ಮಕ್ಕಳಿಗೆ ಬಿಸ್ಕತ್ತು ಕೊಡುವ ಮುನ್ನ ಎಚ್ಚರ: ಬೌರ್ಬನ್ ಬಿಸ್ಕತ್ತಿನಲ್ಲಿ ಕಬ್ಬಿಣದ ತಂತಿ ಪತ್ತೆ

Iron Wire in Bourbon Biscuit
Spread the love

ನ್ಯೂಸ್ ಆ್ಯರೋ: ಬ್ರಿಟಾನಿಯಾ ಬೌರ್ಬನ್ ಬಿಸ್ಕತ್‌ನೊಳಗೆ ತೆಳುವಾದ ಕಬ್ಬಿಣದ ತಂತಿಯೊಂದು ಕಂಡು ಬಂದಿರುವ ಆಘಾತಕಾರಿ ಘಟನೆ ತೆಲಂಗಾಣದ ಕಾಮರೆಡ್ಡಿಯ ಹಳ್ಳಿಯೊಂದರಲ್ಲಿ ನಡೆದಿದೆ.

ಈ ಘಟನೆಯನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಿಸ್ಕೆಟ್‌ನಲ್ಲಿ ತೆಳುವಾದ ತಂತಿಯೊಂದಿರುವುದು ವಿಡಿಯೋದಲ್ಲಿ ಕಾಣಬಹುದು. ಕಾಮರೆಡ್ಡಿ ಜಿಲ್ಲೆಯ ದೇವುನಿಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಹನುಮಾನ್ ರೆಡ್ಡಿ ಎಂದು ಗುರುತಿಸಲಾಗಿದೆ.

ತಾನು ಸ್ಥಳೀಯ ಅಂಗಡಿಯೊಂದರಿಂದ ಮಕ್ಕಳಿಗಾಗಿ ಬೌರ್ಬನ್ ಬಿಸ್ಕತ್ತು ಖರೀದಿಸಿ ತಂದಿದೆ. ಆದರೆ ಮಕ್ಕಳು ತಿನ್ನುವಾಗ ಬಿಸ್ಕತ್ತಿನಲ್ಲಿ ತೆಳುವಾದ ಕಬ್ಬಿಣದ ತಂತಿಯೊಂದು ಇರುವುದು ಕಂಡುಬಂದಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಆಘಾತಕ್ಕೊಳಗಾದ ವ್ಯಕ್ತಿ, ತಕ್ಷಣವೇ ಅದನ್ನು ವೀಡಿಯೊ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಬಿಸ್ಕತ್ತುಗಳು ಮತ್ತು ಚಾಕೊಲೇಟ್‌ಗಳಂತಹ ಉತ್ಪನ್ನಗಳನ್ನು ಮಕ್ಕಳು ದೊಡ್ಡ ಪ್ರಮಾಣದಲ್ಲಿ ಸೇವಿಸುತ್ತಾರೆ ಮತ್ತು ಈ ಉತ್ಪನ್ನಗಳಲ್ಲಿ ಆಹಾರ ಸುರಕ್ಷತೆಯನ್ನು ಕಾಳಜಿ ವಹಿಸಬೇಕು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!