫಾಲ್ಗುಣಿ ಹಸ್ತ ನಕ್ಷತ್ರದ ಗುರುವಾರ ರಾಶಿ ಭವಿಷ್ಯ ಯಾರಿಗೆ ಶುಭಫಲ ನೀಡಲಿದೆ ತಿಳಿಯೋಣ.

ಮೇಷ ರಾಶಿ : ಇಂದು ನೀವು ಕೆಲವು ಹೊಸ ಕೆಲಸದ ಬಗ್ಗೆ ಯೋಚಿಸಬಹುದು. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಉತ್ತಮ ದಿನ.

ವೃಷಭ ರಾಶಿ : ಈ ರಾಶಿಯರಿಗೆ ಶತ್ರುಗಳಿಂದ ಆಪತ್ತು ಜಾಗರೂಕರಾಗಿರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇಂದು ನೀವು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತೀರಿ. ಹಣಕಾಸಿನ ನಷ್ಟ.

ಮಿಥುನ ರಾಶಿ : ಇಂದು ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಾಧ್ಯ. ಮನೆಗೆ ಅತಿಥಿಗಳ ಆಗಮನ. ಕೆಲಸ ಕಾರ್ಯಗಳಲ್ಲಿ ಜಯ. ಕುಟುಂಬದಲ್ಲಿ ಕೆಲವು ಹೊಸ ಕೆಲಸಗಳು ಪ್ರಾರಂಭವಾಗುತ್ತವೆ

ಕಟಕ ರಾಶಿ : ಇಂದು ನಿಮ್ಮ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಲಾಭದ ಸಾಧ್ಯತೆ. ಆಸ್ತಿ ವಿವಾದಗಳು ಕೊನೆಗೊಳ್ಳುತ್ತದೆ. ಸಂಗಾತಿಯೊಂದಿಗೆ ಸಂತಸದ ಕಾಲ ಕಳೆಯುತ್ತೀರಿ.

ಸಿಂಹ ರಾಶಿ : ಇಂದು ಈ ರಾಶಿಯವರು ಎಲ್ಲಾ ಕಾರ್ಯದಲ್ಲಿ ಏರಿಳಿತ ಕಾಣಲಿದ್ದೀರಿ. ಎಚ್ಚರಿಕೆಯಿಂದ ಯೋಚಿಸಿದ ನಂತರ ನಿರ್ಧರಿಸಬೇಕು. ಕುಟುಂಬದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಂಡುಬರುತ್ತವೆ.

ಕನ್ಯಾರಾಶಿ : ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಉತ್ತಮವಾಗಿರುತ್ತದೆ, ವಿದ್ಯಾರ್ಥಿಗಳಿಗೆ ಮುನ್ನಡೆ. ಗುರು – ಹಿರಿಯರ ಆಶೀರ್ವಾದ ನಿಮ್ಮ ಮೇಲಿರಲಿದೆ. ನೀವು ಹಳೆಯ ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ.

ತುಲಾ ರಾಶಿ : ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಿರಲಿದೆ. ಜನರನ್ನು ನಿಮ್ಮ ನಡವಳಿಕೆಯಿಂದ ಆಕರ್ಷಿಸುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ : ಇಂದು ಈ ರಾಶಿಯವರು ಸಾಮಾಜಿಕ ಮತ್ತು ಕೌಟುಂಬಿಕ ಕ್ಷೇತ್ರದಲ್ಲಿ ಗೌರವವನ್ನು ಪಡೆಯುತ್ತೀರಿ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಮೇಲೆರಲಿದೆ.

ಧನು ರಾಶಿ : ಈ ರಾಶಿಯವರು ಇಂದು ಮಾನಸಿಕವಾಗಿ ತೊಂದರೆಗೊಳಗಾಗುತ್ತೀರಿ. ವ್ಯಾಪಾರಸ್ಥರಿಗೆ ಉತ್ತಮ ದಿನ. ಕೆಲಸದ ಸ್ಥಳಗಳಲ್ಲಿ ಮನ್ನಣೆ ದೊರೆಯಲಿದೆ. ಸಾಮಾನ್ಯ ದಿನವಾಗಿದೆ.

ಮಕರ ರಾಶಿ : ಇಂದು ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಬೇಕು. ನೀವು ಕೆಲವು ಪಿತೂರಿಗೆ ಬಲಿಯಾಗಬಹುದು. ಇಂದು ನೀವು ವ್ಯವಹಾರದಲ್ಲಿ ಯಾವುದೇ ಒಪ್ಪಂದಗಳನ್ನು ಮಾಡಬಾರದು. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ.

ಕುಂಭ ರಾಶಿ : ಈ ರಾಶಿಯವರು ಇಂದು ಹೆಚ್ಚು ಲಾಭವನ್ನು ಪಡೆಯುತ್ತಾರೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ವಾಹನ ಖರೀದಿಸುವ ಯೋಚನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭದ ಸಾಧ್ಯತೆ.

ಮೀನಾ ರಾಶಿ : ಇಂದು ನಿಮ್ಮ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಸಿಗಲಿದೆ. ನಿಮ್ಮ ತಂಡದ ಕೆಲಸಕ್ಕೆ ಸಂಪೂರ್ಣ ಬೆಂಬಲ ದೊರೆಯುತ್ತದೆ. ಮನೆಯಲ್ಲಿ ನಿಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.

Leave a Comment

Leave a Reply

Your email address will not be published. Required fields are marked *

error: Content is protected !!