ಜಮ್ಮು-ಕಾಶ್ಮೀರದಲ್ಲಿ ಉಗ್ರರಿಂದ ಇಬ್ಬರು ಯೋಧರ ಅಪಹರಣ: ಶೋಧಕ್ಕೆ ಮುಂದಾದ ಸೈನ್ಯ
ನ್ಯೂಸ್ ಆ್ಯರೋ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಟೆರಿಟೋರಿಯಲ್ ಆರ್ಮಿಯ ಯೋಧರೊಬ್ಬರನ್ನು ಭಯೋತ್ಪಾದಕರು ಅಪರಹರಣ ಮಾಡಿರುವ ಕುರಿತು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ, ಅನಂತನಾಗ್‌ನ ಅರಣ್ಯ ಪ್ರದೇಶದಿಂದ ಇಬ್ಬರು ಟಿಎ ಸೈನಿಕರನ್ನು ಅಪಹರಿಸಲಾಗಿತ್ತು. ಈ ಅಪಹರಣ ಸಂದರ್ಭದಲ್ಲಿ ಓರ್ವ ಯೋಧ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಪಹರಣಕ್ಕೆ ಒಳಗಾಗಿರುವ ಮತ್ತೊಬ್ಬ ಯೋಧನಿಗಾಗಿ ಭದ್ರತಾ ಪಡೆಗಳು ಹುಟುಕಾಟ ಪ್ರಾರಂಭಿಸಿವೆ ಎಂದು ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಅರಣ್ಯ ಪ್ರದೇಶದಲ್ಲಿ ಟೆರಿಟೋರಿಯಲ್ ಆರ್ಮಿಯ ಇಬ್ಬರು ಯೋಧರನ್ನು ಅಪಹರಣ ಮಾಡಲು ಭಯೋತ್ಪದಾಕರು ಪ್ರಯತ್ನಿಸಿದ್ದಾರೆ. ಈ ವೇಳೆ, ಓರ್ವ ಯೋಧ ಸುರಕ್ಷಿತವಾಗಿ ವಾಪಸ್ ಬರುವಲ್ಲಿ ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿರುವ ಯೋಧನಿಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
ಅಪಹರಣಕ್ಕೊಳಗಾದ ಟಿಎ ಯೋಧನನ್ನು ಅನಂತನಾಗ್ ಜಿಲ್ಲೆಯ ಮುಕ್ದಂಪೋರಾ ನೌಗಾಮ್ ನಿವಾಸಿ ಹಿಲಾಲ್ ಅಹ್ಮದ್ ಭಟ್ 162 ಯುನಿಟ್ ಟಿಎ ಎಂದು ಗುರುತಿಸಲಾಗಿದೆ. ಸುರಕ್ಷಿತವಾಗಿ ವಾಪಸ್ ಬಂದ ಯೋಧನನ್ನು ಫಯಾಜ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ. ತಪ್ಪಿಸಿಕೊಳ್ಳುವಾಗ ಯೋಧನ ಭುಜ ಮತ್ತು ಎಡ ಕಾಲಿಗೆ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಶ್ರೀನಗರದ 92 ಮೂಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
Leave a Comment