Twitter Vs BlueSky : ಆ್ಯಪ್ ಗಳ ನಡುವಿನ ಮೇಲಾಟದಲ್ಲಿ ಗೆಲ್ಲೋರು ಯಾರು? – ಎಲಾನ್ ಮಸ್ಕ್ ವಿರುದ್ಧ ಕಣಕ್ಕಿಳಿದ ಜ್ಯಾಕ್ ಡಾರ್ಸೆ..!!

Twitter Vs BlueSky : ಆ್ಯಪ್ ಗಳ ನಡುವಿನ ಮೇಲಾಟದಲ್ಲಿ ಗೆಲ್ಲೋರು ಯಾರು? – ಎಲಾನ್ ಮಸ್ಕ್ ವಿರುದ್ಧ ಕಣಕ್ಕಿಳಿದ ಜ್ಯಾಕ್ ಡಾರ್ಸೆ..!!

ನ್ಯೂಸ್ ಆ್ಯರೋ‌ : ಟ್ವಿಟರ್‌ನ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಅವರು ಟ್ವಿಟರ್‌ಗೆ ಪರ್ಯಾಯವಾದ ‘ಬ್ಲೂಸ್ಕೈ'(Bluesky) ಸೋಶಿಯಲ್ ಮೀಡಿಯಾ ವೇದಿಕೆಯನ್ನು ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ಅನಾವರಣಗೊಳಿಸಿದ್ದಾರೆ.

ಎಲಾನ್ ಮಸ್ಕ್ ಅವರು ಟ್ವಿಟರ್ ಸಂಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರ ಟ್ವಿಟರ್‌ನ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಅವರು ಟ್ವಿಟರ್‌ಗೆ ಪರ್ಯಾಯವಾಗಿ ತಮ್ಮ ಹೊಸ ಬ್ಲೂಸ್ಕೈ ಅಪ್ಲಿಕೇಶನನ್ನು ಬಳಕೆದಾರರಿಗೆ ಪರಿಚಯಿಸಿದ್ದರು.

ಸದ್ಯಕ್ಕೆ ಆಂಡ್ರಾಯ್ಡ್‌ ವರ್ಷನ್‌ ಮಾತ್ರ ಲಾಂಚ್‌ ಮಾಡಲಾಗಿದ್ದು, ಭವಿಷ್ಯದಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನ ನೀಡಲಿದೆ. ಜೊತೆಗೆ ಕ್ರಿಯೇಟರ್‌ಗಳಿಗೆ ಈ ಪ್ಲಾಟ್‌ಫಾರ್ಮ್‌ ಸ್ವಾತಂತ್ರ್ಯ ನೀಡಲಿದೆ ಅಂತ ಕಂಪನಿ ತಿಳಿಸಿದೆ.

ಅಂದ್ಹಾಗೆ ಬ್ಲ್ಯೂಸ್ಕೈ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಇನ್ವೈಟ್‌ ಕೋಡ್‌ ಬಳಸಿ ಮಾತ್ರ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎನ್ನಲಾಗಿದೆ. ಇನ್ನು ಟ್ವಿಟರ್‌ ರೀತಿಯ ಈ ನೂತನ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗೆ ಬೇಡಿಕೆ ಹೆಚ್ಚಾಗ್ತಿದ್ದು, ಈಗಾಗಲೇ 20 ಸಾವಿರ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ.

ನ್ಯೂಯಾರ್ಕ್‌ ಪೋಸ್ಟ್‌ ವರದಿಯು ತಿಳಿಸಿರುವಂತೆ, ಎಲಾನ್ ಮಸ್ಕ್ ಅವರ ಮೈಕ್ರೋಬ್ಲಾಗಿಂಗ್ ವೇದಿಕೆಯ ರೀತಿಯಲ್ಲೇ ಇರುವ ಹೊಸ ಅಪ್ಲಿಕೇಶನ್‌ ಆದ ‘ಬ್ಲೂಸ್ಕೈ’ ಆಂಡ್ರಾಯ್ಡ್ ಮಾದರಿಯಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದೆ. ಆದರೆ, ‘ಬ್ಲೂಸ್ಕೈ’ಅಪ್ಲಿಕೇಶನ್ ವೆಬ್‌ಸೈಟ್ ಪ್ರಕಾರ, ಭವಿಷ್ಯದ “ಸೋಷಿಯಲ್ ಇಂಟರ್ನೆಟ್” ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ಮತ್ತು ಕ್ರಿಯೇಟರ್‌ಗಳಿಗೆ ಪ್ಲಾಟ್‌ಫಾರ್ಮ್‌ಗಳಿಂದ ಸ್ವಾತಂತ್ರ್ಯ” ನೀಡುತ್ತೇವೆ. ಆದಾಗ್ಯೂ, ಅಪ್ಲಿಕೇಶನ್ ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಕಾರಣ, ಇನ್ವೈಟ್ ಕೋಡ್‌ ಬಳಸಿ ಮಾತ್ರವೇ ಈ ಆಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಇಷ್ಟೇ ಅಲ್ಲದೇ, “ನಾವು ಎಟಿ ಪ್ರೋಟೋಕಾಲ್ ನಿರ್ಮಿಸುತ್ತಿದ್ದೇವೆ ಮತ್ತು ಬಳಕೆದಾರರಿಗೆ ಅವರ ಅನುಭವದಲ್ಲಿ ಆಯ್ಕೆಯನ್ನು ನೀಡುತ್ತೇವೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದೆ.

ಟೆಕ್‌ಕ್ರಂಚ್ ಪ್ರಕಟಿಸಿರುವ ಮತ್ತೊಂದು ಮಾಹಿತಿ ಪ್ರಕಾರ ‘ಬ್ಲೂಸ್ಕೈ’ ಸೋಶಿಯಲ್ ಮೀಡಿಯಾ ವೇದಿಕೆಯು ಟ್ವಿಟರ್‌ನಲ್ಲಿ ಲಭ್ಯವಿರುವವಂತೆ ಲೈಕ್‌ಗಳು ಅಥವಾ ಬುಕ್‌ಮಾರ್ಕ್‌ಗಳು, ಟ್ವೀಟ್ ಎಡಿಟ್, ಕೋಟ್‌ ಟ್ವೀಟ್, ಡೈರೆಕ್ಟ್‌ ಮೆಸೇಜ್‌, ಹ್ಯಾಶ್‌ಟ್ಯಾಗ್‌ ಬಳಸುವ ಮೂಲಭೂತ ವೈಶಿಷ್ಟ್ಯಗಳನ್ನು ಆರಂಭದಲ್ಲಿ ಹೊಂದಿರುವುದಿಲ್ಲ ಎಂದು ಹೇಳಿದೆ.

ಇಷ್ಟೇ ಅಲ್ಲದೇ, ಈ ಅಪ್ಲಿಕೇಶನ್‌ಗೆ ಬೇಡಿಕೆ ಹೆಚ್ಚುತ್ತಿದೆ ಮತ್ತು ಪ್ರಸ್ತುತ 20,000 ಸಕ್ರಿಯ ಬಳಕೆದಾರರನ್ನು ಹೊಂದಿರುವುದಾಗಿ ತಿಳಿಸಿದೆ. ಇನ್ನು ನಾವೆಲ್ಲರೂ ತಿಳಿದಿರುವಂತೆ, ಜ್ಯಾಕ್ ಡಾರ್ಸೆ ಅವರು ಟ್ವಿಟರ್‌ನಿಂದ ಹಣಕಾಸು ಸೇವೆಯನ್ನು ಬಳಸಿಕೊಂಡು ಅವರು 2019 ರಲ್ಲೇ ಬ್ಲೂಸ್ಕಿಯನ್ನು ಸೈಡ್ ಪ್ರಾಜೆಕ್ಟ್ ಆಗಿ ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದರು. ಸದ್ಯ ಈ ಆ್ಯಪ್ ಟ್ವಿಟರ್ ಗೆ ಸೆಡ್ಡು ಹೊಡೆಯುವ ಹಂತಕ್ಕೆ ಬಂದು ತಲುಪಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *